ಲೋಕಲ್ ಸುದ್ದಿ

ಸಚಿವ ಅಶ್ವತ್ ನಾರಾಯಣ್ ಹೇಳಿಕೆಗೆ ಮಹಬೂಬ್ ಭಾಷಾ ಖಂಡೆನ

ದಾವಣಗೆರೆ :ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕುರಿತು ಸಚಿವ ಅಶ್ವತ್ ನಾರಾಯಣ್ ನೀಡಿರುವ ಹೇಳಿಕೆ ಖಂಡನೀಯ, ಎಂದು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ತ್ರಿವಗಿ ಖಂಡಿಸಿದರೆ, ಹಾಸನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರಸಭೆಯಲ್ಲಿ ಸಚಿವರದ ಅಶ್ವತ್ನಾರಾಯಣ್ರವರು, ಮಾಜಿ ಮುಖ್ಯಮಂತ್ರಿ, ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರನ್ನು ಟಿಪ್ಪುವಿನ ಹಾಗೆ ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡಿರುವ ಬಗ್ಗೆ, ಮಹಬೂಬ್ ಭಾಷಾ ಆಕ್ರೋಶ ವ್ಯಕ್ತಪಡಿಸಿದ್ದು, ತಾಕತ್ತಿದ್ರೆ ಸಿದ್ದರಾಮಯ್ಯ ಅವರನ್ನು ಮುಟ್ಟಿ ನೋಡಿ ಎಂದು ಎಚ್ಚರಿಕೆ ನೀಡಿದ್ದಾರೆ, ಬಿಜೆಪಿ ಪಕ್ಷದ ಚುನಾವಣೆ ಅವಸ್ಥೆಯಲ್ಲಿ ಕೋಮುಗಲಭೆ ಪ್ರೋತ್ಸಾಹ ನೀಡಿ ನೀಡುತ್ತಿದ್ದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರಿಗೆ ಏನಾದರೂ ತೊಂದರೆ ಆದರೆ ಪರಿಸ್ಥಿತಿ ಚೆನ್ನಾಗಿರುವುದಿಲ್ಲ ಎಂದಿರುವವರು, ಡಾಕ್ಟರ್ ಅಶ್ವಥ್ ನಾರಾಯಣ್ ಒಬ್ಬ ಬೇಜವಾಬ್ದಾರಿ ಸಚಿವರಾಗಿದ್ದಾರೆ, ಮೊದಲು ರಾಜ್ಯದ ಅಭಿವೃದ್ದಿ ಬಗ್ಗೆ ಮಾತಾಡಲಿ, ಇಡೀ ರಾಜ್ಯವನ್ನು ಲೂಟಿ ಮಾಡಿದ್ದಾರೆ 40% ಹಗರಣ ಹಗರಣಗಳ ವಿಚಾರವನ್ನು ವಿಷಯಾಂತರ ಮಾಡಿ, ಮುಂದಿನ ಚುನಾವಣೆಯಲ್ಲಿ ಸೋಲುತ್ತೇವೆ ಎನ್ನುವ ಭಯದಿಂದ ಕೋಮುಗಲಭೆ ಸೃಷ್ಟಿಸಿ ಜನರನ್ನು ಭಯ ಪಡಿಸುತ್ತಾರೆ ಎಂದು ಅವರು ಆರೋಪಿಯಾಗಿದ್ದಾರೆ, ಈ ರೀತಿ ಹೇಳಿಕೆ ಕೋಮುಗಲಭೆ ಸೃಷ್ಟಿಸುವುದರಿಂದ ಗೆಲ್ಲುತ್ತೇವೆ ಎನ್ನುವ ಭ್ರಮೆಯಲ್ಲಿ ಬಿಜೆಪಿ ನಾಯಕರಿದ್ದಾರೆ, ಇದರ ವಿರುದ್ಧ ಹೋರಾಟ ನಡೆಸಲಾಗುವುದು ಒಬ್ಬ ಹಿಂದುಳಿದ ನಾಯಕನ ಹೇಳಿಗಳನ್ನು ಸಹಿಸಿದ ಬಿಜೆಪಿಯವರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಇದರ ಬಗ್ಗೆ ಸರ್ಕಾರ ಮೌನ ವಹಿಸಿರುವುದು ದುರಾದೃಷ್ಟಕರ ಎಂದು, ಮಹಬೂಬ್ ಭಾಷಾ ಅಕ್ರೋಶ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!