ಯೂಟ್ಯೂಬ್ ಸಿಇಒ ಸೂಸನ್ ರಾಜೀನಾಮೆ.! ಭಾರತೀಯನಿಗೆ ಒಲಿಯಲಿದೆ ಸಿಇಒ ಸ್ಥಾನ.!

ಯೂಟ್ಯೂಬ್ ಸಿಇಒ ಸೂಸನ್ ರಾಜೀನಾಮೆ
ವಾಷಿಂಗ್ಟನ್: ಯೂಟ್ಯೂಬ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೂಸನ್ ವೊಜಿಸ್‌ಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ನನ್ನ ಕುಟುಂಬ, ಆರೋಗ್ಯ ಹಾಗೂ ವೈಯಕ್ತಿಕ ಯೋಜನೆಗಳತ್ತ ಗಮನ ಹರಿಸಲಿದ್ದೇನೆ ಎಂದೂ ಅವರು ತಮ್ಮ ಬ್ಲಾಗ್‌ನಲ್ಲಿ ಗುರುವಾರ ಬರೆದುಕೊಂಡಿದ್ದಾರೆ.
54 ವರ್ಷದ ಸೂಸನ್, ಯೂಟ್ಯೂಬ್‌ನ ಸಿಇಒ ಆಗಿ ಕಳೆದ 9 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮುನ್ನ ಅವರು ಗೂಗಲ್‌ನಲ್ಲಿ ಜಾಹೀರಾತು ವಿಭಾಗದ ಉಪಾಧ್ಯಕ್ಷೆಯಾಗಿದ್ದರು.
ಗುರುವಾರ ಸಂಸ್ಥೆಯ ನೂತನ ಸಿಇಒ ಆಗಿ ಚೀಫ್ ಪ್ರಾಡಕ್ಟ್ ಆಫೀಸರ್ ನೀಲ್ ಮೋಹನ್ ಅವರು ಅಧಿಕಾರ ವಹಿಸಿಕೊಳ್ಳುವರು ಎಂದವರು ಹೇಳಿದ್ದಾರೆ.