ದಾವಣಗೆರೆಯಲ್ಲಿ ಇಂದು 30 ಜನರಿಗೆ ಕೋವಿಡ್ ಸೊಂಕು: 77 ಕ್ಕೇರಿದ ಸಕ್ರಿಯ ಸೊಂಕಿತರು
ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ 30 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 77 ಕ್ಕೆ ಏರಿಕೆ ಕಂಡಿದೆ.
ಒಬ್ಬರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 20 ಜನರಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಜಗಳೂರು 6, ಚನ್ನಗಿರಿ ಮತ್ತು ಹೊರ ಜಿಲ್ಲೆಯ ತಲಾ ಇಬ್ಬರಿಗೆ ಸೋಂಕು ತಗುಲಿದೆ.
ಇಲ್ಲಿಯವರೆಗೂ 51,107 ಜನರಿಗೆ ಸೋಂಕು ದೃಢಪಟ್ಟಿದ್ದು, 50,422 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 608 ಜನರು ಬಲಿಯಾಗಿದ್ದಾರೆ.