ಬೆಣ್ಣೆನಗರಿಗೆ ಬರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ..!

ದಾವಣಗೆರೆ : 2023 ರ ಚುನಾವಣೆ ಗೆಲ್ಲಲು ಈಗ ಪ್ರಧಾನಿ ಮೋದಿ ಕರ್ನಾಟಕಕ್ಕೆ ಲಗ್ಗೆ ಇಡುತ್ತಿದ್ದು, ಫೆಬ್ರವರಿ ಅಂತ್ಯಕ್ಕೆ ಪ್ರಧಾನಿ ಮೋದಿ ಬೆಣ್ಣೆ ನಗರಿಗೆ ಬರಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

ದಾವಣಗೆರೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಣ್ಣೆನಗರಿಗೆ ಪ್ರಧಾನಿ ಮೋದಿ ಬರಲಿದ್ದು, ಈ ಹಿಂದೆ ಕೈಗೊಂಡಿದ್ದ ಸಮಾವೇಶಕ್ಕಿಂತ ಬೃಹತ್ ಸಮಾವೇಶ ಕೈಗೊಳ್ಳಲಾಗುವುದು. ಅಂದಾಜು ಫೆಬ್ರುವರಿ ಕಡೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ದಾವಣಗೆರೆಯಲ್ಲಿ ಐತಿಹಾಸಿಕ ಕಾರ್ಯಕ್ರಮವನ್ನು ಬಿಜೆಪಿ ಹಮ್ಮಿಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇನ್ನೂ ಸ್ಥಳ,ದಿನಾಂಕ ನಿಗದಿಯಾಗಿಲ್ಲ. ಆದರೆ, ನರೇಂದ್ರ ಮೋದಿ ಐತಿಹಾಸಿಕ ಕಾರ್ಯಕ್ರಮಕ್ಕೆ ಇಲ್ಲಿಗೆ ಬರಲಿದ್ದಾರೆ ಎಂದಷ್ಟೇ ಅವರು ತಿಳಿಸಿದರು
ಇನ್ನು ಕಲ್ಲಿದ್ದಲು ಸ್ಟಾಕ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದಲ್ಲಿ 30 ದಿನಕ್ಕಾಗುವಷ್ಟು 31 ಮಿಲಿಯನ್ ಟನ್‌ನಷ್ಟು ಕಲ್ಲಿದ್ದಲು ದಾಸ್ತಾನಿದ್ದು, ಅಷ್ಟರಲ್ಲಿಯೇ ಮತ್ತೆ 15-16 ದಿನಕ್ಕಾಗುವಷ್ಟು ಕಲ್ಲಿದ್ದಲು ಬರಲಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಸ್ಪಷ್ಟಪಡಿಸಿದರು.ಸದ್ಯ ದಾಸ್ತಾನಿರುವ ಕಲ್ಲಿದ್ದಲನ್ನು 30 ದಿನಗಳವರೆಗೆ ಬಳಸಬಹುದು. ನಂತರ 15-16 ದಿನಕ್ಕಾಗುವಷ್ಟು ಕಲ್ಲಿದ್ದಲು ಸಂಗ್ರಹವಾಗಲಿದೆ. ದೇಶದಲ್ಲಿ ಕಲ್ಲಿದ್ದಲು ಎಷ್ಟು ಬೇಕೋ ಅಷ್ಟು ಕೊಡಲು ಬದ್ಧರಿದ್ದೇವೆ. ವಿದ್ಯುತ್ ಉತ್ಪಾದನೆಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ವಹಿಸುತ್ತೇವೆ ಎಂದರು.

ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಹಾತ್ಮ ಗಾಂಧಿ ತಮ್ಮವರೆಂದು ಅಂದುಕೊAಡಿದ್ದರೆ ಅದು ತಪ್ಪು. ಈಗಿನ ಗಾಂಧಿಗಳು ನಕಲಿಗಳು. ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕಾಗಲೇ ಇಡೀ ಕಾಂಗ್ರೆಸ್ಸನ್ನೇ ವಿಸರ್ಜಿಸುವಂತೆ ಮಹಾತ್ಮ ಗಾಂಧಿ ಹೇಳಿದ್ದರು. ಆದರೆ, ಅದನ್ನೇ ಹರಿಪ್ರಸಾದ್‌ರಂತಹವರು ಮರೆತಿದ್ದಾರೆ ಎಂದು ಅವರು ಟೀಕಿಸಿದರು.

