raksha bandhan; ರಕ್ಷಣೆಯ ಕವಚ ರಕ್ಷಾ ಬಂಧನ- ಮೀನಾಕ್ಷಿ ಬಿ., ವಿದ್ಯಾರ್ಥಿನಿ

ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ ಆ ದಿನ ಸಹೋದರಿಯರು ತಮ್ಮ ಸಹೋದರನಿಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಇದಾಗಿದೆ. ರಕ್ಷಾ ಬಂಧನ (raksha bandhan) ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ.

ಪ್ರತಿಯೊಬ್ಬ ಸಹೋದರಿಯೂ ಸಮಾಜದ ದುಷ್ಟ ಶಕ್ತಿಗಳಿಂದ ರಕ್ಷಿಸಿ ಎಂದು ತನ್ನ ಸಹೋದರನಿಗೆ ರಾಖಿಯನ್ನು ಕಟ್ಟುತ್ತಾಳೆ. ರಕ್ಷಾ ಬಂಧನ ಅಣ್ಣ ತಂಗಿಯರ ನಡುವಿನ ಭಾಂದವ್ಯವನ್ನು ಪೆಸೆಯು ದಾಗಿದೆ ಸೋದರ ಸೋದರಿ ಎಂಬುದು ಅತ್ಯಂತ ಅದ್ಭುತ ಸಂಬಂಧ ನಿಜ ಬಾಲ್ಯದಲ್ಲಿ ಸಣ್ಣಪುಟ್ಟ ವಿಷಯಕ್ಕೆ ಒಂದು ಕ್ಷಣ ಇಬ್ಬರು ನಡುವೆ ದೊಡ್ಡ ಜಗಳವೇ ನಡೆಯುತ್ತದೆ ಅದು ಜಗಳ ನಡೆದ ಸ್ವಲ್ಪವೇ ಸಮಯದ ನಂತರ ಒಬ್ಬರನ್ನೊಬ್ಬರು ಪ್ರೀತಿಯ ಅಪ್ಪುಗೆಯಿಂದ ಮೊದಲಿನಂತಾಗುತ್ತಾರೆ ಜಗಳದ ನಂತರ ಅಪ್ಪ ಅಮ್ಮನ ಬಳಿ ದೂರಿನ ಪಟ್ಟಿಯೂ ಹೋದರು ಆದರೆ ಈ ಮುನಿಸು ಮನಸ್ತಾಪ ಕ್ಷಣಿಕವಾಗಿದೆ. ಪ್ರೀತಿ ಮಾತ್ರ ಸದಾ ಕಾಲ ಎತ್ತರ ಎಂಬುದು ಸತ್ಯವಾಗಿದೆ.

ಒಡಹುಟ್ಟಿದವರ ಪ್ರೀತಿ, ಕಾಳಜಿ, ತಮಾಷೆ, ಮುನಿಸು, ನಗು ,ಜಗಳಗಳು, ಪ್ರತಿಯೊಂದು ಪ್ರೀತಿಯನ್ನು ವ್ಯಕ್ತಪಡಿಸುವ ಸಂಕೇತವಾಗಿದೆ. ಒಬ್ಬ ಅಣ್ಣ ತನ್ನ ತಂಗಿಯನ್ನು ಪ್ರೀತಿಸುವಲ್ಲಿ ಮೊದಲ ಸ್ಥಾನ ತಂದೆ ಬಿಟ್ಟರೆ ಎರಡನೇ ಜಾಗವನ್ನು ಪರಿಪೂರ್ಣವಾಗಿ ತುಂಬುವವನು ತಂಗಿಯ ಜೀವನದಲ್ಲಿ ಅಣ್ಣನೇ ಮೊದಲನೆಯವನಾಗಿದ್ದಾನೆ. ತನ್ನೆಲ್ಲ ನೋವನ್ನು ಜವಾಬ್ದಾರಿಯನ್ನು ಮುಚ್ಚಿಟ್ಟು ತನ್ನ ತಂಗಿಯನ್ನು ಮಹಾರಾಣಿಯಂತೆ ಯಾವುದೇ ಚಿಕ್ಕ ತೊಂದರೆಯಾಗಲು ಬಿಡದಂತೆ ಕಾವಲುಗಾರನಾಗಿ ನೋಡಿಕೊಳ್ಳುತ್ತಾನೆ. ರಕ್ಷಾಬಂಧನ ಎಂಬುದು ರಕ್ಷಣೆಯ ಬಂದ ಎಂಬುದನ್ನು ಸೂಚಿಸುತ್ತದೆ ಈ ಮಂಗಳಕರ ದಿನದಂದು ಸಹೋದರರು ತಮ್ಮ ಸಹೋದರಿಯರಿಗೆ ಎಲ್ಲಾ ಹಾನಿ ಮತ್ತು ತೊಂದರೆಗಳಿಂದ ರಕ್ಷಿಸಲು ಭರವಸೆ ನೀಡುತ್ತಾರೆ ಮತ್ತು ದುಷ್ಟರಿಂದ ರಕ್ಷಿಸಲು ದೇವರನ್ನು ಪ್ರಾರ್ಥಿಸುತ್ತಾರೆ ಈ ಹಬ್ಬವು ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಬರುವ ಶ್ರಾವಣ ಪೂರ್ಣಿಮೆ ಎಂದು ಬರುತ್ತದೆ.

ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುವ ಸಹೋದರಿ ತನ್ನ ಸಹೋದರನಿಗೆ ರಾಕಿ ಕಟ್ಟಿ ಸಿಹಿ ತಿಂಡಿ ತಿನ್ನಿಸುವ ಮೂಲಕ ಸಹೋದರ ತನ್ನ ತಂಗಿಗೆ ಉಡುಗೊರೆಯನ್ನು ನೀಡುತ್ತಾನೆ. ಈ ಸರಳ ರಾಕಿ ಸಮಾರಂಭವು ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯ ಶಾಶ್ವತ ಬಂದವನ್ನು ಬಲಪಡಿಸುತ್ತದೆ ಯಾವಾಗಲೂ ತಂಗಿ ಮುಖದಲ್ಲಿ ನಗು ನೋಡುವುದೇ ಪ್ರತಿಯೊಬ್ಬ ಅಣ್ಣನ ಬಯಕೆ ಆಸೆ ಆಗಿರುತ್ತದೆ. ಒಬ್ಬ ಅಣ್ಣ ತಂಗಿಯ ಮೇಲೆ ಇಟ್ಟಿರುವ ಪ್ರೀತಿಯನ್ನು ತೋರಿಸಿಕೊಳ್ಳದೆ ಹೋದರು ಸಹ ತಂಗಿಯನ್ನು ಅವನಷ್ಟು ಪ್ರೀತಿಸುವ ವ್ಯಕ್ತಿ ಮತ್ತೊಬ್ಬನನ್ನು ಪ್ರಪಂಚದಲ್ಲಿ ಹುಡುಕಲು ಅಸಾಧ್ಯ. ತಂಗಿಯ ತೊಂದರೆಗಳಿಗೆ ಕಾವಲುಗಾರನಾಗಿ ಸದಾ ಜೊತೆಯಲ್ಲಿ ನಿಂತು ಕಾಪಾಡುವ ವ್ಯಕ್ತಿಯಾಗಿ , ಅವಳ ಆಸೆ ಕನಸುಗಳಿಗೆ ರೆಕ್ಕೆಯನ್ನು ಕಟ್ಟಿ ಸ್ವತಂತ್ರವಾಗಿ ತನ್ನ ಜೀವನದ ಬದುಕನ್ನು ಕಟ್ಟಿಕೊಳ್ಳಲು ಅವಳ ಬೆನ್ನ ಹಿಂದೆ ನಿಂತು ಹಾರೈಸುವುದರೊಂದಿಗೆ ಅವಳ ಎಲ್ಲಾ ಕಷ್ಟ ಸುಖ ಸಂತೋಷಗಳಲ್ಲಿ ಭಾಗಿಯಾಗಿ ಕಣ್ಣ ರೆಪ್ಪೆಯಂತೆ ಕಾಪಾಡಿಕೊಳ್ಳುತ್ತಾ ಸಂತೋಷವಾಗಿ ನೋಡಿಕೊಳ್ಳುವ ಏಕೈಕ ವ್ಯಕ್ತಿ .

ಕೆಲವೊಂದು ಬಾರಿ ಒಡಹುಟ್ಟಿದವರು ಆಗದೆ ಹೋದರು ಸಹ ಒಡಹುಟ್ಟಿದವರಷ್ಟೇ ಪ್ರೀತಿ, ಕಾಳಜಿ, ತೋರಿಸುತ್ತಾ ಸಂತೋಷದಿಂದ ನೋಡಿಕೊಳ್ಳುತ್ತಾರೆ. ಅಣ್ಣ ತಂಗಿ ಎಂದ ಕರಿಯಲು ಸ್ವಂತ ರಕ್ತ ಹಂಚಿಕೊಂಡು ಹುಟ್ಟದೆ ಹೋದರು ಸಹ ಮನಸ್ಸಿನ ಒಂದು ಒಳ್ಳೆಯ ಭಾವನೆಯಿಂದ ಕೂಡ ಅಣ್ಣ-ತಂಗಿ ಆಗಬಹುದು. ಅಣ್ಣ ತಂಗಿ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದು ಒಂದು ಪವಿತ್ರವಾದ ಸಂಬಂಧವಾಗಿದೆ.

ಮೀನಾಕ್ಷಿ ಬಿ.
ದ್ವಿತೀಯ ವರ್ಷದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ
ದಾವಣಗೆರೆ ವಿಶ್ವವಿದ್ಯಾನಿಲಯ

Leave a Reply

Your email address will not be published. Required fields are marked *

error: Content is protected !!