ಫೊಟೊ ಸ್ಟುಡಿಯೋ ತೆರೆಯಲು ಪರವಾನಿಗೆ ನಿಡುವಂತೆ ಡಿಸಿಗೆ ಮನವಿ ಮಾಡಿದ ಫೋಟೋಗ್ರಾಫರ್ಸ್
![studio_open_permisdion_photographer_memorandum_to_dc[1]](https://garudavoice.com/wp-content/uploads/2021/06/studio_open_permisdion_photographer_memorandum_to_dc1.jpg)
ದಾವಣಗೆರೆ; ಫೋಟೊ ಸ್ಟುಡಿಯೋ ತೆರೆಯಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ಸದಸ್ಯರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ನಿವಾಸಕ್ಕೆ ತೆರಳಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಅರ್ಪಿಸಿದರು. ಈ ವೇಳೆ ಮಾತನಾಡಿದ ಸದಸ್ಯರು
ಕಳೆದ ಅರವತ್ತು ದಿನಗಳಿಂದ ಸ್ಟುಡಿಯೋಗಳು ಬಂದಾಗಿದ್ದು ಛಾಯಾಗ್ರಾಹಕರ ಜೀವನ ನಡೆಸುವುದು ಕಷ್ಟಕರವಾಗಿದೆ ಸ್ಟುಡಿಯೋದಲ್ಲಿರುವ ಲಕ್ಷಾಂತರು ರೂಪಾಯಿ ಬೆಲೆಬಾಳುವ ಫೋಟೋ ಮತ್ತು ವಿಡಿಯೋ ಕ್ಯಾಮೆರಾಗಳು ಫಂಗಸ್ ಬರುತ್ತಿದ್ದು ಮತ್ತು ಪ್ರಿಂಟರ್ ಗಳು ಮತ್ತು ಯುಪಿಎಸ್ ಗಳು ಉಪಯೋಗ ಮಾಡದೆ ಹಾಳಾಗುತ್ತಿದ್ದು ದಯಮಾಡಿ ಸ್ಟುಡಿಯೋಗಳು ಮತ್ತು ಫೋಟೋ ಲ್ಯಾಬ್ ಗಳು ತೆರೆಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ಮಾಡಿ ನಂತರ ತಿಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆಂದು ದಾವಣಗೆರೆ ತಾಲ್ಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಮನು ಹೇಳಿದರು. ಈ ವೇಳೆ ಅಧ್ಯಕ್ಷ ಬಿ ಮಂಜುನಾಥ್, ಉಪಾಧ್ಯಕ್ಷ ಹೆಚ್.ಎಲ್.ಕಿರಣ್, ಗಣೇಶ ಸಿ ಚಿನ್ನಿಕಟ್ಟೆ, ಖಜಾಂಚಿ ಎಸ್.ರಾಜಶೇಖರ್, ಸಂತೋಷ್ .ಚಂದ್ರಶೇಖರ್ ಇದ್ದರು.