raksha bandhan; ರಕ್ಷಾ ಬಂಧನ ಮಹತ್ವ ಮತ್ತು ಭದ್ರವಾಗಿ ಬಂಧನವನ್ನು ಉಳಿಸುವುದೇ ರಕ್ಷಾಬಂಧನ- ಬಸವರಾಜ್ ಬಣಕಾರ್, ವಿದ್ಯಾರ್ಥಿ

ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ. ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಭಾವನೆಯನ್ನು ಹೊಂದಿರುತ್ತದೆ. ರಕ್ಷಾ ಬಂಧನ (raksha bandhan) ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ.

ಶ್ರಾವಣ ಮಾಸದ ಹುಣ್ಣಿಮೆಯೆಂದು ಈ ರಕ್ಷಾಬಂಧನವನ್ನು ಇಡೀ ಭಾರತಾದ್ಯಂತ ಆಚರಿಸಲಾಯಿತು. ಇದು ಸಹೋದರ ಮತ್ತು ಸಹೋದರಿಯರ ನಡುವೆ ನಡೆಯುವ ಒಂದು ಹಬ್ಬ. ಸಹೋದರಿಯೂ ಸಹೋದರನ ಕೈಗೆ ರಾಖಿಯನ್ನು ಕಟ್ಟುವ ಮೂಲಕ ಅವರ ರಕ್ಷಣೆಯನ್ನು ಬೇಡಿಕೊಂಡು ಸಂತೋಷದಿಂದ ನಡೆಸುವ ಹಬ್ಬವಾಗಿದೆ. ಸಹೋದರಿಯರು ಸಹೋದರನ ಕೈಗೆ ರಾಖಿಯನ್ನು ಕಟ್ಟಿ ಅವರಿಗೆ ಆರತಿಯನ್ನು ಮಾಡಿ ಸಿಹಿ ಪದಾರ್ಥಗಳನ್ನು ತಿಳಿಸುತ್ತಾರೆ. ಸಹೋದರನು ಸಹೋದರಿಯರಿಗೆ ಉಡುಗೊರೆಯನ್ನು ಕೊಡುವುದು ಈ ಹಬ್ಬದ ವಿಶೇಷತೆ.

ಒಡಹುಟ್ಟಿದವರಲ್ಲದೆ ಹೊರಗಿನವರನ್ನು ಕೂಡ ಸಹೋದರನಂತೆ ಭಾವಿಸಿ ನಡೆದುಕೊಳ್ಳಬೇಕೆಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಹಬ್ಬವೇ ರಾಖಿ ಹಬ್ಬ. ಹಿಂದೆ ಯುದ್ಧಕ್ಕೆ ಹೋಗುವ ತಮ್ಮ ಸಹೋದರ ಮತ್ತು ಊರಿನ ಇತರ ಯುವಕರಿಗೆ ಮಹಿಳೆಯರು ರಾಖಿ ಕಟ್ಟಿ ಯುಗದಲ್ಲಿ ಗೆದ್ದು ಬರುವಂತೆ ಹಾರೈಸಿ ಕಳುಹಿಸುತ್ತಿದ್ದರು. ಯಾವುದೇ ಬಂಧವು ಭದ್ರವಾಗಿ ಉಳಿಯಬೇಕಾದರೆ ನಂಬಿಕೆ ಎಂಬ ಬುನಾದಿ ಅತ್ಯಗತ್ಯ. ನಂಬಿಕೆ ಇರುವವರೆಗೂ ಮಾತ್ರ ಸಂಬಂಧಗಳು ಜೀವಂತವಾಗಿರುತ್ತವೆ. ಒಂದು ಹಂತದಲ್ಲಿ ಸಂಬಂಧಗಳನ್ನು ಬೆಳೆಸುವ ಈ ನಂಬಿಕೆ ಎನ್ನುವ ಕೊಂಡಿಯನ್ನು ಆಚರಣೆಗಳ ಮೂಲಕ ನಮ್ಮೆದುರು ತಂದಿಡುತ್ತದೆ. ಇಂತಹ ಆಚರಣೆಗಳಲ್ಲಿ ರಕ್ಷಾಬಂಧನ ಹಬ್ಬವು ಒಂದು.

