power cut; ವಿದ್ಯುತ್ ವ್ಯತ್ಯಯ
ದಾವಣಗೆರೆ: ಸೆ.05: 66/11 ಎ.ವಿ, ಅವರಗೆರೆ ವಿದ್ಯುತ್ ಕೇಂದ್ರದಲ್ಲಿ ದಾವಣಗೆರೆ ತಾಲೂಕಿನ ಉಪಕೇಂದ್ರಗಳಲ್ಲಿ ಮಾಸಿಕ, ತ್ರೈಮಾಸಿಕ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಸೆ.5 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ (power cut) ವಾಗಲಿದೆ.
ಕಾಡಜ್ಜಿ ಫೀಡರ್ ವ್ಯಾಪ್ತಿಯ ವಡ್ಡಿನಹಳ್ಳಿ, ಬೇತೂರು, ಕಾಡಜ್ಜಿ, ನಾಗರಕಟ್ಟೆ, ರಾಂಪುರ, ಪುಟಗನಾಳು, ಬಸವರಹಾಳು, ಬಸವನಹಾಳು ಗೊಲ್ಲರಹಟ್ಟಿ, ಬಿ ಕಲ್ಪನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆವರಗೆರೆ ಫೀಡರ್ ವ್ಯಾಪ್ತಿಯ ಹೊನ್ನೂರು, ಹೊನ್ನೂರು ಗೊಲ್ಲರಹಟ್ಟಿ, ವಡ್ಡಿನಹಳ್ಳಿ, ಹೆಚ್.ಕಲ್ಪನಹಳ್ಳಿ, ಆಂಜನೇಯ ಕಾಟನ್‍ಮಿಲ್, ಮಲ್ಲಶೆಟ್ಟಿಹಳ್ಳಿ, ಕರಿಲಕ್ಕೆನಹಳ್ಳಿ, ಚಟ್ಟೋಬನಹಳ್ಳಿ, ಬಸಾಪುರ, ಬೇತೂರು, ಪುಟಗನಾಹಾಳು, ಅವರಗೆರೆ, ಐಗೂರು, ಐಗೂರು ಗೊಲ್ಲರಹಟ್ಟಿ, ಲಿಂಗದಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.