rain; ರಾಜ್ಯದಲ್ಲಿ ಐದು ದಿನ ಭಾರೀ ಮಳೆ?
ಬೆಂಗಳೂರು, ಸೆ.07: ರಾಜ್ಯದಲ್ಲಿ ಸತತ ಐದು ದಿನ ಭಾರೀ ಮಳೆಯಾಗಲಿದೆ (rain) ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಕೆಲವು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದೆ.
ನೈಋತ್ಯ ಮಾನ್ಸುನ್ ಚುರುಕುಗೊಂಡ ಪರಿಣಾಮ ಸೆ.12ರವರೆಗೆ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
application; ರೈತರಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ
ಇನ್ನು ಬೆಂಗಳೂರು ಸೇರಿದಂತೆ ಉತ್ತರ ಒಳನಾಡು, ಕರಾವಳಿ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಅಲ್ಲದೇ ಉತ್ತರ ಕನ್ನಡ, ದಕ್ಷಿಣ ಕನ್ನಡ,ಉಡುಪಿ, ಕೊಡಗು, ಬೀದರ್ ಕಲ್ಬುರ್ಗಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ.