ರಾಷ್ಟ್ರೀಯ ಪಂಜ ಕುಸ್ತಿ ಸ್ಪರ್ಧೆ, ಹರಿಹರದ ಬ್ರದರ್ ಜಿಮ್‌ಗೆ 16 ಪದಕಗಳು

ರಾಷ್ಟ್ರೀಯ ಪಂಜ ಕುಸ್ತಿ ಸ್ಪರ್ಧೆ, ಹರಿಹರದ ಬ್ರದರ್ ಜಿಮ್‌ಗೆ 16 ಪದಕಗಳು

ದಾವಣಗೆರೆ: ಮೇ 22ರಿಂದ 26ರವರೆಗೆ  ಕಾಶ್ಮೀರ ರಾಜ್ಯದ ಶ್ರೀನಗರದಲ್ಲಿ 45ನೇ ರಾಷ್ಟ್ರೀಯ ಆರ್ಮ್ ರೆಜಲಿಂಗ್ (ಪಂಜ ಕುಸ್ತಿ) ಸ್ಪರ್ಧೆಗಳು ನಡೆದಿದ್ದು, ಹರಿಹರ ಬ್ರದರ್ ಜಿಮ್‌ನ ಕ್ರೀಡಾಪಟುಗಳು ಒಟ್ಟು 16 ಪದಕಗಳನ್ನು ಪಡೆದಿದ್ದಾರೆ.

ಈ ಸ್ಪರ್ಧೆಗಳಲ್ಲಿ 21 ರಾಜ್ಯಗಳಿಂದ ಸುಮಾರು 850 ಜನ ಯುವಕ ಯುವತಿ ಸ್ಪರ್ಧಾಳುಗಳು ಭಾಗವಹಿಸಿದ್ದು, ದಾವಣಗೆರೆ ಜಿಲ್ಲೆಯ  ಹರಿಹರದ ಬ್ರದರ್ ಜಿಮ್‌ ಯುವಕ ಯುವತಿಯರು ಒಟ್ಟು 30 ಜನ ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು

ಅವರು 4 ಚಿನ್ನದ ಪದಕ, 7 ಬೆಳ್ಳಿಯ ಪದಕ, 5 ಕಂಚಿನ ಪದಕ ಸೇರಿದಂತೆ ಒಟ್ಟು 16 ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಇವರಲ್ಲಿ 4 ಜನ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಆರ್ಮ್ ರೆಜಲಿಂಗ್ (ಪಂಜಕುಸ್ತಿ) ಸ್ಪರ್ಧೆಗಳಿಗೆ ಆಯ್ಕೆಯಾಗಿ ಹರಿಹರ ನಗರಕ್ಕೆ ದಾವಣಗೆರೆ ಜಿಲ್ಲೆಗೆ ಹಾಗೂ ಕರ್ನಾಟಕ ರಾಜ್ಯಕ್ಕೆ ಕೀರ್ತಿಯನ್ನು ತಂದಿರುತ್ತಾರೆ.

ಈ ವಿಜೇತ ಕ್ರೀಡಾಪಟುಗಳಿಗೆ ಹರಿಹರ ಬ್ರದರ್ ಜಿಮ್‌ನ ಸಂಚಾಲಕ ಅಂತರರಾಷ್ಟ್ರೀಯ ದೇಹದಾರ್ಡ್ಯ ಪಟು ಅಕ್ರಂ ಬಾಷಾ, ಜಿಮ್‌ನ ತರಬೇತುದಾರ, ಅಂತರರಾಷ್ಟ್ರೀಯ ದೇಹದಾರ್ಡ್ಯ ಪಟು ಮೊಹಮ್ಮದ್ ರಫೀಕ್ ಹಾಗೂ ಬ್ರದರ್ ಜಿಮ್‌ನ ಎಲ್ಲಾ ಕ್ರೀಡಾಪಟುಗಳು ಹರಿಹರ ನಗರದ ಎಲ್ಲಾ ಕ್ರೀಡಾಪ್ರೇಮಿಗಳು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!