NEP; ಎನ್ ಇಪಿ ರದ್ದು ವಿರೋಧಿಸಿ ಪ್ರತಿಭಟನೆಗೆ ಕರೆ

ದಾವಣಗೆರೆ, ಆ.28: ಎನ್ ಇಪಿ ಯನ್ನು (NEP) ರದ್ದು ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಅ.ಭಾ.ವಿ.ಪ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳ್ಳುತ್ತಿರುವ ಹಂತದಲ್ಲಿಯೇ ರದ್ದುಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರ ಶಿಕ್ಷಣ ವಿರೋಧಿಯಾದದು, ಪ್ರರ್ವಾಗ್ರಹ ಪೀಡಿತವಾದುದು, ರಾಜಕೀಯ ಪ್ರೇರಿತವಾದುದು, ರಾಜ್ಯದ ವಿದ್ಯಾರ್ಥಿಗಳ ಹಿತಕ್ಕೆ ಮಾರಕವಾದದು, ತಾರ್ಕಿಕವಾಗಿರದೆ ವಿವೇಚನಾರಹಿತವಾದುದು ಎಂದು ಅ.ಭಾ.ವಿ.ಪ ಹೇಳಿದೆ.

ಇದೀಗ ಜಾರಿಯಾಗಿರುವ ಎನ್ ಇಪಿಯನ್ನು ಏಕೆ ಉಳಿಸಿಕೊಂಡು ಮುಂದುವರಿಸಬೇಕು?

ಎನ್ ಇಪಿಯನ್ನು ಕೇಂದ್ರ ಸರ್ಕಾರ ಕೇವಲ ತನ್ನ ಮರ್ಜಿಯಂತೆ ರೂಪಿಸಿದ್ದಲ್ಲ, ದೇಶಾದ್ಯಂತ ಶಿಕ್ಷಣ ತಂದು ವಿವಿಧ ಸ್ಥರಗಳಲ್ಲಿ ಶಿಕ್ಷಣ ರಂಗದ ಎಲ್ಲಾ ಬಾಧ್ಯಸ್ಥರ ಜೊತೆಗೆ ನಿರಂತರ ಸಂವಹನ ಮಾಹಿತಿ ವಿನಿಮಯ – ಚರ್ಚೆ ನಡೆಸಿ ತಯಾರಿಸಿದ ಕರಡಿನ ಆಧಾರದಲ್ಲಿ ಈ ನೀತಿಯನ್ನು ರೂಪಿಸಿರುವುದಾಗಿದೆ. (ಈಗ ಇದನ್ನು ವಿರೋಧಿಸುವವರು ಆಗಿನ ಚಿಂತನ – ಮಂತನದ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನೇಕೆ ನೀಡಿರಲಿಲ್ಲ ?) ಈಗಿನ ಎನ್ ಇಪಿಯು ಮೊದಲ ಬಾರಿಗೆ ವಿದ್ಯಾರ್ಥಿ ಕೇಂದ್ರೀತವಾಗಿದ್ದು ಬಹು ಶಿಸ್ತೀಯ ಅಧ್ಯಯನಕ್ಕೆ, ಕೌಶಲ್ಯಾಧಾರಿತ ಶಿಕ್ಷಣಕ್ಕೆ, ಭಾರತದ ಬಹುಭಾಷಿಕ ಹಾಗೂ ಸಾಂಸ್ಕೃತಿಕ ಬಹುತ್ವಕ್ಕೆ. ಪ್ರಾಂತೀಯ-ಸ್ಥಳೀಯ ಭಾಷೆಗಳ ಅಭಿವೃದ್ಧಿಗೆ ಸೂಕ್ತ ಮಾನ್ಯತೆ ಹಾಗೂ ಪ್ರಾಮುಖ್ಯ ನೀಡಿ ರೂಪಿಸಿರುವಂತಹದಾಗಿದೆ.

ಬರುವ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ NEP ರದ್ದು ಮಾಡಲಾಗುವುದು – ಸಿಎಂ ಸಿದ್ದರಾಮಯ್ಯ

ರಾಜ್ಯ ಸರ್ಕಾರವು ರಾಜಕೀಯ ಪ್ರೇರಿತ ಸಂಕುಚಿತತೆಗಳಿಗೆ ಒಳಗಾಗದೆ, ಶಿಕ್ಷಣವನ್ನು ರಾಜಕೀಯ ಸ್ವಾರ್ಥಸಾಧನೆಯ ವಸ್ತುವಾಗಿಸದೆ, ಈಗಿನ ಎನ್ ಇಪಿಯನ್ನು ಅದರ ಗುಣಾಧಾರದಲ್ಲಿ ವಿರುದ್ಧ ಶೈಕ್ಷಣಿಕ ದೃಷ್ಟಿಯಿಂದ ಪರಾಮರ್ಶನ ನಡೆಸಬೇಕೆಂದು, ಅದರಲ್ಲಿ ವಾಸ್ತವಿಕವಾಗಿಯೂ ಸಣ್ಣ-ಪುಟ್ಟ ಕೊರತೆಗಳು ಹಾಗೂ ದೋಷಗಳು ಕಂಡು ಬಂದಲ್ಲಿ ಅವುಗಳನ್ನು ವಿದ್ಯಾರ್ಥಿಗಳ ಹಿತದ ಹಿನ್ನೆಲೆಯಲ್ಲಿ ಸರಿಪಡಿಸಿಕೊಂಡು ಎನ್ ಇಪಿ ವಿರೋಧದ ತನ್ನ ನಿಲುವನ್ನು ಕೈಬಿಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸರ್ಕಾರವನ್ನು ಈ ಪ್ರತಿಭಟನೆಯ ಮೂಲಕ ಆಗ್ರಹಿಸುತ್ತದೆ.

ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ ಮಾತನಾಡಿದರು, ವಿಭಾಗ ಸಂಘಟನಾ ಕಾರ್ಯದರ್ಶಿ ಮಂಜುನಾಥ, ಪ್ರಾಂತ ಕಾರ್ಯಸಮಿತಿ ಆದರ್ಶ್, ಜಿಲ್ಲಾ ಸಂಚಾಲಕ ಸಿದ್ದೇಶ್, ಕನಕರಾಜ್, ಮನೋಜ್, ಭರತ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!