dasara; ಬೆಣ್ಣೆನಗರಿ ಕನ್ನಿಕಾ ಪರಮೇಶ್ವರಿಗೆ ಪ್ರತಿ ದಿನ ವಿಶೇಷ ಅಲಂಕಾರ
ದಾವಣಗೆರೆ, ಅ.18: dasara; ನಗರದ ಹೊಂಡ ಸರ್ಕಲ್ ನಲ್ಲಿ ಇರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಇತಿಹಾಸ ನೆನೆಸುವ ಮಾದರಿ ಮಾಡಿದ್ದು, ನೋಡುಗರ ಗಮನ ಸೆಳೆಯುತ್ತಿದೆ.
ಆರ್ಯ ವೈಶ್ಯ ಸಮಾಜದ ಆರಾಧ್ಯ ದೇವಿ ಕನ್ನಿಕಾಪರಮೇಶ್ವರಿಯಾಗಿದ್ದು, ನಂಬಿದ ಭಕ್ತರ ಇಷ್ಟಾರ್ಥ ಈಡೇರಿಸುವ ಜಾಗೃತ ದೇವತೆಯಾಗಿದ್ದಾಳೆ. ನಿತ್ಯ ದೇವಿಗೆ ವಿಶೇಷ ಅಲಂಕಾರ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನಡೆಯುತ್ತಿವೆ.
ದಸರಾ ಕಾರ್ಯಕ್ರಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅಧ್ಯಕ್ಷ ಆರ್.ಎಲ್.ಪ್ರಭಾಕರ್ ದೇವಸ್ಥಾನದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಸೇವಾ ಕಾರ್ಯದ ಮೂಲಕ ಕಾಯಾ,ವಾಚಾ ಹಾಗೂ ಮನಸಾ ಶ್ರಮಿಸುತ್ತಿದ್ದಾರೆ.
ಇಷ್ಟಾರ್ಥ ಸಿದ್ಧಿ ಹಾಗೂ ಸಮಸ್ಯೆ ಪರಿಹಾರಕ್ಕಾಗಿ ದೇವಿ ಬಳಿ ಸಾಕಷ್ಟು ಭಕ್ತರು ಬರುತ್ತಿದ್ದಾರೆ. ರುದ್ರಾಭಿಷೇಕ, ಅಲಂಕಾರ ನಡೆಯುತ್ತಿದೆ. ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ.
janata darshana; ಬೆಳವನೂರು ಗ್ರಾಮದಲ್ಲಿ ಅ.25 ರಂದು ಜನತಾ ದರ್ಶನ
ಅ.15 ಕ್ಕೆ ನಾನಾ ಕಾರ್ಯಕ್ರಮಗಳು ಆರಂಭವಾಗಿದ್ದು, ಆ.24ರವರೆಗೆ ಕಾರ್ಯಕ್ರಮಗಳು ನಡೆಯಲಿದ್ದು, 10 ದಿವಸದ ತನಕ ಶ್ರೀ ಕನ್ಯಾಕಪರಮೇಶ್ವರಿ ದೇವಸ್ಥಾನದಲ್ಲಿ ಶ್ರಿ ಶರನ್ನವರಾತ್ರಿ ಪ್ರಯುಕ್ತ ವಿವಿಧ ಅಲಂಕಾರ ನಡೆಯುತ್ತಿದೆ. ಪ್ರತಿ ದಿನ ಬೆಳಗ್ಗೆ 7 ಗಂಟೆಗೆ ಫಲಪಂಚಾಮೃತಾಭಿಷೇಕ, ಕನ್ನಿಕಾ ಪರಮೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರಗಳು ಹಾಗೂ ಅಮ್ಮನವರ ಉತ್ಸವಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಸಂಜೆ 7.30ಕ್ಕೆ ಪ್ರಾಕಾರೋತ್ಸವ, ಕುಂಕುಮಾರ್ಚನೆ, ಮಂತ್ರಪುಷ್ಪ, ಅಷ್ಟಾವಧಾನ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಇರಲಿದೆ.
