ಅನ್ನ, ಅಕ್ಷರ, ಆರೋಗ್ಯ, ಸಾಮಾಜಿಕ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ -ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್

ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್
ದಾವಣಗೆರೆ: ಬಿಜೆಪಿ ಸರ್ಕಾರದ 2023 ರ ಬಜೆಟ್ 3 ಲಕ್ಷ ಕೋಟಿಯ ಮಹತ್ವಾಕಾಂಕ್ಷೆಯ ಬಜೆಟ್ ಆಗಿದೆ.
ಮಾನ್ಯ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಯವರು ಶಿಕ್ಷಣ ಕ್ಷೇತ್ರಕ್ಕೆ 11% ಹಣ ಮೀಸಲಿಟ್ಟಿದ್ದಾರೆ, ಇದು ಹೆಮ್ಮೆಯ ಸಂಗತಿ. ಕರ್ನಾಟಕ ಈಗ 2ನೇ ಅತಿ ದೊಡ್ಡ ಜಿ.ಎಸ್.ಟಿ ಸಂಗ್ರಹವಾಗುವ ರಾಜ್ಯವಾಗಿದೆ. ಇದರ ಅರ್ಥ, ರಾಜ್ಯದಲ್ಲಿ ಹೆಚ್ಚು ಆರ್ಥಿಕ ಚಟುವಟಿಕೆ ನಡೆಯುತ್ತಿದೆ.
ರಾಜ್ಯದಲ್ಲಿ ತಲವಾರು ಆದಾಯ (Per capital income) ಜಾಸ್ತಿಯಾಗಿದೆ. ದೇಶದಲ್ಲೇ ಕರ್ನಾಟಕ ರಾಜ್ಯ FDI ಹೂಡಿಕೆ ತರುವುದರಲ್ಲಿ ನಂ.1 ರಾಜ್ಯವಾಗಿದೆ. ಕರ್ನಾಟಕ ಸ್ಟಾರ್ಡಪ್ ನೀತಿ 2022-2027, ಕರ್ನಾಟಕ ಡೇಟಾ ಸೆಂಟರ್ ನೀತಿ 2022-27, ಕರ್ನಾಟಕ ಸಂಶೋಧನೆ, ಅಭಿವೃಧ್ಧಿ ನೀತಿ ಜಾರಿಗೊಳಿಸಿದಂತೆ, ಜೈವೀಕ ತಂತ್ರಜ್ಞಾನ ನೀತಿ ಯನ್ನು ಜಾರಿಗೆ ತರಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