ನಾನು ಸುಳ್ಳು ಹೇಳಿದ್ದೇನೆ ಎಂದಾದರೆ ರಾಜಕೀಯ ಬಿಡುತ್ತೇನೆ:ಸಿದ್ದರಾಮಯ್ಯ ಯಡಿಯೂರಪ್ಪ ಬಾಯಿ ಮುಚ್ಚಿಕೊಂಡು ಇರುತ್ತಾರೆಂದರೆ ನಾವೂ ಬಾಯಿ ಮುಚ್ಚಿಕೊಂಡಿರಬೇಕಾ?
ದಾವಣಗೆರೆ : ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಕೊಡಬೇಕಾದ ತೆರಿಗೆ ಹಣ ಬಾಕಿ ಇರುವ ವಿಷಯದಲ್ಲಿ ನಾನು ಹೇಳಿರುವುದು ಸುಳ್ಳು ಎಂದಾದರೆ ರಾಜೀನಾಮೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ ತೆರಳುವ ಮುನ್ನ ಹೆಲಿಪ್ಯಾಡ್ ನಲ್ಲಿ ಅವರುಸುದ್ದಿಗಾರರೊಂದಿಗೆ ಮಾತನಾಡಿದರು.
ತೆರಿಗೆ ಸಂಗ್ರಹಣೆ ವಿಚಾರದಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಾವು 100 ರೂಪಾಯಿ ಸಂಗ್ರಹಿಸಿದರೆ ಅದರಲ್ಲಿ ಕೇಂದ್ರದಿಂದ ಬರುವುದು ಕೇವಲ 12 ರಿಂದ 13 ರೂ. ಮಾತ್ರ. ಕನ್ನಡಿಗರಾದ ನಿಮಗೆ ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ ?ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
4.36 ಲಕ್ಷ 36 ಸಾವಿರ ಕೋಟಿ ಈವರ್ಷ ಸಂಗ್ರಹವಾಗುತ್ತದೆ. ನಮಗೆ ಬರುವುದು 50 ಲಕ್ಷದ 257 ಕೋಟಿ ರೂ.ಮಾತ್ರ ವಾಪಾಸ್ಸು ಬರುತ್ತದೆ. ಇನ್ನುಳಿದಿದ್ದೆಲ್ಲಾ ಅವರೇ ಇಟ್ಟುಕೊಳ್ಳುತ್ತಾರೆ.ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ತೆರಿಗೆ ಸಂಗ್ರಹಿಸಿ ಕೊಡುವುದರಲ್ಲಿ. ನಮಗೆ ಕೊಡದಿದ್ದರೆ ಸುಮ್ಮನೇ ಇರಬೇಕಾ ? ಯಡಿಯೂರಪ್ಪ ಬಾಯಿ ಮುಚ್ಚಿಕೊಂಡು ಇರುತ್ತಾರೆಂದರೆ ನಾವೂ ಬಾಯಿ ಮುಚ್ಚಿಕೊಂಡಿರಬೇಕಾ ? ಎಂದು ಕಿಡಿಕಾರಿದರು.
ಬಿಜೆಪಿ ಮುಖಂಡರುಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ವಿಜಯೇಂದ್ರ, ಇವರಾರೂ ನರೇಂದ್ರ ಮೋದಿ, ಅಮಿತ್ ಷಾ ಅವರೊಟ್ಟಿಗೆ ಮಾತನಾಡಿ ಹಣ ಕೊಡಿಸಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.ನಮಗೆ ಅನ್ಯಾಯವಾದರೆ ಪ್ರತಿಭಟಿಸಬಾರದೇ ? ಎಂದು ಪ್ರಶ್ನಿಸಿದರು.