ಯುವತಿ ಕಾಣೆ : ಪತ್ತೆಗೆ ಹದಡಿ ಪೋಲೀಸ್ ಮನವಿ
ದಾವಣಗೆರೆ; ಗೋಪನಾಳು ಗ್ರಾಮದ ವಾಸಿಯಾದ 21 ವರ್ಷ ವಯಸ್ಸಿನ ದಾಕ್ಷಾಯಣಮ್ಮ ಎಂಬ ಯುವತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಲು ಹದಡಿ ಪೋಲೀಸ್, ಠಾಣೆ ಪೋಲೀಸ್ ಉಪನಿರೀಕ್ಷಕರು ಮನವಿ ಮಾಡಿದ್ದಾರೆ.
ಗೋಪನಾಳ್ ಗ್ರಾಮದ ಕರಿಬಸಪ್ಪ ಇವರ ಮಗಳಾದ ದಾಕ್ಷಾಯಣಮ್ಮ ಕೂಲಿ ಕೆಲಸ ಮಾಡಿಕೊಂಡಿದ್ದು, ಮೇ 2023 ರಂದು ಬೆಳಿಗ್ಗೆ 10.30 ಗಂಟೆಗೆ ಗ್ರಾಮದ ಶ್ರೀ ಕೆರೆಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದು, ಬಹಳ ಸಮಯವಾದರೂ ವಾಪಸ್ ಬರದೇ ಇರುವ ಕಾರಣ ದೇವಸ್ಥಾನದ ಹತ್ತಿರ ಹೋಗಿ ನೋಡಿದಾಗ ಇರುವುದಿಲ್ಲ ಹಾಗೂ ಸಂಬಂಧಿಕರ ಮನೆಗೂ ಹೋಗಿರದೇ, ಇಂದಿನವರೆಗೂ ಬಂದಿರುವುದಿಲ್ಲ ಎಂದು ದೂರು ದಾಖಲಾಗಿರುತ್ತದೆ.
ಚೆಹರೆ ವಿವರ; ಬೆಸ್ತರ ಜನಾಂಗ, 5.1 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು ಹಾಗೂ ಎಣ್ಣೆಗೆಂಪು ಬಣ್ಣ ಹೊಂದಿದ್ದು, ಮನೆಯಿಂದ ಹೊರಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಪ್ರೌಢ ಶಿಕ್ಷಣ ವ್ಯಾಸಾಂಗ ಮಾಡಿದ್ದು, ಕನ್ನಡ ಮಾತನಾಡುತ್ತಾರೆ.
ಈ ವ್ಯಕ್ತಿ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ಹದಡಿ ಪೋಲೀಸ್ ಠಾಣೆ ದೂ. ಸಂ-9480803254/08192-218405 ಅಥವಾ ದಾವಣಗೆರೆ ಕಂಟ್ರೋಲ್ ರೂಂ. ದೂ. ಸಂ-08192-253100 ಗೆ ಕರೆಮಾಡಿ ಮಾಹಿತಿ ನೀಡಲು ತಿಳಿಸಲಾಗಿದೆ.