ಚಾಲಕನ ನಿದ್ದೆ‌ ಮಂಪರಿಗೆ 18 ರಿಂದ 23 ವಯೋಮಾನದ ಏಳು ಯುವಕರ ಸಾವು.! ಸಾವನ್ನಪ್ಪಿದವರ ಮಾಹಿತಿ ಲಭ್ಯ

ದಾವಣಗೆರೆ: (ಜಗಳೂರು) ಇಂದು ಜಗಳೂರು ತಾಲೂಕು ಕಾನನಕಟ್ಟೆ ಟೋಲ್ (NH 13) ಬಳಿ ಇಂಡಿಕಾ ಕಾರು ಅಪಘಾತವಾಗಿದೆ. ಬೆಂಗಳೂರಿನಿಂದ ಹೊಸಪೇಟೆ ಕಡೆಗೆ ತೆರಳುತ್ತಿದ್ದ ಕಾರಿನಲ್ಲಿದ್ದ 7 ಮಂದಿ ಸಾವನ್ನಪ್ಪಿದ್ದಾರೆ.ಚಾಲಕ ನಿದ್ರೆಗೆ ಜಾರಿದ  (ಸ್ವಯಂ ಅಪಘಾತ) ಎಂಬುದಾಗಿ ತೋರುತ್ತಿದೆ. ಮೃತರಲ್ಲಿ ನಾಲ್ವರು ಯಾದಗಿರಿ, ಇಬ್ಬರು ವಿಜಯನಗರ, ಒಬ್ಬರು ಬಿಜಾಪುರದವರು ಎಂದು ಗೊತ್ತಾಗಿದೆ. ಮೃತದೇಹಗಳನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.

ಬೆಂಗಳೂರಿನಿಂದ ಹೊಸಪೇಟೆ ಕಡೆಗೆ ತೆರಳುತ್ತಿದ್ದ 7 ಮಂದಿ ಎಲ್ಲರೂ 18 ರಿಂದ 23 ವರ್ಷದೊಳಗಿನವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರ ಹೆಸರುಗಳ ವಿವರ.
1)ಮಲ್ಲಂಗೋವ s/o ಶಾಂತಗೌಡ 22 ವರ್ಷ, r/o ಕರಡಕಲ್ Tq, ಶೋರಾಪುರ ಜಿಲ್ಲೆ ಯಾದಗಿರಿ.

2)ಸಂತೋಷ್ s/o ಚಂದ್ರಯ್ಯ 21 ವರ್ಷ. r/o ಮಾಲ್ಗಟ್ಟಿ tq, ಶೋರಾಪುರ.

3) ಸಂಜೀವ್ s/o ಬಸಪ್ಪ 20 ವರ್ಷ, r/o ಮಾವಿನಮಟ್ಟಿ tq ಶೋರಾಪುರ.

4)ಜೈಭೀಮ್ s/o ಬಾಲದಂಡಪ್ಪ 18 ವರ್ಷ, r/o ಹೂವಿನಹಳ್ಳಿ, tq, ಶೋರಾಪುರ.

5)ರಾಘು s/o ಶಿವಬಸಪ್ಪ 23 ವರ್ಷಗಳು r/o ತಾಳಿಕೋಟಿ ಜಿಲ್ಲೆ. ವಿಜಯಪುರ.

6) ಸಿದ್ದೇಶ್ s/o ನಾಗರಾಜ್ 20 ವರ್ಷ r/o ಕೂಡಲಗಿ ಜಿಲ್ಲೆ.ವಿಜಯನಗರ.

ಮತ್ತು 7)ವೇದಮೂರ್ತಿ s/o ಆನಂದ್ 18 ವರ್ಷಗಳು, r/o ಇಚಲಬೊಮ್ಮನಹಳ್ಳಿ tq ಕೂಡಲಗಿ ಜಿಲ್ಲೆ. ವಿಜಯನಗರ.

ಮೃತದೇಹಗಳನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!