Nanded; ಸರ್ಕಾರಿ ಆಸ್ಪತ್ರೆಯಲ್ಲಿ 48 ಗಂಟೆಗಳಲ್ಲಿ 31 ಸಾವು

ಮುಂಬೈ, ಅ.03: ಮಹಾರಾಷ್ಟ್ರದ ನಾಂದೇಡ್ ನ (Nanded) ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 48 ಗಂಟೆಗಳಲ್ಲಿ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

24 ಗಂಟೆಗಳಲ್ಲಿ 24 ಮಂದಿ ರೋಗಿಗಳು ಮೃತಪಟ್ಟ ಬೆನ್ನಲ್ಲೇ, ನಾಲ್ಕು ಮಕ್ಕಳು ಸೇರಿದಂತೆ ಇನ್ನೂ ಏಳು ಮಂದಿ ರೋಗಿಗಳು ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಈ 31 ರೋಗಿಗಳಲ್ಲಿ 16 ಶಿಶುಗಳು ಅಥವಾ ಮಕ್ಕಳು ಸೇರಿದ್ದಾರೆ.

fire; ಲಾರಿಗೆ ಕಾರು ಡಿಕ್ಕಿ: ಒಂದೇ ಕುಟುಂಬದ ಮೂವರ ಧಾರುಣ ಸಾವು

ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳನ್ನು ಆಸ್ಪತ್ರೆಯ ಡೀನ್ ಡಾ. ಶ್ಯಾಮರಾವ್ ವಾಕೋಡೆ ನಿರಾಕರಿಸಿದ್ದಾರೆ. ಔಷಧ ಅಥವಾ ವೈದ್ಯರ ಕೊರತೆ ಇರಲಿಲ್ಲ ಎಂದು ಪ್ರತಿಪಾದಿಸಿರುವ ಅವರು, ಸೂಕ್ತ ಆರೈಕೆ ನೀಡಿದರೂ ರೋಗಿಗಳು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಹೇಳಿದ್ದಾರೆ. ಈ ದಿಢೀರ್ ಹಾಗೂ ಆಘಾತಕಾರಿ ಸರಣಿ ಸಾವುಗಳ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಸಮರ್ಪಕ ಸೌಲಭ್ಯಗಳು ಮತ್ತು ಸಿಬ್ಬಂದಿ ಮತ್ತು ಔಷಧಿಗಳ ಕೊರತೆಯಿಂದಾಗಿ ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರ ನಡುವೆ 12 ಶಿಶುಗಳು ಸೇರಿದಂತೆ 24 ಸಾವುಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!