ವೃದ್ಧರೊಟ್ಟಿಗೆ ಸಾರ್ಥಕತೆಯ ಜನುಮದಿನ ಆಚರಿಸಿಕೊಂಡ ರೈತ ನಾಯಕ ಕಲ್ಲಿಂಗಪ್ಪರ ಪುತ್ರಿ ರಾಜೇಶ್ವರಿ 

ವೃದ್ಧರೊಟ್ಟಿಗೆ ಸಾರ್ಥಕತೆಯ ಜನುಮದಿನ ಆಚರಿಸಿಕೊಂಡ ರೈತ ನಾಯಕ ಕಲ್ಲಿಂಗಪ್ಪರ ಪುತ್ರಿ ರಾಜೇಶ್ವರಿ 
ದಾವಣಗೆರೆ: ರೈತ ನಾಯಕರು ಹಾಗೂ ಬಿಜೆಪಿ ಮುಖಂಡರಾದ ಕೆ. ಪಿ. ಕಲ್ಲಿಂಗಪ್ಪರ ಪುತ್ರಿ ಕೆ. ಪಿ. ರಾಜೇಶ್ವರಿ ಅವರ ಜನುಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ನಗರದ ಎಂಸಿಸಿ ಎ ಬ್ಲಾಕ್ ನಲ್ಲಿನ  ವನಿತಾ ಸಮಾಜದ ವೃದ್ಧಾಶ್ರಮದಲ್ಲಿ ವಿಶಿಷ್ಟವಾಗಿ ಜನುಮದಿನ ಆಚರಿಸಿಕೊಂಡರು. ವನಿತಾ ಸಮಾಜದ ವೃದ್ಧಾಶ್ರಮದಲ್ಲಿ ವೃದ್ಧರು ಹಾಗೂ ಮಂಗಳಮುಖಿಯರಿಗೆ ಹೊಸ ಬಟ್ಟೆಗಳನ್ನು ನೀಡಿ ಗೌರವಿಸುವ ಮೂಲಕ ಮಾನವೀಯತೆ ಮೆರೆದರು.
ಮೊದಲಿನಿಂದಲೂ ರೈತಪರ, ಜೀವಪರ, ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಕೆ. ಪಿ. ಕಲ್ಲಿಂಗಪ್ಪರು ಹೋರಾಟದಿಂದ ಬಂದವರು. ಈಗಲೂ ಹೋರಾಟವೇ ಅವರ ಜೀವನ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಕಲ್ಲಿಂಗಪ್ಪ ಅವರ ಹಾದಿಯಲ್ಲಿ ಪುತ್ರಿ ನಡೆಯುತ್ತಿದ್ದಾರೆ. ತಮ್ಮ ಜನುಮದಿನವನ್ನು ಅದ್ಧೂರಿಯಾಗಿ ಆಚರಿಸದೇ ವೃದ್ಧರ ಜೊತೆ ಆಚರಿಸಿಕೊಳ್ಳುವ ಮೂಲಕ ಸಾರ್ಥಕತೆ ಮೆರೆದರು.
ವೃದ್ಧರೊಟ್ಟಿಗೆ ಸಾರ್ಥಕತೆಯ ಜನುಮದಿನ ಆಚರಿಸಿಕೊಂಡ ರೈತ ನಾಯಕ ಕಲ್ಲಿಂಗಪ್ಪರ ಪುತ್ರಿ ರಾಜೇಶ್ವರಿ 
ಈ ಸಂದರ್ಭದಲ್ಲಿ ಅವರ ತಂದೆ ಬಿಜೆಪಿ ಪಕ್ಷದ ಮುಖಂಡರೂ ಹಾಗೂ ರೈತ ನಾಯಕರಾದ ಕೆ. ಪಿ. ಕಲ್ಲಿಂಗಪ್ಪ ಅವರ ಜೊತೆಗೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆಲೂರು ನಿಂಗರಾಜ್, ಬಿಜೆಪಿ ಮುಖಂಡರೂ ಆದ ಸ್ಮಾರ್ಟ್ ಸಿಟಿ ಸದಸ್ಯ ಮೋಹನ್ ಕುಮಾರ್, ಕೆರೆನಹಳ್ಳಿ ಮಂಜುನಾಥ್ ಹಾಜರಿದ್ದು ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಲೂರು ನಿಂಗರಾಜ್ ಅವರು, ಜನುಮದಿನವನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಡಂಬರದಿಂದ ಆಚರಿಸಿಕೊಳ್ಳುತ್ತಾರೆ. ಮಾತ್ರವಲ್ಲ ಅಲ್ಲಿ ಅದ್ಧೂರಿತನ ಇರುತ್ತದೆ. ಆದರೆ, ಕಲ್ಲಿಂಗಪ್ಪರ ಚಿಂತನೆಯಂತೆ ಪುತ್ರಿಯೂ ಸಹ ಸರಳವಾಗಿ ಜನುಮದಿನ ಆಚರಿಸಿಕೊಂಡರು. ಮಕ್ಕಳು ಬಿಟ್ಟು ಹೋದ ತಂದೆ ತಾಯಿ ಜೊತೆ ಬರ್ತ್ ಡೇ ಆಚರಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಇದೇ ರೀತಿಯಲ್ಲಿ ನಿರ್ಗತಿಕರು, ವೃದ್ಧರ ಜೊತೆ ಸೆಲಬ್ರೆಟ್ ಮಾಡುವ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಂಡರು ಎಂದು ಹೇಳಿದರು.
ಈ ರೀತಿಯ ಸಾರ್ಥಕತೆಯ ಜನುಮದಿನ ಬೇರೆಯವರಿಗೂ ಪ್ರೇರಣೆ. ಸಮಾಜದಲ್ಲಿ ನಿಕೃಷ್ಟವಾಗಿ ಕಾಣುವ ಮಂಗಳಮುಖಿಯವರಿಗೂ ಬದುಕಿದೆ, ಅವರೂ ಎಲ್ಲರಂತೆ ಬದುಕುವಂತಾಗಬೇಕು. ಅವರನ್ನು ಕೀಳಾಗಿ ನೋಡುವುದನ್ನು ಬಿಡಬೇಕು ಎಂಬ ಭಾವನೆ ಎಲ್ಲರ ಮೂಡುವಂತಾಗುವ ದಿಸೆಯಲ್ಲಿ ಅವರನ್ನು ಆಹ್ವಾನಿಸಿ,  ಗೌರವಿಸಿ, ಬಟ್ಟೆ ನೀಡಿದ್ದು ತುಂಬಾ ಖುಷಿಯ ವಿಚಾರ ಎಂದು ಆಲೂರು ನಿಂಗರಾಜ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!