ಚೆಸ್ ಆಡುವುದರಿಂದ ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆಗೆ ಸಹಕಾರಿ : ಪತ್ರಕರ್ತ ಬಿಎನ್ ಮಲ್ಲೇಶ್

ಚೆಸ್

ದಾವಣಗೆರೆ: ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ನಗರದ ಗುರುಭವನದಲ್ಲಿ ಇಂದು ರಿಪಬ್ಲಿಕ್ ಡೇ ಕಪ್ ಓಪನ್ ರಾಪಿಡ್ ಚೆಸ್ ಪಂದ್ಯಾವಳಿಯ ಉದ್ಘಾಟನೆಯನ್ನು ನಗರದ ಗಣ್ಯ ವ್ಯಕ್ತಿಗಳು ನಗರವಾಣಿ ಮುಖ್ಯ ಸಂಪಾದಕರಾದ ಬಿಎನ್ ಮಲ್ಲೇಶ್ ಅವರು ಉದ್ಘಾಟಿಸಿದರು

ಮಕ್ಕಳಿಗೆ ಚದುರಂಗ ಬಹು ಮುಖ್ಯವಾಗಿ ಅವಶ್ಯಕತೆ ಮಕ್ಕಳ ಬುದ್ಧಿಶಕ್ತಿ ಅವರ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ತುಂಬಾ ಅವಶ್ಯಕ ಆಗಿದೆ ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿದರೆ ಅವರ ಭವಿಷ್ಯವು ಉಜ್ವಲವಾಗಲಿದೆ ಹಾಗೂ ಪೋಷಕರು ಮಕ್ಕಳಿಗೆ ಮೊಬೈಲ್ ನೀಡದೆ ಇಂತಹ ಬುದ್ಧಿವಂತ ಕ್ರೀಡೆಗಳಲ್ಲಿ ಅಳವಡಿಸಿಕೊಳ್ಳಲು ಸೂಕ್ತ ಸಲಹೆಯನ್ನು ಅವರ ಜೊತೆ ಸಮಯ ನೀಡಿಭಾಗವಹಿಸುವುದರಿಂದ ಮಕ್ಕಳಿಗೆ ಉಪಯೋಗವಾಗುತ್ತದೆ ಎಂದು ಕಿವಿಮಾತು ಹೇಳಿದರು

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ,  ಮಾಂತೇಶ್ ಜಿ ಆಡಿಟರ್ ಅಧ್ಯಕ್ಷರು ,ಸಂಕಲ್ಪ ಸೇವಾ ಫೌಂಡೇಶನ್  ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಏ ನಾಗರಾಜ್  ಎಸ್ ಮಲ್ಲಿಕಾರ್ಜುನ್ ಅಲ್ಲಾವುಲಿ ಮೊಹಮ್ಮದ್ ಖಾನ್ ಸಂಘದ ಕಾರ್ಯದರ್ಶಿಗಳ ಟಿ ಯುವರಾಜ್ ಮಂಜುಳಾ ಯುವರಾಜ್ ಪವನ್ ಕುಮಾರ್ ಮೇಘರಾಜ್ ದೀಪಾ ಸಿ ಬಸವರಾಜ್ ಮಲ್ಲೇಶ್ ಇನ್ನು ಮುಂತಾದವರು ಭಾಗವಹಿಸಿದ್ದರು

