ಹೊನ್ನಾಳಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಿಷ ಆಹಾರ ಸೇವಿಸಿದ ಮಕ್ಕಳು.!50 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ದಾವಣಗೆರೆ: (ಹೊನ್ನಾಳಿ) ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿ ಇರುವ ಯಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯ 50 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಮಕ್ಕಳು ವಿಷಾಹಾರ ಸೇವನೆ ಮಾಡಿರುವ ವಿಚಾರ ತಿಳಿದು ಬೆಂಗಳೂರಿನಿಂದ ರೇಣುಕಾಚಾರ್ಯ ನೇರವಾಗಿ ವಸತಿ ಶಾಲೆ ಭೇಟಿ ನೀಡಿದ್ದಾರೆ.
ವಸತಿ ಶಾಲೆಯಲ್ಲಿನ ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿ ಧೈರ್ಯ ಹೇಳಿದ್ದಾರೆ.
ನಂತರ ಶಾಸಕರು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯಲ್ಲಿದ್ದ ಮಕ್ಕಳ ಆರೋಗ್ಯವನ್ನ ವಿಚಾರಿಸಿದ ರೇಣುಕಾಚಾರ್ಯ, ನಿಮ್ಮ ಜೊತೆ ನಾನಿದ್ದಿನಿ ಎಂದು ಆರೋಗ್ಯ ವಿಚಾರಿಸಿ ಮಕ್ಕಳಿಗೆ ಧೈರ್ಯ ಹೇಳಿದರು.
ಇನ್ನೂ ಸ್ವತಃ ರೇಣುಕಾಚಾರ್ಯ ಮಕ್ಕಳಿಗೆ ಔಷಧೋಪಚಾರ ಮಾಡಿದರು, ಕೆಲ ಹೊತ್ತು ಆಸ್ಪತ್ರೆಯಲ್ಲೇ ಇದ್ದು ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚನೆಯನ್ನ ರೇಣುಕಾಚಾರ್ಯ ನೀಡಿದರು.