ಜೈಲು ಅಧಿಕಾರಿಗಳ ಭಯಕ್ಕೆ ಮೊಬೈಲ್ ನುಂಗಿದ ಖೈದಿ

ಜೈಲು ಅಧಿಕಾರಿಗಳ ಭಯಕ್ಕೆ ಮೊಬೈಲ್ ನುಂಗಿದ ಖೈದಿ

ಗೋಪಾಲಗಂಜ್‌: ಅಧಿಕಾರಿಗಳು ತಪಾಸಮೆಗೆ ಬಂದ ವೇಳೆ ಭಯಗೊಂಡ ಕೈದಿಯೊಬ್ಬ ಮೊಬೈಲ್ ನುಂಗಿದ ಘಟನೆ ನಡೆದಿದೆ.
ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕ್ವೈಷರ್‌ ಅಲಿ ಎಂಬಾತನೇ ತಪಾಸಣೆ ವೇಳೆ ಮೊಬೈಲ್ ನುಂಗಿದ ವ್ಯಕ್ತಿ. ಶನಿವಾರ ಜೈಲು ತಪಾಸಣೆ ವೇಳೆ ಈ ಘಟನೆ ನಡೆದಿದೆ.
ಗುರುವಾರ ವ್ಯಕ್ತಿಗೆ ಭಾರೀ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಈ ವೇಳೆ ತಾನು ಮೊಬೈಲ್‌ ನುಂಗಿರುವುದಾಗಿ ಹೇಳಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆ ಸಾಗಿಸಿ ಎಕ್ಸ್‌–ರೇ ಮಾಡಿಸಲಾಗಿದ್ದು, ಆತನ ಉದರದಲ್ಲಿ ಮೊಬೈಲ್‌ ಇರುವುದು ಪತ್ತೆಯಾಗಿದೆ.
ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಕೈದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಕ್ಸ್‌–ರೇ ವೇಳೆ ಅವರ ಹೊಟ್ಟೆಯಲ್ಲಿ ಅನಗತ್ಯ ವಸ್ತು ಇರುವುದು ಪತ್ತೆಯಾಗಿದೆ‘ ಎಂದು ವೈದ್ಯರಾದ ಸಲಾಂ ಸಿದ್ದೀಖಿ ಹೇಳಿದ್ದಾರೆ.
ಪ್ರಕರಣವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಬೇಕಿದೆ. ಘಟನೆ ಬಗ್ಗೆ ಅಧ್ಯಯನಕ್ಕೆ ಆಸ್ಪತ್ರೆಯು ಮೆಡಿಕಲ್‌ ಬೋರ್ಡ್‌ ರಚಿಸಿದ್ದು, ಹೆಚ್ಚಿನ ಚಿಕಿತ್ಸೆ ನೀಡಲು ಕೈದಿನ್ನು ಪಟ್ನಾ ಮೆಡಿಕಲ್‌ ಕಾಲೇಜಿಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!