ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಎಂ ಆರ್ ಐ ಸ್ಕ್ಯಾನಿಂಗ್ ಅಳವಡಿಸಲು ಡಿಸಿ ಗೆ ಸೂಚಿಸಿದ ಸಚಿವ

ದಾವಣಗೆರೆ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಬಣ ದಾವಣಗೆರೆ ಜಿಲ್ಲಾ ಯುವ ಘಟಕ ಹೋರಾಟಕ್ಕೆ ಸಿಕ್ಕ ಜಯ ೨ ವರ್ಷದಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಎಂ ಆರ್ ಐ ಸ್ಕ್ಯಾನಿಂಗ್ ಇಲ್ಲವೆಂದು ಪ್ರತಿಭಟಿಸಿ ಮನವಿ ನೀಡಲಾಗಿತ್ತು. ಇಂದು ದಾವಣಗೆರೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜು ಅವರಿಗೆ ಮನವಿಯನ್ನು ನೀಡಿ ಎಂ ಆರ್ ಐ ಸ್ಕ್ಯಾನಿಂಗ್ ಯಂತ್ರ ಇಲ್ಲದಿರುವುದರಿಂದ ಬಡ ರೋಗಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ವಿವರಿಸಿದೆ. ತಕ್ಷಣ ಸ್ಪಂದಿಸಿ ಅತಿ ಶೀಘ್ರದಲ್ಲೇ ಯಂತ್ರವನ್ನು ಅಳವಡಿಸಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದರು

Leave a Reply

Your email address will not be published. Required fields are marked *

error: Content is protected !!