ದಾವಣಗೆರೆ, ಆ.26: ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ವತಿಯಿಂದ ಮಾಧ್ಯಮ ದಿನಾಚರಣೆ (Media Day), ಮಾಧ್ಯಮ (media) ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಗಸ್ಟ್ 27ರ ಬೆಳಿಗ್ಗೆ 11 ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕೂಟದ ಅಧ್ಯಕ್ಷರಾದ ಕೆ.ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಸಿ. ವರದರಾಜ್, ಖಜಾಂಚಿ ಮಧು ನಾಗರಾಜ್ ಕುಂದುವಾಡ ತಿಳಿಸಿದ್ದಾರೆ.
ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡುವರು.
ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ. ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಶಿವಕುಮರ ಕಣಸೋಗಿ ಡಿ.ವಿ. ಗುಂಡಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವರು.
ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರು : ಕನ್ನಡ ಭಾರತಿ ಪತ್ರಿಕೆ ಸಂಪಾದಕ ಮಲ್ಲಿಕಾರ್ಜುನ ಕಬ್ಬೂರು, ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ.ನವೀನ್, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ವಾರ್ತಾ ವಿಹಾರ ತತ್ವ ಸಂಪಾದಕ ಎಂ.ವೈ. ಸತೀಶ್, ದಾವಣಗೆರೆ ಕನ್ನಡಿಗ ಸಂಪಾದಕ ಆರ್.ರವಿ, ಜನತಾ ವಾಣಿ ಹಿರಿಯ ವರದಿಗಾರ ಎಸ್.ಎ. ಶ್ರೀನಿವಾಸ್, ಸುವರ್ಣ ಟಿವಿ ಕ್ಯಾಮೆರಾ ಮ್ಯಾನ್ ಕಿರಣ್ ಕುಮಾರ್, ನ್ಯೂಸ್ 18 ಕನ್ನಡ ವಾಹಿನಿ ಜಿಲ್ಲಾ ವರದಿಗಾರ ಎ.ಸಿ. ಸಂಜಯ್, ರಾಜ್ ನ್ಯೂಸ್ ವರದಿಗಾರ ರಾಮ್ ಪ್ರಸಾದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರತಿಭಾ ಪುರಸ್ಕೃತರು : ಜೆ. ಆದರ್ಶ (ಡಾ. ಕೆ. ಜೈಮುನಿ, ಜೆ. ಸುಶೀಲಾ), ಎಂ. ಭೂಮಿಕ, ಎಂ. ಸ್ಪಂದನ (ಪಿ. ಮಂಜುನಾಥ ಕಾಡಜ್ಜಿ, ಸುನಂದ), ಆರ್. ದೀಪಿಕಾ (ಆರ್. ರವಿಬಾಬು, ಜಿ.ವಿ. ನಾಗರತ್ನ), ಟಿ.ಎಸ್. ಧನುಷ್, ಟಿ.ಎಸ್. ಮನೋಜ್ (ಟಿ.ಜಿ. ಶಿವಮೂರ್ತಿ, ಕೆ.ಎಸ್.ಕುಸುಮಾ), ಯು. ಲಾವಣ್ಯ (ಕೆ. ಉಮೇಶ್, ಶೋಭಾ), ಇ. ಪ್ರತೀಕ್ಷಾ (ಕೆ. ಏಕಾಂತಪ್ಪ, ಪದ್ಮ ಏಕಾಂತಪ್ಪ), ಎಸ್. ತನುಶ್ರೀ (ಆರ್. ಶಿವಕುಮಾರ್, ಎಸ್. ರೇಖಾ), ಪ್ರಣವ್ ಜಹಗೀರದಾರ್ ( ರಮೇಶ್ ಜಹಗೀರದಾರ್, ವಾಣಿ) ಅವರುಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು.