.ಪ್ರಜಾಧ್ವನಿ ಬಸ್ಸು ಯಾತ್ರೆಯನ್ನು ಕಾಂಗ್ರೆಸ್ಸಿನವರು ಹಮ್ಮಿಕೊಂಡಿದ್ದಾರೆ. ಇದೇ ಕಾಂಗ್ರೆಸ್ಸಿನವರು ರಾಜಸ್ಥಾನದಲ್ಲಿ ನೀಡಿದ್ದ ಭರವಸೆ ಏನಾಯಿತು? ಛತ್ತೀಸಘಡದಲ್ಲಿ ನೀಡಿದ್ದ ಆಶ್ವಾಸನೆ ಏನಾಯ್ತು? ತಾನೇ ಕೊಟ್ಟಂತಹ ಭರವಸೆಗಳನ್ನು ಈಡೇರಿಸದ ಪಕ್ಷ ಕಾಂಗ್ರೆಸ್. ಈಗ ಯಾತ್ರೆ ಕೈಗೊಂಡ ಕಾಂಗ್ರೆಸ್ಸಿನವರು 5 ವರ್ಷ ಅಽಕಾರದಲ್ಲಿದ್ದಾಗ ಯಾಕೆ ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡಲಿಲ್ಲ ಎಂದು ಅವರು ಪ್ರಶ್ನಿಸಿದರು.

ಜೆಡಿಎಸ್ ಜೊತೆಗೆ ಸಮ್ಮಿಶ್ರ ಸರ್ಕಾರವಿದ್ದಾಗ, ರಿಮೋಟ್ ಕಂಟ್ರೋಲ್‌ನಲ್ಲಿದ್ದಾಗ ಯಾಕೆ ನೀವು 200 ಯೂನಿಟ್ ಉಚಿತ ವಿದ್ಯುತ್ ನೀಡಲಿಲ್ಲ? ಚುನಾವಣೆ ಸಮೀಪಿಸಿದಾಗ ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ಸದಾ ಮುಂಚೂಣಿಯಲ್ಲಿರುವ ಪಕ್ಷವಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಸುಳ್ಳುವ ಕಾಂಗ್ರೆಸ್ಸಿನ ಇತಿಹಾಸವೇ ಸುಳ್ಳಿನಿಂದ ಕೂಡಿದೆ. ಇಂತಹ ಪಕ್ಷದವರು ಈಗ ಉಚಿತ ವಿದ್ಯುತ್ ನೀಡುವ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಈಗ ಪ್ರಜಾಧ್ವನಿ ಯಾತ್ರೆ ಮಾಡುತ್ತಿರುವ ಪಕ್ಷವೇ ತುರ್ತು ಪರಿಸ್ಥಿತಿಯನ್ನು ಹೇರಿ, ಸಂವಿಧಾನದ ಕತ್ತು ಹಿಸುಕಿ, ಚುನಾಯಿತ ಸರ್ಕಾರಗಳನ್ನು ಕಿತ್ತೊಸೆದು, ಕುಟುಂಬ ರಾಜಕಾರಣ ಮಾಡಿದೆ. ಅಪ್ರಬುದ್ಧ, ಅರೆಕಾಲಿಕ ರಾಜಕಾರಣಿ ನೇತೃತ್ವದ ಕಾಂಗ್ರೆಸ್ ಪಕ್ಷದಿಂದ ಯಾವುದೇ ಹೊಸದನ್ನೂ ನಿರೀಕ್ಷಿಸುವಂತಿಲ್ಲ. ರಾಜ್ಯ, ದೇಶದ ಜನತೆಯೂ ಇಂತಹ ಅಪ್ರಬುಬ್ಧ, ಅರೆಕಾಲಿಕ ನಾಯಕನ ನಾಯಕತ್ವದ ಕಾಂಗ್ರೆಸ್ ಪಕ್ಷದ ಬಗ್ಗೆ ಜಾಗೃತರಾಗಿದ್ದಾರೆ ಎಂದು ರಾಹುಲ್ ಗಾಂಽ ವಿರುದ್ಧ ಪ್ರಹ್ಲಾದ್ ಜೋಷಿ ವಾ ಗ್ದಾಳಿ ನಡೆಸಿದರು.ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!