ದಾವಣಗೆರೆ ಎಸ್ ಕೆ ಒಡೆಯರ್ ಗೆ ಪ್ರತಿಷ್ಠಿತ ಪ್ರಶಸ್ತಿ.!
ಬೆಂಗಳೂರು :ಎಂ.ಕೆ.ಎಂ.ಇ. ಪ್ರತಿ ವರ್ಷ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಕೊಡಮಾಡುವ ಇಂತಹ ಪ್ರಶಸ್ತಿ ಈ ಬಾರಿ ನಮ್ಮ ದಾವಣಗೆರೆ ನಗರದ ಎಸ್ ಕೆ ಒಡೆಯರ್ ರವರಿಗೆ ಬಂದಿರುವುದು ಜಿಲ್ಲೆಯ ಹೆಮ್ಮೆಯ ವಿಷಯ.
ಬಿಜಾಪುರ ಜಿಲ್ಲೆಯ ಹೊನಗನಹಳ್ಳಿ ಚಿಕ್ಕ ಹಳ್ಳಿಯ ಕೃಷಿ ಕುಟುಂಬ ಹಿನ್ನೆಲೆಯ ಒಡೆಯರ್ ಆ ಭಾಗದ ಹಾಲಿನಂಥ ಮನುಸ್ಸುಳ್ಳ ಹಾಲುಮತದ ಗುರು ಸ್ಥಾನ ಪರಂಪರೆಯುಳ್ಳವರು , ಜವಾರಿ ಮಣ್ಣಿನ ಸರಳ ಸಜ್ಜನಿಕೆಯ ಶುದ್ಧ ಹಸ್ತದ ಬೆಚ್ಚನೆಯ ಗುಣವುಳ್ಳ, ಮೃದು ಮಾತಿನ ಅಷ್ಟೇ ಕಟೋರವಾದಿ, ಸುಳ್ಳು ಪೊಳ್ಳು, ಗಿಲೀಟಿನ ಮಂದಿಯಿಂದಗಾವುದ ದೂರ.
ಬದುಕು ಹರಸಿ ಎರೇಸೀಮೆಯಿಂದ ಜವಳಿನಗರಕ್ಕೆ ಬಂದು ಕಾಟನ್ ಮಿಲ್, ಚಂದ್ರೋದಯ ಮಿಲ್ ಗಳಲ್ಲಿ ಕಾರ್ಮಿಕ ಕಾಯಕ ಮಾಡುತ್ತಲೇ ಮಿಲ್ ಕಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶೋಷಣೆ, ದಬ್ಬಾಳಿಕೆ ಮೆಟ್ಟಿನಿಂತವರು.ಕಾರ್ಮೀಕ ನೇತಾರ ಶಾಸಕ ಕಾ.ಪಂಪಾಪತಿ ಹ್ಯಾಟ್ರಿಕ್ ಗೆಲುವಿನ ಹಿಂದೆ ಒಡೆಯರ್ ಅವರಂತಹ ಸಾವಿರಾರು ಶ್ರಮಜೀವಿಗಳ ಬೇವರಿದೆ.
ಪಕ್ಕಾ ದಾವಣಗೆರೆ ಹಾವೇರಿ ಪಂಚಾಯಿತಿ, ತರಾತಿ ಗಡಿಗಳಿಂದ ದೂರ ವಿದ್ದು ಸಮಾಜವಾದಿ, ಲೋಹಿಯಾ,ಸಿದ್ದಾಂತದ ಜೆಪಿ ಚಳುವಳಿಯ ಜನತಾ ಪರಿವಾರ ಸೇರಿ ರಾಮಕೃಷ್ಣ ಹೆಗಡೆ, ದೇವೆಗೌಡ್ರ ಮೌಲ್ಯ ಧಾರಿತ ಸಿದ್ಧಾಂತ ಹಿಂಬಾಲಿಸಿ ದಾವಣಗೆರೆ ಯಲ್ಲಿ ಪಕ್ಷ ಸಿದ್ಧಾಂತ, ಮೇಲೆ ಪಕ್ಷ ಸಂಘಟನೆ ಕಟ್ಟಿ, ಪಾಲಿಕೆ, ವಿಧಾನ ಸಭಾ ಚುನಾವಣೆಯಲ್ಲಿ ಸಕ್ರಿಯವಾಗಿದ್ದು ಕಡೆಗೆ ರಾಜಕೀಯ ನಮ್ಮಂಥವರಿಗೆಲ್ಲ ಎಂಬ ಅರಿವು,
ಹಲವಾರು ಕನ್ನಡ ಪರ ಹೋರಾಟದಲ್ಲಿ ಸಕ್ರಿಯವಾಗಿ ಜಿಲ್ಲೆಯಲ್ಲಿ ಕನ್ನಡ ರಕ್ಷಣಾ ವೇದಿಕೆ ಆರಂಭಿಕವಾಗಿ ಅಸ್ತಿತ್ವಕ್ಕೆ ತಂದು ಹಾಲು ಯುವಕರನ್ನು ಹೋರಾಟಕ್ಕೆ ಸಜ್ಜುಗೊಳಿಸಿದ ಒಡೆಯರ್.
ಸಂಘಟನೆಯ ಒಳ ಜಾತಿ ಕರಣ, ವಸೂಲಿ ಕರಣ ವಿರೋಧಿಸಿ ಹೊರನೆಡೆದು ಕೈಯಲ್ಲಿ ಲೇಖನಿ ಹಿಡಿದು “ಪವಿತ್ರ ಪ್ರಜಾ” ಪತ್ರಿಕೆ ಮೂಲಕ ಸಮಾಜದ ಹಲವು ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ ಒಡೆಯರ್ ಬೆಂಗಳೂರಿನ ರಾಜಾದಾನಿ ಯಿಂದಲೂ ಮತ್ತೋಂದು “ಸಹಾಯವಾಣಿ ಪತ್ರಿಕೆ ಪ್ರಕಟಿಸಿ ಮುದ್ರಿತ ಪ್ರತಿ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮ ವೆಬ್ಸೈಟ್ ಮೂಲಕ ಆನ್ ಲೈನ್ ಪತ್ರಿಕೆ ಪ್ರಕಟಿಸಿ ಹೊರತರುತ್ತಿರವುದು ಹೆಮ್ಮೆಯ ಸಂಗತಿ.
ಇಂಥ ಅವೇಷ್ಟೋ ಕಷ್ಟ ಪಟ್ಟು ಬದುಕು ಕಟ್ಟಿಕೊಂಡ ಸಾಧಕರ ಗುರುತಿಸಿ ಕೊಡುವ ಇಂಡಿಯಾ ಐಕಾನ್ ಮೇನೇಜ್ಮೆಂಟ್ ಬುಕ್ ಕೊಡುವ ಸಾಧಕರ ಪ್ರಶಸ್ತಿ ನಮ್ಮ ದಾವಣಗೆರೆ ಒಡೆಯರ್ ರವರಿಗೆ ಬಂದಿರುವುದು ಅತ್ಯಂತ ಖುಷಿ.ಸಡಗರ.ಹೆಮ್ಮೆಯು ಕೂಡ.
ಹಿರಿಯ ಮಾಧ್ಯಮ ಗೆಳೆಯ, ನೆಚ್ಚಿನ ಒಡೆಯರ್ ಜೀ
ಸೂಕ್ತ ವ್ಯಕ್ತಿ ಗೆ ಸಂಧ ಗೌರವ….. ಅಭಿನಂದನೆಗಳು ನಿಮ್ಮ ಸಾರ್ಥಕ ಬದುಕಿಗೆ…….
ಪುರಂದರ್ ಲೋಕಿಕೆರೆ.