ಎದುರಾಳಿ ಎಷ್ಟೇ ಕಷ್ಟ ಕೊಟ್ಟರೂ, ರಾಜಕೀಯವಾಗಿ ಫಿನಿಕ್ಸ್‌ನಂತೆ ಬೆಳೆಯುತ್ತಿದ್ದಾರೆ ಸವಿತಾಬಾಯಿ

ರಾಜಕೀಯವಾಗಿ ಫಿನಿಕ್ಸ್‌ನಂತೆ ಬೆಳೆಯುತ್ತಿದ್ದಾರೆ ಸವಿತಾಬಾಯಿ

ಮಾಯಕೊಂಡ : ಕಾರ್ಯೇಶು ದಾಸಿ, ಕರುಣೇಶು ಮಂತ್ರಿ, ಭೋಜೇಶು ಮಾತಾ, ಶಯನೇಶು ರಂಭ, ಕ್ಷಯನೇಶು ಧರಿತ್ರಿ, ರೂಪೇಶು ಲಕ್ಷ್ಮೀ, ಸತ್ಕರ್ಮಯುಕ್ತ ಕುಲಧರ್ಮಪತ್ನಿ ಭರತಕುಲ ಸೀಯೇ ನಿನಗಿದೋ ನಮನ. ಎಂಬಂತೆ ಇಲ್ಲೊಬ್ಬ ಮಹಿಳೆ ಕುಟುಂಬ ಜತೆ, ಮಹಿಳಾ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ…
ಸಾಮಾನ್ಯವಾಗಿ ಮಹಿಳೆ ಹೆರಿಗೆ ನೋವಿನಿಂದ ಹಿಡಿದು, ಸಮಾಜದಲ್ಲಿನ ನೋವನ್ನು ನುಂಗುತ್ತಾಳೆ….ಎಷ್ಟೇ ಕಷ್ಟ ಬಂದರೂ ತನ್ನ ಮನೆ, ಮನ ಸೇರಿದಂತೆ ಕುಟುಂಬ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗೆ ಹಗಲಿರುಳು ದುಡಿಯುತ್ತಾಳೆ.. ಇಂತಹ ಸಾಲಿಗೆ ಸೇರುವ ದಿಟ್ಟ ಮಹಿಳೆಯೇ ಸವಿತಾಬಾಯಿ….


ತನಗೆ ತನ್ನ ಎದುರಾಳಿ ಎಷ್ಟೇ ಕಷ್ಟ ಕೊಟ್ಟರೂ, ರಾಜಕೀಯವಾಗಿ ಫಿನಿಕ್ಸ್‌ನಂತೆ ಬೆಳೆಯುತ್ತಿದ್ದಾರೆ… ಮಾಯಕೊಂಡದಲ್ಲಿ ಮಹಿಳೆಯರಿಗೆ ಜಾಗೃತಿ ಮೂಡಿಸುವ ಮೂಲಕ ಸಮಾಜದ ಕಣ್ಣು ತೆರೆಸುತ್ತಿದ್ದಾರೆ..ಇಲ್ಲಿ ಹೆಚ್ಚು ತಾಂಡಾಗಳಿದ್ದುಘಿ, ಅಲ್ಲಿನ ಮಹಿಳೆಯ ಪರಿಸ್ಥಿತಿ ಹೇಳತೀರದ್ದಾಗಿದ್ದು, ಸಮಾಜದಲ್ಲಿ ಪುರುಷನಂತೆ ಮಹಿಳೆಯೂ ಬೆಳೆಯಬೇಕು ಎಂಬ ದೃಷ್ಟಿಯಲ್ಲಿ ಅವರಿಗೆ ತಿಳಿ ಹೇಳುತ್ತಿದ್ದಾರೆ…ಮುಂದಿನ ದಿನಗಳಲ್ಲಿ ವಿದ್ಯಾವಂತ ಯುವತಿಯರಿಗೆ ಶಿಕ್ಷಣಕ್ಕೆ ಅನುಕೂಲವಾಗಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