ಪ್ರತಿ ದಿನ ಸಂಜೆ 5ರಿಂದ 6 ರವರೆಗೆ ವಾದವಿ ಭಜನಾ ಮಂಡಳಿಯಿಂದ ಲಲಿತ ಸಹಸ್ರನಾಮರ್ಚನೆ, ಹೇಮಾ ಮತ್ತು ಸಂಗಡಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ.
ಅ.15 ಕ್ಕೆ ದೇವಿಗೆ ಕೊಲ್ಲೂರು ಮೂಕಾಂಬಿಕೆ ಅಲಂಕಾರ, ಅ.16ಕ್ಕೆ ಬೆಂಗಳೂರು ಅಣ್ಣಮ್ಮ ಅಲಂಕಾರ, ಅ.17ಕ್ಕೆ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಅಲಂಕಾರ, ಅ.18 ಕ್ಕೆ ಸವದತ್ತಿ ಯಲ್ಲಮ್ಮ ಅಲಂಕಾರ, ಅ.19 ಕ್ಕೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಅಲಂಕಾರ. ಅ.20 ಕ್ಕೆ ಗಂಗಾ ಮಾತೆ ಅಲಂಕಾರ, ಅ.21 ಕ್ಕೆ ಶ್ರೀ ಶೃಂಗೇರಿ ಶಾರದಾಂಬ ದೇವಿ ಅಲಂಕಾರ, ಅ.22 ಕ್ಕೆ ಶ್ರೀ ಶಿರಸಿ ಮಾರಿಕಾಂಬ ದೇವಿ ಅಲಂಕಾರ ನಡೆಯಲಿದ್ದು, ಅ.22 ಕ್ಕೆ ಬೆಳಗ್ಗೆ 10.30ರಿಂದ ನವ ದುರ್ಗ ಹೋಮ ಏರ್ಪಡಿಸಲಾಗಿದೆ. ಸಂಜೆ 6.30ಕ್ಕೆ ಶ್ರೀ ವಾಸವಿ ಕ್ಲಬ್ ದಾವಣಗೆರೆ ಇವರಿಂದ ಕನಕದಿಂದ ಕನ್ನಿಕೆಗೆ ಸಹಸ್ರನಾಮ ಪೂಜಾ ಕಾರ್ಯಕ್ರಮ ಮತ್ತು ಕನ್ನಿಕೆಗೆ ಕನಕದಿಂದ ತುಲಾಭಾರ ಕಾರ್ಯಕ್ರಮ ನಡೆಯಲಿದೆ.
Municipality; ಚನ್ನಗಿರಿ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಕೃಷ್ಣ ಡಿ ಕಟ್ಟಿಮನಿ ನೇಮಕ
ಅ.23 ಕ್ಕೆ ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ದೇವಿ ಅಲಂಕಾರ, ಸಂಜೆ 6.30 ರಿಂದ ಶ್ರೀ ವಾಸವಿ ಭಜನಾ ಮಂಡಳಿ ಇವರಿಂದ ನವರಾಗ, ನವ ಧಾನ್ಯಗಳಿಂದ ನವ ಅಲಂಕಾರ ನಡೆಯಲಿದೆ.
ಅ.24ಕ್ಕೆ ಶ್ರೀ ಧನಲಕ್ಷೀ ದೇವಿ ಅಲಂಕಾರ ನಡೆಯಲಿದ್ದು, ಸಂಜೆ 6.30 ರಿಂದ ಶ್ರೀ ವಾಸವಿ ಯುವಜನ ಸಂಘ ಇವರಿಂದ ದಶಾವತಾರ ಕಾರ್ಯಕ್ರಮ ನಡೆಯಲಿದ್ದು, ಸಂಜೆ6.30 ಕ್ಕೆ ಶ್ರೀ ವಾಸವಿ ಯುವಜನ ಸಂಘ ಅವರಿಂದ ದಶಾವತಾರ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ರಿಂದ ದೇವಸ್ಥಾನದ ಆವರಣದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ ಎಂದು ವಾಸವಿಯವಜನ ಸಂಘ, ವಾಸವಿ ಮಹಿಳಾ ಸಂಘ, ವಾಸವಿ ಯುವತಿಯರ ಸಂಘ, ವಾಸವಿ ಭಜನಾ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದೆ.