school; ಶಾಲೆಗಳು ಭಾರತೀಯ ಸಂಸ್ಕ್ರತಿ ಕಲಿಸುವ ಕೇಂದ್ರಗಳಾಗಬೇಕು-ಜಗನ್ನಾಥ್ ನಾಡಿಗೇರ್

ಚಿತ್ರದುರ್ಗ, ಸೆ.06: ಶಾಲೆಗಳು (school) ಭಾರತೀಯ ಸಂಸ್ಕ್ರತಿ ಕಲಿಸುವ ಕೇಂದ್ರಗಳಾಗಬೇಕೆಂದು ಸತ್ಯಸಾಯಿ ಶಿಕ್ಷಣ‌ಸಂಸ್ಥೆಯ ಸಂಯೋಜಕರಾದ ಜಗನ್ನಾಥ್ ನಾಡಿಗೇರ್‌ತಿಳಿಸಿದರು.

ಚಿತ್ರದುರ್ಗ ನಗರದ ಐಯುಡಿಪಿ‌ಬಡಾವಣೆಯಲ್ಲಿನ ತಪೋವನ ಟ್ರಸ್ಟ್ ನ ಪ್ರಶಾಂತಿ ವಿದ್ಯಾಲಯದಲ್ಲಿ ‌ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ (Krishna Janmashtami) ಕಾರ್ಯಕ್ರಮದಲ್ಲಿ ಪೋಷಕರುಹಾಗು‌ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು‌ಮಾತನಾಡಿದರು.ಇಂದಿನ ಸಮಾಜದಲ್ಲಿ ತಂದೆತಾಯಿ ಮೇಲಿನ ಗೌರವ ಹಾಗು ಪ್ರೀತಿಯ ಭಾವನೆ ಇಲ್ಲವಾಗ್ತಿದೆ.ಹೀಗಾಗಿ ತಂದೆತಾಯಿಯನ್ನು ವೃದ್ದಾಶ್ರಮಕ್ಕೆ ಕಳಿಸದೇ ಸದಾ ಅವರನ್ನು ಪ್ರೀತಿಸುತ್ತಾ ಸುಸಂಸ್ಕ್ರತ ಭಾವನೆಯನ್ನು ಮಕ್ಕಳಲ್ಲಿ ಬೆಳೆಸುವ ಕಾರ್ಯವನ್ನು ಪ್ರಶಾಂತಿ ವಿದ್ಯಾಲಯ ‌ಮಾಡ್ತಿದೆ.ಈ ಕಾರ್ಯಕ್ಕೆ ಪೋಷಕರು ಕೈ ಜೋಡಿಸಬೇಕಿದೆ‌ ಎಂದರು.

ಶಿಕ್ಷಣ ಕಲಿಸುವ ಸಂಸ್ಥೆಗಳಿಗೆ ಆಡಂಬರ ಮುಖ್ಯವಲ್ಲ.ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶಿಸ್ತುಬದ್ದ ಸಂಸ್ಕ್ರತಿ ಕಲಿಸುವ ಮುಖ್ಯ ಎಂದರು.ಸಣ್ಣ ಸಣ್ಣ ಶಾಲೆಗಳಲ್ಲಿ ಓದಿದ ತಕ್ಷಣ ಅವರು ಬುದ್ದಿವಂತರಾಗಲ್ಲ ಅನ್ನೋದು‌ತಪ್ಪು ಕಲ್ಪನೆ.ಇಂತಹ ಚಿಕ್ಕ ಸಂಸ್ಥೆಗಳಲ್ಲಿಯೇ ಅದ್ಬುತ ಪ್ರತಿಭೆಗಳು ಹಾಗು ಸಾಧಕರು ಹೊರಹೊಮ್ಮಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.

krishna janmashtami; ಆರ್ ಜಿ ಪ್ರಿ ಸ್ಕೂಲ್ ನಲ್ಲಿ ಕೃಷ್ಣ ಜನ್ಮಾಷ್ಟಮಿ

ಇದೇ ವೇಳೆ ಮಾತನಾಡಿದ ಮುಖ್ಯ ಅಥಿತಿಗಳಾದ ಜಯ್ಯಣ್ಣ ಅವರು,ಚಿಕ್ಕದಾಗಿ ಆರಂಭವಾದ ಈ ಶಾಲೆ‌ಇಂದು ಚೊಕ್ಕದಾಗಿ ಹೆಮ್ಮರವಾಗಿ ಬೆಳೆದಿದೆ.ದಯೆ,ಧರ್ಮ‌ ಹಾಗು ಭಕ್ತಿಯ ಪ್ರತೀಕವಾಗಿ ಈ ಶಾಲೆ‌ಬೆಳೆದಿದೆ.ಈ ಶಾಲೆಯಲ್ಲಿ ಶಿಕ್ಷಣವೊಂದೆ ಮಾನದಂಡವಲ್ಲ.ಜೀವನದಲ್ಲಿ‌ ಮಕ್ಕಳು ಬದುಕುವ ಸಂಸ್ಕಾರವನ್ನು ಈ ಶಾಲೆ ನೀಡುತ್ತಿದೆ.

ಕಡಿಮೆ ಹಣದಲ್ಲಿ ಸಿನಿಮಾ‌ ತೆಗೆದು,ರಾಷ್ಟ್ರ ತೆಗೆದುಕೊಳ್ಳುವಂತೆ,ಅತಿ ಕಡಿಮೆ ಶುಲ್ಕದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಶಾಲೆಗಳು ಇಂದು ಅಗತ್ಯವಿದೆ.ಹೀಗಾಗಿ ಪೋಷಕರು ಕೂಡ ಹಣವಸೂಲಿಗಿಳಿದಿರುವ ಖಾಸಗಿ ಶಾಲೆಗಳನ್ನಹ ಕಡೆಗಣಿಸಿ‌ಇಂತಹ ಸಂಸ್ಕ್ರತಿ ಆಧಾರಿತ‌ಶಾಲೆಗಳಿಗೆ ತಮ್ಮ. ಮಕ್ಕಳನ್ನು ಧಾಖಲಿಸುವಂತೆ ಕರೆ ನೀಡಿದರು.

Bhadra Dam; ಎಡದಂಡೆ ಕಾಲುವೆ ಇಂದಿನಿಂದಲೇ ನೀರು ಹರಿವು ಸ್ಥಗಿತ

ಇನ್ನು ಅದ್ದೂರಿಯಾಗಿ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪುಟ್ಟ ಪುಟ್ಟ ಪುಟಾಣಿಗಳು ರಾಧೆ,ಕೃಷ್ಣನ ವೇಷಭೂಷಣ ಧರಿಸಿ‌ ಸಂಭ್ರಮಿಸಿದರು. ಈ ವೇಳೆ ರಾಧೆಕೃಷ್ಣರ ವೇಷಧರಿಸಿದ್ದ ಮಕ್ಕಳು ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದರು.ಮಕ್ಕಳ‌ಪೋಷಕರು ಸಹ ಅವರ ಆಕರ್ಷಕ ನೃತ್ಯ,ನಟನೆ ಮತ್ತು ವೇಷಭೂಷಣವನ್ನು ಕಣ್ತುಂಬಿಕೊಂಡು ಪುಳಕಿತರಾದರು

ಇದೇ ವೇಳೆ ಶಾಲೆಯ ಮುಂಭಾಗದಲ್ಲಿ‌ ನಿರ್ಮಾಣವಾದ ನೂತನ ಸಾಯಿಕಲಾ ವೇದಿಕೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸೋಮನಾಥ್ ಉದ್ಘಾಟಿಸಿದರು. ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ,ಕಾರ್ಯದರ್ಶಿ ಮಾರುತೇಶ್ ರೆಡ್ಡಿ, ಅಥಿತಿಗಳಾದ ಜಯ್ಯಣ್ಣ,ಸಂಸ್ಥೆಯ ಮುಖಂಡರಾದ ರಮೇಶ್ ಇಟಗಿ ಶಿಕ್ಷಕಿಯರಾದ ಉಷಾ,ಸಂಪದಾ,ಸಂದ್ಯ ಹಾಗು ಮಕ್ಕಳ ಪೊಷಕರು ಇದ್ದರು

Leave a Reply

Your email address will not be published. Required fields are marked *

error: Content is protected !!