ಮೇಕೆದಾಟು: ಜೀವ ಇದ್ದರಲ್ವೇ ನೀರು ವಚನಾನಂದ ಶ್ರೀ ಪ್ರಶ್ನೆ

ದಾವಣಗೆರೆ: ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್‌ನಿಂದ ನಡೆಸಲಾಗುತ್ತಿರುವ ಪಾದಯಾತ್ರೆ ಹಿನ್ನಲೆ ಡಿಕೆ ಶಿವಕುಮಾರ್ ಅವರು ಕೂಡ ಬೆಂಗಳೂರಿನಲ್ಲಿ ನಮ್ಮ ಬಳಿ ಬಂದಿದ್ದರು, ಅವರ ಹೋರಾಟದ ಉದ್ದೇಶ ಚೆನ್ನಾಗಿದೆ. ಅದರ ಜೊತೆಗೆ ಕೋವಿಡ್ ನಿಯಮಾವಳಿ ಪಾಲನೆ ಮಾಡಬೇಕಿದೆ. ಜೀವ ಇದ್ದರೆ ಮಾತ್ರ ಅಲ್ವ ನೀರು ಕುಡಿಯುವುದು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ನಮಗೆ ಕರೆ ಮಾಡಿದ್ದರು. ಅವರಿಗೆ ಬೆಳವಡಿ ಮಲ್ಲಮ್ಮ, ಕೆಳದಿ ರಾಣಿ ಚನ್ನಮ್ಮ. ಕಿತ್ತೂರು ರಾಣಿ ಚನ್ನಮ್ಮ ನವರ ಬಗ್ಗೆ ನಾವು ತಿಳಿಸಿದೆವು. ಆಗ ಪಾರ್ಲಿಮೆಂಟ್ ಮುಂದೆ ಕಿತ್ತೂರು ರಾಣಿ ಚನ್ನಮ್ಮನವರ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು ಎಂದು ಇದೇ ವೇಳೆ ಹೇಳಿದರು.