ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇಲ್ಲ: ಕೋಡಿಹಳ್ಳಿ ಸ್ವಾಮೀಜಿ ಭವಿಷ್ಯ
ಹೊಸಪೇಟೆ : ರಾಜ್ಯದಲ್ಲಿ ಧಾನಸಭೆ ಚುನಾವಣೆ ನಂತರ ಯಾವುದೇ ಸಮ್ಮಿಶ್ರ ಸರ್ಕಾರ ಬರುವುದಿಲ್ಲ. ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಶುಕ್ರವಾರ ಬಿಜೆಪಿ ನಾಯಕಿ ರಾಣಿ ಸಂಯುಕ್ತಾ ಅವರ ಮನೆಗೆ ಭೇಟಿ ನೀಡಿದಾಗ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಸಂಕ್ರಾಂತಿ, ಯುಗಾದಿ ಬಳಿಕ ಮತ್ತೆ ಭಾರಿ ಮಳೆಯಾಗುತ್ತದೆ. ಜಾಗತಿಕ ಸಮಸ್ಯೆ ತಲೆದೋರುತ್ತದೆ, ಒಲೆಹೊತ್ತಿ ಉರಿದೊಡೆ ನಿಲಬಹುದು, ಧರೆಯತ್ತಿ ಉರಿದೊಡೆ ನಿಲಬಹುದೆ? ಇಂತಹ ಸಂದರ್ಭ 2023ರಲ್ಲಿ ಜಗತ್ತಿಗೆ ಆವರಿಸುತ್ತದೆ. ಇದರಿಂದಾಗಿ ಎರಡ್ಮೂರು ಬಹುದೊಡ್ಡ ತಲೆಗಳು ಉರುಳುತ್ತವೆ. ಸಾಧು ಸಂತರಿಗೆ ತೊಂದರೆ ಇದೆ ಎಂದರು. ಸಂಕ್ರಾಂತಿ ಫಲ ಹೇಳುವುದಕ್ಕೆ ಒಂದು ದಿನ ಬಾಕಿ ಇದೆ. ಇದು ಕಳೆಯದೇ ಭವಿಷ್ಯ ಹೇಳಲಾಗದು ಎಂದು ಸ್ವಾಮೀಜಿ ನುಡಿದರು.