ಯತ್ನಾಳ್ ಹಗಲುಗನಸು ಕಾಣುವುದು ನಿಲ್ಲಿಸಲಿ, ವಿಜಯೇಂದ್ರ ದಿಢೀರ್ ನಾಯಕರಾದವರಲ್ಲ: ಎಂಪಿ ರೇಣುಕಾಚಾರ್ಯ
”ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಗೌರವ ಇದೆ. ನಾನು ನಂಬರ್ ಒನ್ ಸ್ಥಾನಕ್ಕೆ ಹೋಗುತ್ತೇನೆ ಎಂದು ಅವರು ಹೇಳಿದ್ದಾರೆ. ಆದರೆ, ಪಕ್ಷದ ನಾಯಕರು ಒಪ್ಪಲಿ. ಸ್ವಯಂ ಘೋಷಿತ ನಾಯಕನಾಗಬೇಡಿ” ಎಂದು ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಹೇಳಿದರು.
”ವಿಜಯೇಂದ್ರ ಅವರನ್ನು ವರಿಷ್ಠರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದರು. ಅವರೇನು ದಿಢೀರ್ ನಾಯಕರಾದವರಲ್ಲ. ಪಕ್ಷದ ಪ್ರತಿ ಹಂತದಲ್ಲಿ ಜವಾಬ್ದಾರಿ ನಿರ್ವಹಿಸಿ ಗುರುತಿಸಿಕೊಂಡವರು. ಸಂಘಟನೆ, ಅವರ ಸಾಮರ್ಥ್ಯವನ್ನು ನೋಡಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರನ್ನು ಟೀಕೆ ಮಾಡಿ ದೊಡ್ಡವರಾಗುತ್ತೇವೆ ಎಂದುಕೊಳ್ಳುವುದು ತಪ್ಪು ಕಲ್ಪನೆ” ಎಂದು ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಟೀಕಿಸಿದರು.
”ಜೆಡಿಎಸ್‌ನಲ್ಲಿ ಇದ್ದಾಗ ನೀವು ಏನೆಲ್ಲ ಮಾಡಿದ್ದೀರಿ ಗೊತ್ತಿದೆ. ವಿಜಯಪುರದಿಂದ ಫೋನ್‌ಗಳು, ಫೋಟೋಗಳು ಬರುತ್ತಿವೆ. ನೀವು ಹಗಲುಗನಸು ಕಾಣುತ್ತಿದ್ದೀರಿ. ಅನಗತ್ಯವಾಗಿ ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಬಗ್ಗೆ ಮಾತನಾಡಬೇಡಿ. ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಿಸಿದವರು ಯಡಿಯೂರಪ್ಪ ಅವರು. ಟೀಕೆಗಳನ್ನು ನಿಲ್ಲಿಸಬೇಕು, ಮನವಿ ಮಾಡುತ್ತೇನೆ” ಎಂದು ರೇಣುಕಾಚಾರ್ಯ ಹೇಳಿದರು.