ಖಾಸಗಿ ಶಾಲಾ ಶಿಕ್ಷಕರಿಗೆ ನ್ಯಾಯವಾದಿ ಬಳ್ಳಾರಿ ರೇವಣ್ಣರಿಂದ ಆಹಾರ ಸಾಮಗ್ರಿ ವಿತರಣೆ

ದಾವಣಗೆರೆ: ಕೋವಿಡ್ ಹಿನ್ನೆಲೆಯಲ್ಲಿ ಲಾಕ್ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಖಾಸಗಿ ಶಾಲಾ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗಕ್ಕೆ ಹಿರಿಯ ನ್ಯಾಯವಾದಿ ಬಳ್ಳಾರಿ ರೇವಣ್ಣ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.

ಖಾಸಗಿ ಶಾಲಾ ಶಿಕ್ಷಕರು ಮತ್ತು ಉಪನ್ಯಾಸ ವರ್ಗದವರು ಕೋವಿಡ್ ನ ಈ ಸಂಕಷ್ಟದ ಸಮಯದಲ್ಲಿ ಕೂಲಿಗಳಾಗಿ, ಕಟ್ಟಡ ಕಾರ್ಮಿಕರಾಗಿ, ತರಕಾರಿ ವ್ಯಾಪಾರ ಮಾಡುತ್ತಿದ್ದ ಹೊಟ್ಟೆ ಹೊರೆದುಕೊಳ್ಳುತ್ತಿದ್ದು ರೇವಣ್ಣನವರ ಸಹಾಯ ಸ್ಮರಣೀಯ ಎಂದು ಜಿಲ್ಲಾ ಮತ್ತು ತಾಲ್ಲೂ ಖಾಸಗಿ ಶಿಕ್ಷಕರ ಮತ್ತು ಉಪನ್ಯಾಸಕರ ಬಳಗದ ಅಧ್ಯಕ್ಷ ಎಸ್.ಡಿ. ರಂಗನಾಥ ಹೇಳಿದರು.

ಈ ಸಂದರ್ಭದಲ್ಲಿ ಶಕುಂತಲಾ ರೇವಣ್ಣ, ಪಂಕಜ ಧನುಷ್, ಶರ್ಮ, ಗಾಯತ್ರಿ, ಉಮೇಶ್, ಸಂತೋಷ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!