ಸವಿತಾಬಾಯಿ ನಟಿಯಾಗಿದ್ದು, ಮಹಿಳೆಯರ ಕಷ್ಟಗಳನ್ನು ತಿಳಿದವರು..ಅವಳು ಅಡುಗೆ ಮನೆಯಿಂದ ಹಿಡಿದು, ಹೊರಗಡೆಯಲ್ಲಿ ಆಗುವ ನೋವನ್ನು ತಿಳಿದವರು…ಇಂತಹ ಮಹಿಳೆ ಮಾಯಕೊಂಡ ಕ್ಷೇತ್ರಕ್ಕೆ ಬೇಕಾಗಿದ್ದು, ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ….ಸಮಾನ ದೃಷ್ಟಿಯಿಂದ ನೋಡುವ ಇವರು ಪುರುಷರು ಹಾಗೂ ಮಹಿಳೆಯರನ್ನು ಒಂದೇ ಎಂಬ ಭಾವನೆಯಲ್ಲಿ ನೋಡಿದವರು…ಮಹಿಳಾ ಕಷ್ಟಗಳನ್ನು ಅರಿತು ಅವರಿಗೋಸ್ಕರ ಏನಾದ್ರೂ ಮಾಡಬೇಕೆಂಬ ತುಡಿತ ಇವರಲ್ಲಿದ್ದು, ಕ್ಷೇತ್ರದ ಮಹಿಳಾ ಮತದಾರರು, ಹಿರಿಯರು ಎಲ್ಲರ ಆರ್ಶೀವಾದ ಬೇಕಿದೆ….


ಮಾಯಕೊಂಡ ಕ್ಷೇತ್ರದ ದಿಟ್ಟ ಮಹಿಳೆಯರಿಗೆ ಮಹಿಳಾ ದಿನಾಚರಣೆ ಶುಭಾಶಯಗಳು

ಪೌಂಡೇಶನ್ ಮೂಲಕ ಸಮಾಜದ ಅಭಿವೃದ್ಧಿ : ಸವಿತಾಬಾಯಿ ರಾಜಕೀಯವಾಗಿ ಬೆಳೆಯುವಸಿರಿ ಮೊಳಕೆಯಲ್ಲಿ ಎಂಬ ಹಾಗೆ ಬೆಳೆಯುತ್ತಿದ್ದು, ಜನರಿಗಾಗಿ ಪುಟ ಪೌಂಡೇಶನ್ ಕಟ್ಟಿದ್ದಾರೆ..ಈ ಮೂಲಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದಾರೆ…

ಲಂಬಾಣಿ ಸಮುದಾಯ ಅಭಿವೃದ್ಧಿ ಬಗ್ಗೆ ಚಿಂತನೆ : ಮೂಲತಃ ಬಂಜಾರ ಸಮುದಾಯದ ಇವರು, ತನ್ನ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಲ್ಲದೇ ತನ್ನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಶ್ರಮಿಸುತ್ತಿದ್ದಾರೆ.

ಸೇವೆಗೆ ಸಿಕ್ತು ಗೌಡ : ಕೋವಿಡ್ ಸಮಯದಲ್ಲಿ ಮಾಡಿದಂತಹ ಸೇವೆಗೆ ಜಪಾನ್ ಯೂನಿವರ್ಸಿಟಿ ಡಾಕ್ಟರ್ ಪದವಿ ನೀಡಿದೆ.

ಸಿನಿಮಾ ನಟಿ : ಚಲನಚಿತ್ರ ನಾಯಕಿ ನಟಿಯಾಗಿ ಚಿತ್ರರಂಗದಲ್ಲಿ ಬಾಲ್ಯದಿಂದ 10 ವರ್ಷಗಳ ಕಾಲ 35 ಸಿನಿಮಾಗಳಲ್ಲಿ ನಟನೆ ಹಾಗೂ ಹಲವಾರು ಪ್ರಶಸ್ತಿಗಳು ಬಂದಿವೆ. ಅಲ್ಲದೇ ರಾಜಕೀಯ ಜೀವನದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಶಾಮನೂರು ಶಿವಶಂಕರಪ್ಪ , ಮಲ್ಲಿಕಾರ್ಜುನ್ ಅಭಿಮಾನಿ : ಕಾಂಗ್ರಸ್ ಕಟ್ಟಾಳಾಗಿರುವ ಸವಿತಾಬಾಯಿ ಶಾಮನೂರು, ಮಲ್ಲಿಕಾರ್ಜುನ್ ಅಭಿಮಾನಿಯಾಗಿದ್ದು, ಅವರು ಹೇಳುವ ಕೆಲಸವನ್ನು ಚಾಚೂ ತಪ್ಪದೇ ಮಾಡುತ್ತಾರೆ..ಅಲ್ಲದೇ ಕೈ ಪಕ್ಷವನ್ನು ಬಲಪಡಿಸಲು ಹೋರಾಟ ನಡೆಸುವ ದಿಟ್ಟ ಮಹಿಳೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!