ಕೊವಿಡ್ ಮೂರನೇ ಅಲೆ: 283 ನೇ ಸಂತ ಸೇವಾಲಾಲ್ ಜಯಂತಿ ರದ್ದು – ಪಿ ರಾಜೀವ್

ದಾವಣಗೆರೆ: ಮುಂದಿನ ತಿಂಗಳು ನೆಡೆಯಬೇಕಿದ್ದ 283ನೇ ಸಂತ ಸೇವಾಲಾಲ್ ಜಯಂತೋತ್ಸವ ಧಾರ್ಮಿಕ ಕಾರ್ಯಕ್ರಮವನ್ನು ಕೊರೋನಾ ಮೂರನೇ ಅಲೆಯ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.
ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಪಿ ರಾಜೀವ್, ಮಾಜಿ ಸಚಿವರು ಮಹಾ ಮಠ ರಾಜ್ಯ ಸಮಿತಿ ಅಧ್ಯಕ್ಷರಾದ ಶ್ರೀ ರುದ್ರಪ್ಪ ಲಮಾಣಿ, ಮಾಜಿ ಶಾಸಕರಾದ ಶ್ರೀ ಬಸವರಾಜ್ ನಾಯ್ಕ್, ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಶ್ರೀ ಮಾರುತಿ ನಾಯ್ಕ್ ಹಾಗೂ ಮಾನ್ಯ ಜಿಲ್ಲಾಧಿಕಾರಿ, ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಮಾಜದ ಮುಖಂಡರುಗಳ ಉಪಸ್ಥಿತಿಯಲ್ಲಿ ನೆಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.