ಪಂದ್ಯಾವಳಿಯಲ್ಲಿ ದಾವಣಗೆರೆ ಜಿಲ್ಲೆಯ ನೂರಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿ u09,u13,ಓಪನ್  ಮೂರು ವಿಭಾಗಗಳಲ್ಲಿ ನಡೆದ ಪಂದ್ಯಾವಳಿಯನ್ನು ನಡೆಸಲಾಯಿತು ಪ್ರತಿ ಭಾಗದಲ್ಲಿ 5 ಸುತ್ತುಗಳಲ್ಲಿ ಓಪನ್ ವಿಭಾಗದ ದಲ್ಲಿ ಹೊನ್ನಾಳಿಯ ಸಚಿನ್ ಪಿ ಎಸ್ ಪ್ರಥಮ ಸ್ಥಾನ ಟ್ರೋಫಿ ಹಾಗೂ 3000ನಗದು ದೀಕ್ಷಾಂತ್ ಗೋಕುಲ್ ಅರೋರ ದ್ವಿತೀಯ ಸ್ಥಾನಟ್ರೋಫಿ ಹಾಗೂ  2000 ನಗದು  ತೃತೀಯ ಡಾಕ್ಟರ್ ಸಮೀರ್ ಅಹ್ಮದ್ 1000  ನಗದು ಹಾಗೂ ಟ್ರೋಫಿ  U09 ವಿಭಾಗದಲ್ಲಿ ಮೊಹಮ್ಮದ್ ಆರ್ಯನ್ ಪ್ರಥಮ ಸ್ಥಾನ ಸಾನ್ವಿಕ ಎನ್ಎ ದ್ವಿತೀಯ ಸ್ಥಾನ ಭುವನಸಾಗರಿ 3,1/2 ವರ್ಷದ ಬಾಲಕ ಸಮರ್ಥ್ ಪೂಜಾರ್ ಅತಿ ಕಿರಿಕಿರಿಯ ವಯಸ್ಸಿನ ಆಟಗಾರ  U07 ವಿಭಾಗದಲ್ಲಿ ತ್ರಿಶಾ ಬಿ ಆರ್ ಪ್ರಥಮ ಸ್ಥಾನ ಮೂರನೇ ಸ್ಥಾನ  U11 ವಿಭಾಗದಲ್ಲಿ ಅಮಿತ್ ಚಂದ್ರ ಬಿ ಪ್ರಥಮ ಸ್ಥಾನ ಸಾತ್ವಿಕ್ ನಾಯಕ್ ಎನ್ ದ್ವಿತೀಯ ಸ್ಥಾನ ಲಕ್ಷಿತ್ ದಯಾನಂದ್ ಮೂರನೇ ಸ್ಥಾನವನ್ನು U13 ವಿಭಾಗದಲ್ಲಿ ಅಪೇಕ್ಷ ಐಡಿ ಪ್ರಥಮ ಸ್ಥಾನ ದೇವದತ್ತ ಆರ್ ಕೊಟ್ಟಾಲ್ ದ್ವಿತೀಯ ಸ್ಥಾನ ವೈಭವ್ ಜಿ ಮೂರನೇ ಸ್ಥಾನ U15 ವರ್ಷದೊಳಗಿನ ವಿಭಾಗದಲ್ಲಿ ದಿಗಂತ್ ಎಂ ಎಸ್ ಪ್ರಥಮ ಸ್ಥಾನ ಮೂರನೇ ಸ್ಥಾನ U17 ವಿಭಾಗದಲ್ಲಿ  ಹರಿಹರದ ಸ್ವಯಂ ಎಂ ಎಸ್ ಪ್ರಥಮ ಸ್ಥಾನ ನಿರಂಜನ್ ಎಂ ದ್ವಿತೀಯ ಸ್ಥಾನ ಗಿರೀಶ್ ಜಿಎನ್ ತೃತೀಯ ಸ್ಥಾನ U19 ಭಾಗದಲ್ಲಿ ಅರ್ಫತ್ ಎ ಪ್ರಥಮ ಸ್ಥಾನ ರಮ್ಯಾ ಕೆಯು ದ್ವಿತೀಯ ಸ್ಥಾನ ಪಡೆದರು

ಈ ತರಹದ ಮಕ್ಕಳಿಗೆ ಮಕ್ಕಳಿಗೆ ಬಾಪೂಜಿ ವಿದ್ಯಾಸಂಸ್ಥೆಯ ಲೆಕ್ಚರರ್ ಹಾಗೂ ಜೆಸಿ ಗವರ್ನರ್ ಆದ ಲತಿಕಾ ದಿನೇಶ್ ಕೆ ಶೆಟ್ಟಿಯವರು ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಿದರು

Leave a Reply

Your email address will not be published. Required fields are marked *

error: Content is protected !!