Actor Yash: ಕೆಜಿಎಫ್‌ 3ಗೆ ಯಶ್‌ ಮಾತ್ರ ಫಿಕ್ಸ್‌ ಎಂದ ನೀಲ್‌!

prashanth-neel-confirms-kgf-3-with-yash

prashanth-neel-confirms-kgf-3-with-yash

ಬೆಂಗಳೂರು: ಪ್ರಶಾಂತ್ ನೀಲ್ ಮತ್ತು ಯಶ್ ಅವರ ‘ಕೆಜಿಎಫ್’ ಫ್ರ್ಯಾಂಚೈಸ್ ಭಾರತೀಯ ಚಿತ್ರರಂಗದಲ್ಲಿ ಇತಿಹಾಸವನ್ನು ಸೃಷ್ಟಿಸಿತು. ಕೆಜಿಎಫ್‌ 2 ಬಿಡುಗಡೆಯ ನಂತರ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯಿತು. ಕೆಜಿಎಫ್‌ 3, ಸಿನಿಮಾ ಬಗ್ಗೆ ನಿರ್ದೇಶಕ ಪ್ರಶಾಂತ್‌ ನೀಲ್‌ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಸದ್ಯ ‘ಸಲಾರ್’ ಬಿಡುಗಡೆಗೆ ಸಜ್ಜಾಗಿದ್ದಾರೆ.

ಮಾಧ್ಯಮವೊಂದರ ಜತೆ ಪ್ರಶಾಂತ್‌ ನೀಲ್‌ ಮಾತನಾಡಿ ʻʻಕೆಜಿಎಫ್ 3 ಆಗಲಿದೆ. ನಾವು ಈಗಾಗಲೇ ಸ್ಕ್ರಿಪ್ಟ್ ತಯಾರು ಮಾಡಿದ್ದೇವೆ. ಯಶ್ ಅವರು ತುಂಬಾ ಜವಾಬ್ದಾರಿಯುತ ವ್ಯಕ್ತಿ. ನಾನು ಈ ಸಿನಿಮಾಗೆ ನಿರ್ದೇಶಕನೋ ಇಲ್ಲವೋ ಗೊತ್ತಿಲ್ಲ, ಆದರೆ ಯಶ್ ಯಾವಾಗಲೂ ಆ ಸಿನಿಮಾದ ಭಾಗವಾಗಿರುತ್ತಾರೆ. ಅದರ ಸಲುವಾಗಿ ಇನ್ನೂ ಏನನ್ನೂ ಘೋಷಣೆ ಮಾಡಿಲ್ಲ” ಎಂದು ಹೇಳಿದರು.

ಪ್ರಶಾಂತ್ ಅವರು ಜ್ಯೂನಿಯರ್‌ ಎನ್‌ಟಿಆರ್‌ ಜತೆ ತಮ್ಮ ಮೊದಲ ಪ್ರಾಜೆಕ್ಟ್‌ ತಯಾರಿ ನಡೆಸುತ್ತಿದ್ದಾರೆ. ತಾತ್ಕಾಲಿಕವಾಗಿ ಎನ್‌ಟಿಆರ್ 31 ಎಂದು ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ. ಸಲಾರ್‌ ರಿಲೀಸ್‌ ಆದ ಬಳಿಕ ಈ ಸಿನಿಮಾ ಚಿತ್ರೀಕರಣವನ್ನು ಪ್ರಾರಂಭಿಸುತ್ತಿರುವುದಾಗಿ ಹೇಳಿದರು. ಸಲಾರ್‌ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬೆಂಬಲದೊಂದಿಗೆ, ‘ಸಲಾರ್’ 400ಕೋಟಿ ರೂ.ಬಜೆಟ್‌ನಲ್ಲಿ ತಯಾರಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!