ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ! ಅರೇಹಳ್ಳಿ ಗ್ರಾಮದ ಇಬ್ಬರು ಸ್ವರ್ಣಪದಕಕ್ಕೆ ಭಾಜನಾ!

ದಾವಣಗೆರೆ: ಜೂನ್ 16ರ ಇಂದು ಕುವೆಂಪು ವಿಶ್ವವಿದ್ಯಾಲಯದಲ್ಲಿ ಜರುಗಿದ 31ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕು ವ್ಯಾಪ್ತಿಯ ಅರೇಹಳ್ಳಿ ಗ್ರಾಮದ ಇಬ್ಬರು ವಿದ್ಯಾರ್ಥಿಗಳಿಗೆ ಸ್ವರ್ಣಪದಕ ನೀಡಿ ಗೌರವಿಸಲಾಗಿದೆ.

 

ಅರೇಹಳ್ಳಿ ಗ್ರಾಮದ ಮಾಲತೇಶ್ ನಾಯ್ಕ್ ಹಾಗೂ ಮಾಲತೇಶ್ ಎಂಬ ವಿದ್ಯಾರ್ಥಿಗಳಿಗೆ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಿಂದ ಸ್ವರ್ಣ ಪದಕ ನೀಡಲಾಯಿತು.
ಮಾಲತೇಶ್‌ನಾಯ್ಕ್ ಜಿ., ಫೆಬ್ರವರಿ 2020ರ ಪರೀಕ್ಷೆಯ ಪಿಜಿಡಿ ಇನ್ ಹ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್ ಪದವಿಯಲ್ಲಿ ಪ್ರಥಮ ರ‍್ಯಾಂಕ್ ವಿಜೇತರಾಗಿರುವ ಪ್ರಯುಕ್ತ ವಿಶ್ವವಿದ್ಯಾಲಯ ಸ್ವರ್ಣ ಪದಕ ನೀಡಿದೆ. ಇನ್ನೂ ಮಾಲತೇಶ್ ಹೆಚ್., ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅನಿಕೇತನ ಸ್ವರ್ಣ ಪದಕ ಗಳಿಸಿ ಅರೇಹಳ್ಳಿ ಗ್ರಾಮಕ್ಕೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ. ಇವರಿಬ್ಬರ ಸಾಧನೆಯನ್ನು ಮೆಚ್ಚಿದ ಅರೇಹಳ್ಳಿ ಗ್ರಾಮಸ್ಥರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!