ಸೂರಗೊಂಡನಕೊಪ್ಪ ಸುಕ್ಷೇತ್ರದಲ್ಲಿ ಕಳಪೆ ಕಾಮಗಾರಿಗಳು.! ಸರ್ಕಾರದ ಹಣ ಪೋಲಿಗೆ ಹೊಣೆ ಯಾರು.?

ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಶ್ರೀ ಹಾತಿರಾಮ್ ಬಾವಾಜಿ ಭವನ ಮುಂಭಾಗದಲ್ಲಿ ಭಕ್ತಾದಿಗಳು ಓಡಾಡುವ ಸಲುವಾಗಿ ನೆಲಕ್ಕೆ ಹಾಕಲಾಗಿರುವ ಟೈಲ್ಸ್ ಕಾಮಗಾರಿ ಕಳಪೆಯಾಗಿದೆ.

ಭಕ್ತಾದಿಗಳು ಓಡಾಡಲು ಅನುಕೂಲವಾಗುವಂತೆ ಇಲ್ಲಿನ ಶ್ರೀ ಹಾತಿರಾಮ್ ಬಾವಾಜಿ ಭವನ ಮುಂಭಾಗ ನೆಲಕ್ಕೆ ಹಾಸುಹೊಕ್ಕಾಗಿ ಹಾಕಿರುವ ಟೈಲ್ಸ್ಗಳ ಮಧ್ಯೆ ಬಿರುಕುಬಿಟ್ಟು ಸರಿದಿವೆ. ನೆಲಕ್ಕೆ ಟೈಲ್ಸ್ ಹಾಕುವಾಗ ಟೈಲ್ಸ್ಗಳ ಮಧ್ಯೆ ಸಿಮೆಂಟ್ ಹಾಕಿ ಸಮವಾಗಿಸಬೇಕಾಗಿತ್ತು. ಆದರೆ ಸಿಮೆಂಟ್ ಕಡಿಮೆ ಪ್ರಮಾಣದಲ್ಲಿ ಬಳಸಿ, ಕಾಮಗಾರಿ ಸಂಪೂರ್ಣವಾಗಿ ಪೂರೈಸದೆ ತಮಗಿಚ್ಚೆ ಬಂದ0ತೆ ಮಾಡಲಾಗಿದ್ದು, ಕೆಲವು ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಜಾರ ಸಮುದಾಯದ ತಾಂಡಾ ಅಭಿವೃದ್ದಿ ನಿಗಮದಿಂದ 33 ಲಕ್ಷ ಅನುದಾನದಲ್ಲಿ ದಾವಣಗೆರೆ ನಿರ್ಮಿತಿ ಕೇಂದ್ರ ಕಾಮಗಾರಿ ಕೈಗೊಂಡಿದ್ದು, ಟೈಲ್ ಗಳ ಮಧ್ಯೆ ಸಿಮೆಂಟೀಕರಣಗಳಿಸದೆ ಹಾಗೆ ಬಿಟ್ಟಿದೆ. ಹಾಗಾಗಿ ಮಳೆಬಂದು ಟೈಲ್ಸ್ಗಳ ಮಧ್ಯೆ ನೀರುನಿಂತು ಟೈಲ್ಸ್ ಗಳೆಲ್ಲ ಅತ್ತಿತ್ತ ಸರಿಯುತ್ತಿವೆ. ಇದಕ್ಕೆ ಹೊಣೆ ಹೊತ್ತು ತಾಂಡಾ ಅಭಿವೃದ್ದಿ ನಿಗಮ ಮತ್ತು ದಾವಣಗೆರೆ ನಿರ್ಮಿತಿ ಕೇಂದ್ರ ಸರಿಪಡಿಸುವ ಕೆಲಸ ಕೈಗೊಳ್ಳಬೇಕಿದೆ.

garudavoice21@gmail.com 9740365719

 

Leave a Reply

Your email address will not be published. Required fields are marked *

error: Content is protected !!