ರಂಗಗೀತೆ, ನುಡಿನಮನ ಶ್ರದ್ಧಾಂಜಲಿ ಸಭೆ.
ತಿಮ್ಮಾಪುರ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಹಿರಿಯರು ಆಧ್ಯಾತ್ಮಿಕ ಚಿಂತಕರು, ಪ್ರವಚನಕಾರರು,ರಂಗಭೂಮಿ ಕಲಾವಿದರು ಆಗಿದ್ದ ಯೋಗಪ್ಪ ಕಟಗೇರಿ(೭೩) ಯವರು ಗುರುವಾರ ನಿಧನರಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ವನ್ನು ಗ್ರಾಮದ ರಾಮಯ್ಯ ಸ್ವಾಮಿ ನಾಟ್ಯ ಸಂಘ ಹಾಗೂ ಮನುಜ ಮತ ಫೌಂಡೇಶನ್ ವತಿಯಿಂದ
ರಾಮಯ್ಯಸ್ವಾಮಿ ಮಠದಲ್ಲಿ ನಡೆಯಿತು.
ನಮ್ಮ ಗ್ರಾಮದ ಸಮಾಜ ಸೇವಕರಾದ ಕೃಷ್ಣಾ ರಾಮದುರ್ಗ, ಆಧ್ಯಾತ್ಮಿಕ ಚಿಂತಕರಾದ ಶಂಕ್ರಪ್ಪ ನೆಮದಿ, ಲಕ್ಮಣ ಕತ್ತಿ, ಹನಮಂತಪ್ಪ ರಾಮದುರ್ಗ, ಕಲಾವಿದರಾದ ರಾಜೇಸಾಬ ತಟಗಾರ, ಕೃಷ್ಣಾ ಗಾಡದ ಅಶೋಕ ಗಾಡಿ, ಬಸವರಾಜ ಧುತ್ತರಗಿ,ರಾಜಕೀಯ ಮುಖಂಡ ಚಿದಾನಂದ ಧೂಪದ ,ನಾಗೇಶ ಗಂಜಿಹಾಳ, ಗ್ರಾ.ಪಂ ಸದಸ್ಯ ಗ್ಯಾನಪ್ಪ ಗೋನಾಳ,ಗಾಯಕರಾದ ಮಾನು ಹೊಸಮನಿ,ವಿನಾಯಕ ಧೂಪದ, ನಾರಾಯಣ ಹುಣಶ್ಯಾಳ, ಯುವ ಸಾಹಿತಿ ವಿಠ್ಠಲ ಮಾರಾ, ಟಿ.ಬಿ ಭಜಂತ್ರಿ, ದಿವಾಕರ ಸಿನ್ನೂರ,ಹುನಗುಂದ ಕ.ಸಾ.ಪ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಸೇರಿದಂತೆ ಕಲಾವಿದರು, ಹಿರಿಯರು, ಯುವ ಮಿತ್ರರು, ಕಟಗೇರಿ ಕುಟುಂಬ ವರ್ಗ ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿಯಾಗಿದ್ದರು.
ರಂಗಗೀತೆ, ನುಡಿನಮನ ಸಲ್ಲಿಸಲಾಯಿತು