ರಾಜಾಜಿನಗರ: ‘ಭವ್ಯ ಭರವಸೆ’ಗೆ ಅಡ್ಡಿಯಾದರೇ ವಲಸೆ ಬಂದ ನಾಯಕ? ಪುಟ್ಟಣ್ಣ ‘ಕೈ’ಗೆ ಟಿಕೆಟ್..!

ರಾಜಾಜಿನಗರ: ‘ಭವ್ಯ ಭರವಸೆ’ಗೆ ಅಡ್ಡಿಯಾದರೇ ವಲಸೆ ಬಂದ ನಾಯಕ

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರವನ್ಬು ಗೆದ್ದೇ ಗೆಲ್ಲಬೇಕೆಂಬ ಹಠದಲ್ಲಿರುವ ಕಾಂಗ್ರೆಸ್ ಇದೀಗ ಭರ್ಜರಿ ಕಸರತ್ತಿನಲ್ಲಿ ತೊಡಗಿದೆ. ಹಾಗಾಗಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಸರತ್ತು ನಡೆಸಿದೆ.
ಸತತ ಗೆಲುವಿನಿಂದ ಬೀಗುತ್ತಿರುವ ಮಾಜಿ ಸಚಿವ ಸುರೇಶ್ ಕುಮಾರ್ ವಿರುದ್ದ ಬಿಜೆಪಿ ಕಾರ್ಯಕರ್ತರೇ ಮುನಿಸಿಕೊಂಡಿದ್ದು, ಈ ಪರಿಸ್ಥಿತಿಯ ಲಾಭ ಪಡೆಯಲು ಕಾಂಗ್ರೆಸ್ ಶತಪ್ರಯತ್ನ ಮಾಡಿದೆ. ಹಾಗಾಗಿ ಈ ಹಿಂದೆ ಜೆಡಿಎಸ್ ಗರಡಿಯಲ್ಲಿ ಪಳಗಿರುವ, ಈ ವರೆಗೂ ಬಿಜೆಪಿಯಲ್ಲಿ ಗುರುತಿಸಿರುವ ಪುಟ್ಟಣ್ಣ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ರಾಜಾಜಿನಗರದಲ್ಲಿ ರಣವ್ಯೂಹ ನಡೆಸುತ್ತಿದೆ.

ರಾಜಾಜಿನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹನೂರ್ತಿ ಅವರು ರಾಜಾಜಿನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರ ಬಗ್ಗೆ ನಾಯಕರ ವಲಯದಲ್ಲಿ ಒಲವಿಲ್ಲ ಎನ್ನಲಾಗಿದೆ. ‘ಭವ್ಯ ಭರವಸೆ’ ಘೋಷಣೆಯೊಂದಿಗೆ ಟಿಕೆಟ್ ಘೋಷಣೆಗೆ ಮುನ್ನವೇ ಭವ್ಯ ನರಸಿಂಹಮೂರ್ತಿ ಅವರು ಪ್ರಚಾರ ಕೈಗೊಂಡಿದ್ದಾರೆ. ಆಸರೆ ಇದೀಗ ರಾಜಾಜಿನಗರ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಒಲವು ಹೊಂದಿದ್ದಾರೆ ಎನ್ನಲಾಗಿದೆ ‌

ಈ ಸಂಬಂಧ ದೆಹಲಿಯಲ್ಲಿ ಶುಕ್ರವಾರ ನಡೆದ ಎಐಸಿಸಿ ನಾಯಕರ ಜೊತೆಗಿನ ಸಭೆಯಲ್ಲಿ ಚರ್ಚೆ ನಡೆದಿದ್ದು, ಪುಟ್ಟಣ್ಣ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಸಹಮತ ವ್ಯಕ್ತಪಡಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!