ಮಾಯಕೊಂಡ ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಲೋಕಿಕೆರೆ ಹೋಬಳಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ

ಮಾಯಕೊಂಡ ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಲೋಕಿಕೆರೆ ಹೋಬಳಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ

ದಾವಣಗೆರೆ: ಮಾಯಾಕೊಂಡ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಪರ ಬಿರುಸಿನ ಪ್ರಚಾರ ಹಮ್ಮಿಕೊಳ್ಳಲಾಗಿತ್ತು.

ಲೋಕಿ ಕೆರೆ ಸೇರಿದಂತೆ ಹೋಬಳಿಯ ಮಳಲ್ಕೆರೆ, ಕೋಡಿಹಳ್ಳಿ,ಕಾಶಿಪುರ,ಅತ್ತಿಗೆರೆ,ಶ್ಯಾಗಲೆ,ಮತ್ತಿ, ತ್ಯಾವಣಿಗೆ,ಹೂವಿನ ಮಡು,ಬೆಳಲಗೆರೆ ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು, ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕಳೆದ ಬಾರಿ ಬಿಜೆಪಿ ಲಿಂಗಣ್ಣ ನವರಿಗಿಂಥ ಕಡಿಮೆ ಅಂತರದ ಸೋಲು ಕಂಡ ಬಸವಂತಪ್ಪ ನಂತರದಲ್ಲಿ ಸತತ ಐದು ವರ್ಷಗಳ ಕಾಲ ಕ್ಷೇತ್ರದಲ್ಲಿ ಜನರ ನಡುವೆ ನಿರಂತರ ಸಂಪರ್ಕ ದಲ್ಲಿದ್ದು ಕೊವಿಡ್ ಸಂಕಷ್ಟ ದಲ್ಲೂ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದ ಲಾಕ್ ಡೌನ್ ನಿಂದ ರೈತರು ಮಾರಾಟ ಮಾಡಲು ಆಗದೆ ಹೊಲದಲ್ಲಿ ಬೆಳೆದ ಟೊಮೆಟೊ, ಹೂಕೋಸು, ಮೆಣಸಿನಕಾಯಿ, ಸೊಪ್ಪು ತರಕಾರಿಗಳ ತಾವೇ ಖರೀದಿಸಿ ಸಂಕಷ್ಟ ದಲ್ಲಿರುವ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಉಚಿತ ವಾಗಿ ಅಕ್ಕಿ ತರಕಾರಿಗಳ ಹಂಚಿ ಹಸಿವು ನೀಗಿಸುವ ನಿಟ್ಟಿನಲ್ಲಿ ಶ್ರಮಿಸಿದ ಕಾರ್ಯ ವನ್ನ ಜನರು ಕೊಂಡಾಡುತ್ತಿದ್ದರು.

ಮಾಯಕೊಂಡ ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಲೋಕಿಕೆರೆ ಹೋಬಳಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ

ಗೃಹ ಬಳಕೆ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಡೀಸೆಲ್ ದರ ಏರಿಕೆಗೆ ಜನ ತತ್ತರಿಸಿ ಹೋಗಿದ್ದಾರೆ, ರೈತರ ಪಾಲೀನ ರಸಗೊಬ್ಬರ ಕೈಗೆಟುಕುವ ಸ್ಥಿತಿಯಲ್ಲಿಲ್ಲ. ಜನಸಾಮಾನ್ಯರ ಬದುಕು ಅತಂತ್ರ ಗೊಂಡಿದೆ, ಕಾಂಗ್ರೆಸ್ ಅವಧಿಯಲ್ಲಿ ಬಡ ಜನರ ಅಭಿವೃದ್ಧಿಗಾಗಿ ಸಾಕಷ್ಟು ಜನಪರ ಕಾಳಜಿಯ ಕಾರ್ಯ ಕ್ರಮ ಶ್ಲಾಘನೀಯ.
ಮಹಿಳೆಯರಿಗೆ 2ಸಾ.ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿ 200 ಯುನಿಟ್ ವಿದ್ಯುತ್ ಉಚಿತ ರೈತರ ರಸಗೊಬ್ಬರ ಮೇಲಿನ ತೆರಿಗೆ ಕಡಿತ ಹಲವು ಪ್ರಗತಿಪರ ಕಾರ್ಯಗಳ ಬಗ್ಗೆ ಭರವಸೆ ನೀಡಿರುವ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಪ್ರಾಮಾಣಿಕ ವ್ಯಕ್ತಿ ತಮಗೆ ಮತ ನೀಡುವಂತೆ ಬಸವಂತಪ್ಪ ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ,ಟಿ ಹನುಮಂತಪ್ಪ,ತ್ಯಾವಣಿಗೆ ಹಾಲಪ್ಪ,ಬೆಳಲಗೆರೆ ಹನುಮಂತಪ್ಪ, ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಪಿ ಟಿ ಹನುಮಂತಪ್ಪ, ಎಸ್ ಎಸ್ ರವಿಕುಮಾರ್, ಮಳಲ್ಕೆರೆ ಕೃಷ್ಣಪ್ಪ,ಅತ್ತಿಗೆರೆ ಮಹಾದೇವಪ್ಪ, ಶ್ಯಾಗಲೆ ಸತೀಶ್, ಹನುಮಂತಪ್ಪ, ಲೋಕಿ ಕೆರೆ ಪ್ರದೀಪ್, ಪರಸ್ಪರ ನಾಗಪ್ಪ,ಪಿ ಅಂಜಿನಪ್ಪ, ತಿಪ್ಪೇಶ್ ಟಿ ಬಿ ಮೂರ್ತಿ ಸೇರಿದಂತೆ ಹಲವು ಮುಖಂಡರು ಮಹಿಳಾ ಕಾರ್ಯಕರ್ತರು ಬಸವಂತಪ್ಪ ಪರ ಮತ ಯಾಚಿಸಿದರು.

Leave a Reply

Your email address will not be published. Required fields are marked *

error: Content is protected !!