ಹೊನ್ನಾಳಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಹೊನ್ನಾಳಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಹೊನ್ನಾಳಿ: ಸಚಿವ ಅಶ್ವತ್ಥನಾರಾಯಣ ಅವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಕರೆ ನೀಡಲಾಗಿದ್ದ ಹೊನ್ನಾಳಿ ಬಂದ್‌ ಭಾಗಶಃ ಯಶಸ್ವಿಯಾಗಿದೆ.

ಶನಿವಾರ ಕರೆ ನೀಡಿದ್ದ ಹೊನ್ನಾಳಿ ಬಂದ್ ಹಾಗೂ ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಕುರುಬ ಸಮಾಜದ ಮುಖಂಡರೂ ಹಾಗೂ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರೂ ಆದ ಎಚ್.ಬಿ. ಮಂಜಪ್ಪ ಮಾತನಾಡಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡಿದ್ದ ಬಿಜೆಪಿ ಸಚಿವ ಅಶ್ವತ್ಥ ನಾರಾಯಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಅವರ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಬಂಧಿಸಬೇಕು ಎಂದು ಮಂಜಪ್ಪ ಒತ್ತಾಯಿಸಿದರು.

ಕುರುಬ ಸಮಾಜದ ಕಾರ್ಯಾಧ್ಯಕ್ಷ ಧರ್ಮಪ್ಪ, ಕುರುಬ ಸಮಾಜದ ಉಪಾಧ್ಯಕ್ಷ ಕೆ. ಪುಟ್ಟಪ್ಪ, ಮಾಜಿ ಸೈನಿಕ ಎಂ. ವಾಸಪ್ಪ, ಸಮಾಜ ಸೇವಕ ಕತ್ತಿಗೆ ನಾಗರಾಜ್ ಮಾತನಾಡಿದರು. ಎಸ್.ಎಸ್. ಬೀರಪ್ಪ, ಖಜಾಂಚಿ ಎಚ್.ಎ. ನರಸಿಂಹಪ್ಪ, ಉಪಾಧ್ಯಕ್ಷರಾದ ಹರಳಹಳ್ಳಿ ಬೆನಕಪ್ಪ, ಸರಳಿನಮನೆ ರಾಜು, ನಿವೃತ್ತ ಪ್ರಾಂಶುಪಾಲ ನರಸಪ್ಪ, ಬೇವಿನಹಳ್ಳಿ ನಯಾಜ್ ಅಹಮದ್, ಮುಸ್ಲೀಂ ಸಮಾಜದ ಮುಖಂಡ ಚಮನ್, ಸಾಸ್ವೇಹಳ್ಳಿ ನಾಗರಾಜ್, ಎಚ್.ಬಿ. ಅಣ್ಣಪ್ಪ, ಮೂಲೇರ ರೇವಣಸಿದ್ದಪ್ಪ, ದ್ಯಾಮಜ್ಜಿ ಗಿರೀಶ್, ರಾಘು, ಮಾದಪ್ಪ, ತೊಳಕಿ ಮಾದಪ್ಪ, ಮಾಲತೇಶಪ್ಪ, ಎಚ್.ಬಿ. ದೇವರಾಜ್, ಅರಬಗಟ್ಟೆ ಚಿಕ್ಕಪ್ಪ, ನಾಗರಾಜ್‌ ಇದ್ದರು.

Leave a Reply

Your email address will not be published. Required fields are marked *

error: Content is protected !!