old age pension; ವೃದ್ಧಾಪ್ಯ ವೇತನ ಪ್ರಮಾಣ ಪತ್ರ ನೀಡಿದ ಶಾಸಕ
ಚನ್ನಗಿರಿ, ಆ.25: ಹಿರಿಯರು ಹಾಗೂ ತಂದೆತಾಯಿಗಳಿಗೆ (parents) ನಾವು ಗೌರವ ನೀಡಬೇಕು, ಸಂಧ್ಯಾಕಾಲದಲ್ಲಿ ಹಿರಿಯರನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂದು ಶಾಸಕ ಬಸವರಾಜು ವಿ ಶಿವಗಂಗಾ ತಿಳಿಸಿದ ಅವರು, ಇದೇ ವೇಳೆ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ (old age pension) ಪ್ರಮಾಣ ಪತ್ರ ನೀಡಿದರು
ಪಟ್ಟಣದ ಆಡಳಿತ ಸೌಧದಲ್ಲಿ ಸರ್ಕಾರಿ ಜನಸಂಪರ್ಕ ಕಚೇರಿ ಉದ್ಘಾಟನೆ ಮಾಡಿದ ಅವರು ಆರಂಭದಲ್ಲೇ ಸಂಧ್ಯಾ ಸುರಕ್ಷಾ ಯೋಜನೆಯಡಿ ಹಲವು ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು.
New Education Policy; ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ: ಸಿದ್ದರಾಮಯ್ಯ
ಕ್ಷೇತ್ರದ ಜನರ ಸೇವೆ ಮಾಡಲು ಅವಕಾಶ ಸಿಕ್ಕದೆ, ನಾನು ಹುಟ್ಟಿದ ಈ ಕ್ಷೇತ್ರ ಮಣ್ಣಿನ ಋಣ ತೀರಿಸುವೆ, ಪ್ರಾಮಾಣಿಕವಾಗಿ ಕೆಲಸ ಮಾಡಿ ನಿಮ್ಮ ಸೇವೆ ಜೊತೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದರು. ತಾಲ್ಲೂಕ್ ಕಚೇರಿ ಸೇರಿದಂತೆ ಎಲ್ಲಾ ಕಚೇರಿಯಲ್ಲೂ ಸಹ ಭ್ರಷ್ಟಾಚಾರ ಮುಕ್ತ ಆಡಳಿತ ಮಾಡಲಾಗುತ್ತದೆ. ಪಾರದರ್ಶಕವಾಗಿ ಎಲ್ಲಾ ಅಧಿಕಾರಿಗಳು ಸಹ ಕೆಲಸ ಮಾಡಬೇಕು, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದುಉ ತಿಳಿಸಿದರು. ಕರ್ತವ್ಯಲೋಪ ಕಂಡು ಬಂದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ನಿತ್ಯ ಕಚೇರಿಗೆ ಬರುವ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕ್ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.