ಬಟ್ಟೆ ತೊಳೆಯುವ ವಿಷಯಕ್ಕೆ ಜಗಳ: ಸೈನಿಕನ ಕೊಲೆ
ಚೆನ್ನೈ: ಬಟ್ಟೆ ತೊಳೆಯುವ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆದು ಸೈನಿಕನಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ತಮಿಳು ನಾಡು ಕೃಷ್ಣಗಿರಿ ಜಿಲ್ಲೆಯ ಎಂ.ಜಿ.ಆರ್. ನಗರ ದಲ್ಲಿ ನಡೆದಿದೆ.
ಪ್ರಭು (28) ಭಾರತೀಯ ಯೋಧ ಚಾಕು ಇರಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ.
ಗ್ರಾಮದ ಏರಿಯಾದಲ್ಲಿ ಏಳೆಂಟು ಸಂಬಂಧಿಕರ ಮನೆಗಳಿವೆ. ಒಂದೇ ವಾಟರ್ ಟ್ಯಾಂಕ್ ಇದ್ದು, ಪ್ರತಿ ದಿನ ನೀರಿಗಾಗಿ ಇಲ್ಲಿ ಜಗಳ ನಡೆಯುತ್ತಿತ್ತು. ಸೈನ್ಯದಿಂದ ರಜೆಯ ಮೇಲೆ ಬಂದಿದ್ದ ಪ್ರಭು ಬಂದ ದಿನವೂ ಸಹ ಬಟ್ಟೆ ತೊಳೆಯುವ ಸಲುವಾಗಿ ನಡೆದಿದ. ಈ ಜಗಳ ತಾರಕಕ್ಕೆ ಹೋಗಿ ಪ್ರಭುವಿಗೆ ಚಾಕು ಹಾಕಲಾಗಿದೆ.
ತೀವ್ರ ಗಾಯಗೊಂಡಿದ್ದ ಪ್ರಭು ಫೆ.14ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.