ಲೋಕಲ್ ಸುದ್ದಿ

ಜಿಎಂಎಸ್ ಅಕಾಡೆಮಿ, ಜಿಎಂಐಟಿ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳ

ಜಿಎಂಎಸ್ ಅಕಾಡೆಮಿ, ಜಿಎಂಐಟಿ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳ

ದಾವಣಗೆರೆ: ದಾವಣಗೆರೆ ನಗರದ ಜಿಎಂಐಟಿ ಆವರಣದಲ್ಲಿ ಉದ್ಯೋಗ ಮೇಳ 2023 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಜಿಎಂ ಸಿದ್ದೇಶ್ವರ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ
ದಾವಣಗೆರೆ ಉಪ ಕುಲಪತಿಯಾದ ಬಿ.ಡಿ ಕುಂಬಾರ ರವರು ಮಾತನಾಡಿ ಇತ್ತೀಚಿನ ದಿನಮಾನಗಳಲ್ಲಿ ಎಷ್ಟು ವಿಶ್ವವಿದ್ಯಾನಿಲಯಗಳು ಈ ತರಹದ ಉದ್ಯೋಗ ಮೇಳಗಳನ್ನು ಆಯೋಜಿಸಿಲ್ಲ ಆದರೆ ಜಿಎಂಎಸ್ ಸಂಸ್ಥೆಯು ಇಂತಹ ಉದ್ಯೋಗ ಮೇಳಗಳನ್ನು ಆಯೋಜಿಸುತ್ತಾ ಬಂದಿರುವುದು ತುಂಬಾ ಸಂತೋಷಕರ ವಿಷಯವಾಗಿದೆ. ಈ ಉದ್ಯೋಗ ಮರದಲ್ಲಿ ಸುಮಾರು 30 ವಿವಿಧ ಕಂಪನಿಗಳು ಬಂದಿದ್ದು ಮೂರು ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ನೀಡಲು ಮುಂದೆ ಬಂದಿದ್ದು ನಮ್ಮ ವಿಶ್ವವಿದ್ಯಾಲಯದ ಪರವಾಗಿ ಹಾಗೂ ಜಿಎಂಎಸ್ ಸಂಸ್ಥೆಯ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತಾ.

ಈಗಿನ ವಿದ್ಯಾರ್ಥಿಗಳು ನಾವು ಓದಿದ ನಂತರ ಉದ್ಯೋಗ ಸಿಗುವುದಿಲ್ಲ ಆದಕಾರಣ ನಾವು ಯಾತಕ್ಕಾಗಿ ಓದಬೇಕು ಎಂಬ ಭಾವನೆ ವಿದ್ಯಾರ್ಥಿಗಳ ಮನಸ್ಸಿನಲ್ಲಿದೆ ನಮ್ಮ ಭಾರತ ದೇಶದಲ್ಲಿ ಹಲವಾರು ಉದ್ಯೋಗ ಸಂಸ್ಥೆಗಳು ತಲೆ ಎತ್ತುತ್ತಿದ್ದು ಮೇಕ್ ಇನ್ ಇಂಡಿಯಾ ಸ್ಟಾರ್ಟ್ ಅಪ್ ಕಂಪನಿಗಳು ಇನ್ನು ಮುಂತಾದ ಕಂಪನಿಗಳು ಬರುತ್ತಿದ್ದು ವಿದ್ಯಾರ್ಥಿಗಳಿಗೆ ಇದರಿಂದ ಉದ್ಯೋಗಕಾಶಗಳು ತುಂಬಾ ದೊರೆಯುವಂತಾಗಿದೆ. ವಿದ್ಯಾರ್ಥಿಗಳು ಬೌದ್ಧಿಕವಾಗಿ ಮತ್ತು ಮಾನಸಿಕವಾಗಿ ಮುಂಚಿತವಾಗಿ ತಯಾರಿಯನ್ನು ಮಾಡಿಕೊಂಡಿರಬೇಕಾಗುತ್ತದೆ. ಎಂದರು.

ಜಿಎಂಎಸ್ ಅಕಾಡೆಮಿ, ಜಿಎಂಐಟಿ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳ

ನಂತರ ಮಾತನಾಡಿದ ಸಂಸದರಾದ ಜಿಎಂ ಸಿದ್ದೇಶ್ವರ ಮಾತನಾಡಿ ಪ್ರತಿಯೊಬ್ಬರಿಗೂ ಉದ್ಯೋಗ ಎಂಬುದು ತುಂಬಾ ಮುಖ್ಯವಾಗಿದೆ ಹಾಗೆಯೇ ಕಂಪನಿಗಳಿಗೆ ಒಳ್ಳೆಯ ಉದ್ಯೋಗಿಯು ಸಹ ಮುಖ್ಯವಾಗಿ ಬೇಕಾಗಿದೆ ಇದರಿಂದ ಕಂಪನಿಯು ಸಹ ಬೆಳೆಯುತ್ತದೆ ಹಾಗೆ ಉದ್ಯೋಗವು ಸಹ ಬೆಳೆಯಲು ಸಾಕಾರ ಆಗುತ್ತದೆ. ಈ ಉದ್ಯೋಗ ದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಇಂಡಸ್ಟ್ರಿ ಗಳು ಬ್ಯಾಂಕುಗಳು ಮಾರ್ಕೆಟಿಂಗ್ ಸಂಸ್ಥೆಗಳು ಸಹ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದೆ. 6,000 ಉದ್ಯೋಗಿಗಳನ್ನು ಸಹ ಕೆಲಸಕ್ಕೆ ತೆಗೆದುಕೊಂಡರೆ ಉತ್ತಮ. ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ದಾವಣಗೆರೆಯ ಉಪಕುಲಪತಿಗಳಾದ ಬಿಡಿ ಕುಂಬಾರ್. ಅನಿಲ್ ಕುಮಾರ್ .ಜಿಎಂ ಲಿಂಗರಾಜು. ಶ್ರೀನಿವಾಸ್ ದಾಸ್ ಕರಿಯಪ್ಪ. ಶಿವಕುಮಾರ್ ಜಗದೀಶ್ ಪ್ರೊಫೆಸರ್ ಲಿಂಗಣ್ಣ. ಹಲವು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕಂಪನಿಗಳ ಆಯೋಜಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top