ನಶಾ ಮುಕ್ತ ದಾವಣಗೆರೆ ಅಭಿಯಾನ, ಪುಸ್ತಕ ವಿತರಣೆ
ದಾವಣಗೆರೆ: ಸಂಜರ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸಂವೇದನಾ ಕಲಾ, ಸಂಸ್ಕೃತಿ ಮತ್ತು ಸಾಹಿತ್ಯ ವೇದಿಕೆ ಬೆಂಗಳೂರು ಇವರ ಸಹಕಾರದಲ್ಲಿ ಈಚೆಗೆ ನಗರದ ಅಖ್ತರ್ ರಜಾ ಸರ್ಕಲ್‌ನಲ್ಲಿ ನಶಾ ಮುಕ್ತ ದಾವಣಗೆರೆ ಅಭಿಯಾನ ಮತ್ತು ನಾಲ್ಕು ನೂರು ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ನೋಟ್ ಪುಸ್ತಕ ವಿತರಣೆ ಹಾಗೂ ವಿವಿಧ ಕ್ಷೇತ್ರಗಳ ಸಮಾಜ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ ಮಾತನಾಡಿದ ರಾಜ್ಯ ವಕ್ಫ್ ಬೋರ್ಡ್ ಛೇರ‍್ಮನ್ ಜನಾಬ್ ಮೌಲಾನ ಎನ್.ಕೆ.ಎಂ. ಶಾಫಿ ಸಹದಿ, ಯುವಜನತೆ ದುಶ್ಚಟಗಳಿಗೆ ದಾಸರಾಗಿ ಭಾರತದ ಸಂಸ್ಕೃತಿ ಮರೆಯುತ್ತಿದ್ದು, ಅದರ ಜತೆಗೆ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ದೇಶದ ಭವಿಷ್ಯವಾದ ಯುವಜನರು ವಿದ್ಯಾವಂತರಾಗುವ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಜ್ವಿಖಾನ್ ವಹಿಸಿದ್ದರು, ಮೌಲಾನ ಹನೀಫ್ ರಾಜಾ, ಸಾಧಿಕ್ ಪೈಲ್ವಾನ್, ಸೈಯದ್ ಸೈಫುಲ್ಲಾ, ಜಿಲ್ಲಾ ವಕ್ಫ್ ಬೋರ್ಡ್ ಛೇರ‍್ಮನ್ ಸಿರಾಜ್ ಅಹ್ಮದ್, ಯಾಸೀನ್ ಫೀರ್ ರಜ್ವಿ, ಜೆ. ಅಮಾನುಲ್ಲಾ ಖಾನ್, ಕಬೀರ್ ಅಹ್ಮದ್ ಖಾನ್, ಇಬ್ರಾಹಿಂ ಕಲೀಲ್‌ವುಲ್ಲಾ, ಹೆಚ್.ಜೆ. ಮೈನುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.