ದೈಹಿಕ ಮತ್ತು‌ ಮಾನಸಿಕ ಆರೋಗ್ಯಕ್ಕೆ ‘ಯೋಗ’ ಉತ್ತಮ ಪ್ರಯೋಗ : ಮಕ್ಕಳಿಗಾಗಿ ಉಚಿತ ಯೋಗ ಶಿಬಿರ – ಪುಷ್ಪವಾಲಿ

ದಾವಣಗೆರೆ: ದೈಹಿಕ ಮತ್ತು‌ ಮಾನಸಿಕ ಆರೋಗ್ಯಕ್ಕೆ ‘ಯೋಗ’ ಒಂದು ಉತ್ತಮ ಪ್ರಯೋಗವಾಗಿದ್ದು, ಯೋಗವು ರೋಗದಿಂದ ಮುಕ್ತಿ ಪಡೆದು ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಸಹಕಾರಿಯಾಗಿದೆ.

ಇದೇ ಜೂನ್ 21 ರಂದು ಏಳನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಇದ್ದು, ಭಾರತಕ್ಕೊಂದೆ ಪರಿಚಿತವಿದ್ದ ಯೋಗ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆಗಳಿಸಲು ಅದಕ್ಕಿರುವ ಶಕ್ತಿಯೇ ಕಾರಣವಾಗಿದೆ.

ಯೋಗವು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಒಂದು ಸಂತುಲಿತ ರೀತಿಯಲ್ಲಿ ಸುಧಾರಿಸಲು ಅಥವಾ ವೃದ್ಧಿಪಡಿಸಲು ಇರುವ ಒಂದು ವಿಧಾನ. ಅದು ಸಂಪೂರ್ಣ ಸ್ವ-ಸಾಫಲ್ಯ ಪಡೆಯುವ ಒಂದು ಹಾದಿಯನ್ನು ಒದಗಿಸುತ್ತದೆ. ಪತಂಜಲಿ ಮಹಾಋಷಿಯವರು ಹೇಳುವಂತೆ, ಯೋಗ ಎನ್ನುವುದು ಮನಸ್ಸಿನ ಮಾರ್ಪಾಡನ್ನು ಹತ್ತಿಕ್ಕುವ ಕ್ರಿಯೆಯಾಗಿದೆ.

ರಕ್ತದೊತ್ತಡ, ತೂಕ ಕಡಿಮೆ ಮಾಡಿಕೊಳ್ಳಲು, ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಉತ್ತಮ ಆರೋಗ್ಯದ ಜತೆಗೆ ಮನಸ್ಸಿನ ಶಾಂತಿಗಾಗಿ ಯೋಗ ಅತ್ಯಂತ ಪರಿಣಾಮಕರ ವಿಧಾನವಾಗಿದೆ‌. ಈಗಿನ ಕೋವಿಡ್ ಸಂದರ್ಭದಲ್ಲಿ ಯೋಗ ಮಾಡುವುದರಿಂದ ಉಸಿರಾಟದ ಸಮಸ್ಯೆಗಳು ಬರದಂತೆ ಲಂಗ್ಸ್ ಕಾಪಾಡಲು ಯೋಗ ಅತ್ಯಂತ ಅಗತ್ಯ ಪ್ರಯೋಗವಾಗಿದೆ.

ಮುಂದಿನ ಕೋವಿಡ್ ಮೂರನೇ ಅಲೆಯಿಂದ ಮಕ್ಕಳಿಗೆ ಹೆಚ್ಚು ಹಾನಿಯಾಗುತ್ತದೆ ಎಂದು ತಜ್ಞರು ಅಂದಾಜಿಸಿದ್ದು ಹಾಗಬಾರದೆಂದು ದಿನನಿತ್ಯ ಯೋಗ, ಪ್ರಾಣಾಯಾಮ ಮಾಡಲಾಗುತ್ತಿದೆ ಎನ್ನುತ್ತಾರೆ

-ಯೋಗ ಸಾಧಕಿ ಪುಷ್ಪವಾಲಿ. 

Leave a Reply

Your email address will not be published. Required fields are marked *

error: Content is protected !!