ಸಾಮೂಹಿಕ ನಕಲು, ಮರುಪರೀಕ್ಷೆ ವಿರೋಧಿಸಿ ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಭಟನೆ

ದಾವಣಗೆರೆ: ಬೆಂಗಳೂರಿನ ಎರಡು ಪರೀಕ್ಷೆ ಕೇಂದ್ರದಲ್ಲಿ ಸಾಮೂಹಿಕ ನಕಲು ನಡೆದಿದ್ದು, ಆದರೆ ರಾಜ್ಯದ 24 ಸಾವಿರ ಜಿಎನ್‌ಎಂ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸಲು ಮುಂದಾಗಿದ್ದು, ಇಂತಹ ಕುರುಡು ನೀತಿ ಕೈಬಿಡುವಂತೆ ಆಗ್ರಹಿಸಿ ದಾವಣಗೆರೆಯ ಜಿಎನ್‌ಎಂ ವಿದ್ಯಾರ್ಥಿಗಳು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಎನ್‌ಎಂ ವಿದ್ಯಾರ್ಥಿಗಳು, ಬೆಂಗಳೂರಿನ ಕೇವಲ 2 ಕಾಲೇಜುಗಳಲ್ಲಿ ಸಾಮೂಹಿಕ ನಕಲು ನಡೆದಿದೆ.ಅಲ್ಲಿ ಬೇಕಾದರೆ ಮರು ಪರೀಕ್ಷೆ ನಡೆಸಲಿ. ಅದನ್ನು ಬಿಟ್ಟು ರಾಜ್ಯದ ಎಲ್ಲಾ ಜಿಎನ್‌ಎಂ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವುದು ಎಷ್ಟು ಸರಿ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರಾಜ್ಯದ 88 ಸಾವಿರ ವಿದ್ಯಾರ್ಥಿಗಳು ಜಿಎನ್‌ಎಂ ಪರೀಕ್ಷೆ ಬರೆದಿದ್ದಾರೆ.ವಿದ್ಯಾರ್ಥಿಗಳು ಕರ್ತವ್ಯಕ್ಕೆ ಹಾಜರಾಗಬೇಕು. ತರಗತಿಗೆ ಬರಬೇಕು. ಇದಲ್ಲದೇ ನ್ಯಾಯಾಲಯದ ತೀರ್ಪು ಕೂಡ ತಡವಾಗಿದೆ. ಅಲ್ಲದೇ ಕೇವಲ 15 ದಿನಗಳ ಕಾಲ ನೀಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಕಾರಣ ಡಿಪ್ಲೋಮಾ ನರ್ಸಿಂಗ್ ಬೋರ್ಡಿನ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ದಾವಣಗೆರೆಯಲ್ಲಿನ ಜಿಎನ್‌ಎಂ ವಿದ್ಯಾರ್ಥಿಗಳು ಉತ್ತಮವಾಗಿಯೇ ಓದಿ ಪರೀಕ್ಷೆ ಬರೆದಿದ್ದೇವೆ. ಆದರೆ ಬೆಂಗಳೂರಿನ ಯಾವುದೇ ಒಂದು ಪರೀಕ್ಷಾ ಕೇಂದ್ರದಲ್ಲಿ ನಕಲು ನಡೆದಿದಿದ್ದನ್ನೇ ಕಾರಣವಾಗಿ ಇಟ್ಟುಕೊಂಡು ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುತ್ತಿರುವ ಕ್ರಮ ಸರಿಯಲ್ಲ. ಕಾರಣ ಎಲ್ಲಿ ಸಾಮೂಹಿಕ ನಕಲು ನಡೆದಿದಯೋ ಅಲ್ಲಿ ಮಾತ್ರ ಪರೀಕ್ಷೆ ನಡೆಸಿ ಉಳಿದ ಕಡೆಗಳಲ್ಲಿ ಫಲಿತಾಂಶ ಪ್ರಕಟಿಸಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!