ದಾವಣಗೆರೆಯಲ್ಲಿ ರಾಷ್ಟ್ರೀಯ ಸೆಫೆಕ್ ಟಕ್ರ ಪಂದ್ಯಾವಳಿ.
ಸೇಪಕ್ ಟಕ್ರ ಫೆಡರೇಷನ್ ಆಫ್ ಇಂಡಿಯಾ ಮತ್ತು ಕರ್ನಾಟಕ ಅಮೆಚೂರ್ ಸಫಕ್ ಟಕ್ರ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ 26ನೇ ಸಬ್ ಜೂನಿಯರ್ ಮತ್ತು 27ನೇ ಜೂನಿಯರ್ ರಾಷ್ಟ್ರೀಯ ಪಂದ್ಯಾವಳಿಯನ್ನು ಬಾಲಕ ಹಾಗೂ ಬಾಲಕಿಯರಿಗೆ ದಾವಣಗೆರೆ ಜಿಲ್ಲೆಯ ಕೊಂಡಜ್ಜಿಯಲ್ಲಿ ದಿನಾಂಕ 26 ರಿಂದ 30ನೇ ಮಾರ್ಚ್ 2024 ರ ವರೆಗೆ ಆಯೋಜಿಸಲಾಗಿದೆ.
ಪಂದ್ಯಾವಳಿಯ ಉದ್ಘಾಟನೆಯನ್ನು ಏಷ್ಯನ್ ಸೆಪಕ್ ಟಕ್ರ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಯೋಗೇಂದ್ರ ಸಿಂಗ್ ದಹಿಯಾ ರವರು ನೆರವೇರಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕರ ಸಂಘದ ಒಕ್ಕೂಟದ ಮಾಜಿ ಅಧ್ಯಕ್ಷರಾದ ಪ್ರೊಫೆಸರ್ ಮುರುಗೇಂದ್ರಪ್ಪ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಸಪಕ್ ಟಕ್ರ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ. ಪ್ರೇಮ ರಾಜ್, ಕಾರ್ಯದರ್ಶಿಗಳಾದ ಶ್ರೀ ವೀರೇಗೌಡ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಕ್ರೀಡಾಪಟು ಶ್ರೀ ವಿಲಾಸ್ ನೀಲಗುಂದ್ ಹಾಗೂ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ಕ್ರೀಡಾಪಟು ಶ್ರೀ ಜಗದೀಶ್ ರವರನ್ನು ಸನ್ಮಾನಿಸಲಾಯಿತು.
ಗಣ್ಯರೆಲ್ಲರೂ ರಾಷ್ಟ್ರದ ನಾನಾ ರಾಜ್ಯಗಳಿಂದ ಆಗಮಿಸಿರುವ 24 ಸಬ್ ಜೂನಿಯರ್ ಹಾಗೂ ಜೂನಿಯರ್ ತಂಡದ ಬಾಲಕ ಬಾಲಕಿಯರಿಗೆ ಶುಭ ಹಾರೈಸಿದರು.
ಪಂದ್ಯಾವಳಿಯ ಉಸ್ತುವಾರಿಯನ್ನು ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಕೇಶವ್ ಸೂರ್ಯವಂಶಿಯವರು ಅಚ್ಚುಕಟ್ಟಾಗಿ ಆಯೋಜಿಸಿದ್ದರು.