ಹಿಂದೆ ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ತನ್ನ ಸಂಬಂಧಿ ಶಿಶುಪಾಲ ನನ್ನು ಸಂಹರಿಸಲು ತನ್ನ ಬೆರಳಿನಲ್ಲಿರುವ ಸುದರ್ಶನ ಚಕ್ರವನ್ನು ಕಳುಹಿಸಿದ. ಅದು ಹಿಂದಿರುಗುವ ಸಂದರ್ಭದಲ್ಲಿ ಬೆರಳಿಗೆ ಗಾಯವಾಗಿ ರಕ್ತ ಸೋರುತಿತ್ತು. ಅದನ್ನು ಅಲ್ಲೇ ಇದ್ದ ದ್ರೌಪದಿಯೂ ನೋಡಿ ತಕ್ಷಣ ತನ್ನ ಸೀರೆಯ ಅಂಚನ್ನು ಹೇಳಿ ತೆಗೆದು ಕೃಷ್ಣನ ಬೆರಳಿಗೆ ಕಟ್ಟಿ ರಕ್ತ ಹರಿಯುವುದನ್ನು ತಡೆದಳು. ಆಗ ಶ್ರೀ ಕೃಷ್ಣ ಪರಮಾತ್ಮನು ದ್ರೌಪದಿಗೆ ನಾನು ನಿನಗೆ ರಕ್ಷಣೆ ನೀಡುತ್ತೇನೆ ಎಂದು ಮಾತು ಕೊಟ್ಟಿದ್ದ. ಅಷ್ಟೇ ಅಲ್ಲದೆ ಮುಂದೆ ಭೂಲೋಕದಲ್ಲಿ ಯಾರು ಈ ದಿನದಂದು ತನ್ನ ಸಹೋದರಿಯರಿಂದ ನೂಲಿನ ಎಳೆಯನ್ನು ಕಟ್ಟಿಸಿಕೊಂಡು ಸಹೋದರಿಯನ್ನು ರಕ್ಷಿಸುತ್ತಾರೋ ನಾನು ಅವರನ್ನು ರಕ್ಷಿಸುತ್ತೇನೆ ಎಂದು ವರ ನೀಡಿದನು. ಶ್ರೀ ಕೃಷ್ಣ ಪರಮಾತ್ಮನು ಕೊಟ್ಟ ಮಾತಿನಂತೆ ದ್ರೌಪದಿಯ ವಸ್ತ್ರ ಹರಣವಾಗುತ್ತಿದ್ದಾಗ ರಕ್ಷಣೆಗೆ ಧಾವಿಸಿದನು.

ರಕ್ಷಾ ಬಂಧನ ಬರಿ ಒಂದು ಆಚರಣೆಯಲ್ಲ ಅದು ಸಂಬಂಧಗಳನ್ನು ಬೆಸೆಯುವ ಭರವಸೆಯ ಆಶಾಕಿರಣವನ್ನು ಮೂಡಿಸಿ ಹೆಣ್ಣಿನ ರಕ್ಷಣೆಗೆ ನಮ್ಮ ಹಿರಿಯರು ನಮಗೆ ರೂಡಿಸಿಕೊಟ್ಟ ಒಂದು ಜವಾಬ್ದಾರಿ ಕೆಲಸ. ಸಹೋದರನಾದವನು ತನ್ನ ಸಹೋದರಿಗೆ ತಾನು ಬದುಕಿರುವವರೆಗೂ ರಕ್ಷಣೆ ನೀಡುತ್ತೇನೆಂದು ಸಹೋದರನ ಶ್ರೇಯಸ್ಸಿಗೆ ತನ್ನ ಜೀವನವಿದೆ ಎಂದು ನಂಬಿ ಕಟ್ಟುವ ರಾಖಿಗೆ ಉಡುಗೊರೆ ಕೊಡುವುದಕ್ಕಿಂತ ಬೆಲೆಯೇ ಕಟ್ಟಲಾಗದ ನಂಬಿಕೆ ಎಂಬ ಉಡುಗೊರೆಯನ್ನು ರಕ್ಷಣೆ ಎಂಬ ಪಾತ್ರೆಯಲ್ಲಿಟ್ಟು ನೀಡಿದರೆ ಸಾಕು ಅದುವೇ ಬೆಲೆ ಕಟ್ಟಲಾಗದ ಸಂಬಂಧಗಳಿಗೆ ಬೆಲೆ ಬಾಳುವ ಉಡುಗೊರೆಯಾಗಿದೆ.

ಬಸವರಾಜ್ ಬಣಕಾರ್
ದ್ವಿತೀಯ ವರ್ಷ
ಪತ್ರಿಕೋದ್ಯಮ ವಿಭಾಗ ದಾವಣಗೆರೆ ವಿಶ್ವವಿದ್ಯಾನಿಲಯ ದಾವಣಗೆರೆ

Leave a Reply

Your email address will not be published. Required fields are marked *

error: Content is protected !!