ಸಿದ್ದರಾಮಯ್ಯ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು..!: ಸಚಿವ ಮುನಿರತ್ನಂ ನಾಯ್ಡು

ಕೋಲಾರ : ಸಿದ್ದರಾಮಯ್ಯ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಒಳ್ಳೆಯದು , ಕೋಲಾರದ ಕಾಂಗ್ರೆಸ್ ಶಾಸಕರು ತಾವು ಗೆಲ್ಲಲು ಸಿದ್ದರಾಮಯ್ಯರನ್ನು ಕರೆತರುತ್ತಿದ್ದಾರೆ ಆದರೆ ಸಿದ್ದರಾಮಯ್ಯ ಗೆ ಇಲ್ಲಿ ಸೋಲು ಖಚಿತ , ಒಂದು ಟೈಮ್ ಗೆ ಗೆದ್ದು ಹೋಗುವವರು ಹಾಗೂ ಚುಣಾವಣೆಗೋಸ್ಕರ ಕೋಲಾರಕ್ಕೆ ಬರೋರು ಹೆಚ್ಚಾಗಿದ್ದಾರೆ ಇಲ್ಲಿ ಅಭಿವೃದ್ಧಿ ಕಡೆ ಗಮನ ಹರಿಸಬೇಕೆಂದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರ ಸಚಿವ ಮುನಿರತ್ನಂನಾಯ್ಡು ವಾಗ್ದಾಳಿ ನಡೆಸಿದ್ದಾರೆ .

ಕೋಲಾರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಉಸ್ತುವಾರಿ ಸಚಿವ ಮುನಿರತ್ನಂನಾಯ್ಡು ಸಿದ್ದರಾಮಯ್ಯ ಎರಡು ಕಡೆ ಸ್ಪರ್ದೆ ವಿಚಾರವಾಗಿ ಮಾತನಾಡಿ ಡಿಕೆ ಶಿವಕುಮಾರ್ ಮನೆದೇವರು ಒಂದು ಕಡೆ ನಿಂತುಕೊಂಡರೆ ಗೆಲ್ಲೋದು ಎಂದು ಹೇಳಿದ್ದರೆ , ಸಿದ್ದರಾಮಯ್ಯ ಮನೆದೇವರು ಎರಡು ಕಡೆ ನಿಂತುಕೊಳ್ಳೋಕೆ ಹೇಳಿರಬಹುದು ಆದರೆ ಡಿಕೆ ಶಿವಕುಮಾರ್ ಮಾತು ಕೇಳಿ ಒಂದು ಕಡೆ ನಿಂತುಕೊಂಡು ಸಿದ್ದರಾಮಯ್ಯ ಕೋಲಾರ ಬಿಟ್ಟರೆ ಅವರಿಗೆ ಒಳ್ಳೆಯದು ಇಲ್ಲ ಅಂದೇ ಡಿಕೆ ಶಿವಕುಮಾರ್ ಮನೆದೇವರು ಏನು ಮಾಡುತ್ತೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ .

ಮುಳಭಾಗಿಲು ಶಾಸಕ ಎಚ್ ನಾಗೇಶ್ ಕಾಂಗ್ರೆಸ್ ಸೇರ್ಪಡೆ ವಿಚಾರ ಮಾತನಾಡಿ ಅವರು ಒಬ್ಬ ಪಕ್ಷೇತರ ಅಭ್ಯರ್ಥಿ ಅವರು ಬಿಜೆಪಿ ಕಡೆಯಿಂದ ಗೆದ್ದವರಲ್ಲ ಅವರು ನಮ್ಮ ಪಕ್ಷದ ಕಡೆ ಗುರ್ತಿಸಿಕೊಂಡು ನಮಗೆ ಬೆಂಬಲ ನೀಡಿದ್ದರು ಅದರಿಂದ ಸಚಿವರೂ ಆಗಿದ್ದ, ನಂತರ ನಿಗಮ ಮಂಡಳಿ ಅದ್ಯಕ್ಷರು ಸಹ ಆಗಿದ್ದರು ಯಾವ ಉದ್ದೇಶದಿಂದ ಅವರು ಬಿಟ್ಟು ಹೋಗುತ್ತಿದ್ದಾರೋ ಗೊತ್ತಿಲ್ಲ ನಾಗೇಶ್ ರವರ ಬಗ್ಗೆ ಹೆಚ್ಚು ಮಾತಾಡೋ ಅವಶ್ಯಕತೆ ಇಲ್ಲ ಅವರು ಸ್ವತಂತ್ರ ಅಭ್ಯರ್ಥಿ ಅವರ ತೀರ್ಮಾನ ಅವರು ತೆಗೆದುಕೊಂಡಿದ್ದಾರೆ ಅವರಿಗೂ ಬಿಜೆಪಿ ಗೂ ಸಂಬಂದ ಇಲ್ಲ ನಮ್ಮ ಅಭ್ಯರ್ಥಿ ನಮ್ಮಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ .

ಕೋಲಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಸ್ಪರ್ದೆ ಸಿದ್ದರಾಮಯ್ಯ ಇಲ್ಲಿ ಲೆಕ್ಕಕ್ಕೆ ಇರುವುದಿಲ್ಲ , ಇನ್ನು ಕೋಲಾರ ಅಭಿವೃದ್ಧಿ ಕುಂಠಿತ ವಾಗಲು ಇಲ್ಲಿನ ಶಾಸಕರೆ ಕಾರಣ ಯಾವುದೇ ಸರ್ಕಾರಗಳಾಗಲೀ ಶಾಸಕರಿಗೆ ಕೊಡುವ ಅನುದಾನ ಕೊಟ್ಟೇ ಕೊಡುತ್ತಾರೆ ಆದರೆ ಶಾಸಕರಾದವರಿಗೆ ಇಚ್ಛಾಶಕ್ತಿ ಇರಬೇಕು , ಕ್ಷೇತ್ರದಲ್ಲಿ ಕೆಲಸ ಮಾಡುವ ರೀತಿ ಬೇರೆ ಇರುತ್ತದೆ , ಎಲ್ಲಿ ಬಳಕೆ ಮಾಡಬೇಕು ಎಂಬುದು ಗೊತ್ತಿರಬೇಕು ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳೆಂತೆ ಕೋಲಾರಕ್ಕೂ ಅನುದಾನ ಕಟ್ಟಿದ್ದೇವೆ ಇದಕ್ಕೆ ನೇರ ಹೊಣೆ ಅನುದಾನ ಬಳಕೆಯಲ್ಲಿ ವಿಫಲರಾದ ಶಾಸಕರಾಗಿದ್ದಾರೆ ಎಂದು ಶಾಸಕ ಶ್ರೀನಿವಾಸಗೌಡ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!