ragini dwivedi; ಮತ್ತೊಮ್ಮೆ ಅಭಿಮಾನಿಗಳ ಹೃದಯಕ್ಕೆ ಲಗ್ಗೆಯಿಡಲು ಸಿದ್ಧರಾದ ರಾಗಿಣಿ ದ್ವಿವೇದಿ

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (ragini dwivedi) ಅವರು ಹೊಸ ಸಿನಿಮಾದಲ್ಲಿ ತಮ್ಮ ಝಲಕ್ ತೋರಿಸಿ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮನ ಗೆಲ್ಲಲು ಸಿದ್ಧರಾಗಿದ್ದಾರೆ. ಹೌದು ‘ಗಜರಾಮ’ ಎಂಬ ಹೊಸ ಸಿನಿಮಾದ ವಿಶೇಷ ಹಾಡಿಗೆ ರಾಗಿಣಿ ಸೊಂಟ ಬಳುಕಿಸಿದ್ದಾರೆ.

ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಮಗ ರಾಜವರ್ಧನ್ ಅವರು ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ‘ಗಜರಾಮ’ ಚಿತ್ರದಲ್ಲಿ ರಾಗಿಣಿ‌ ರಾಜವರ್ಧನ್ ಜೊತೆ ಹೆಜ್ಜೆ ಹಾಕಿದ್ದಾರೆ. ‘ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ನರಸಿಂಹಮೂರ್ತಿ ‘ಗಜರಾಮ’ ಸಿನಿಮಾನ ನಿರ್ಮಾಣ ಮಾಡುತ್ತಿದ್ದಾರೆ. ಝವೀಯರ್ ಫರ್ನಾಂಡಿಸ್ ಮಲ್ಲಿಕಾರ್ಜುನ್ ಕಾಶಿ ಸಹ ನಿರ್ಮಾಣವಿರುವ ಈ ಚಿತ್ರದ ವಿಶೇಷ ಹಾಡಿನ ಚಿತ್ರೀಕರಣ ಚಿಕ್ಕಗುಬ್ಬಿಯಲ್ಲಿ ನಡೆದಿದೆ. ಭರ್ಜರಿ ಸೆಟ್​ನಲ್ಲಿ, ಮೂಡಿ ಬಂದಿರುವ ಈ ಹಾಡಿಗೆ ಧನು ಮಾಸ್ಟರ್ ಕೊರಿಯೋಗ್ರಫಿ ಇದೆ.

teachers day; ಹೇಳಿಕೊಟ್ಟ ಪಾಠ ಇಂದಿಗೂ ಮನದಲ್ಲಿ ಅಚ್ಚಾಗಿ ಉಳಿದಿದೆ

ಪೊಲೀಸ್ ಪಾತ್ರದಲ್ಲಿ ದೀಪಕ್, ಕಬೀರ್ ಸಿಂಗ್ ಖಳನಾಯಕನ ಪಾತ್ರ ಮಾಡುತ್ತಿದ್ದಾರೆ. ರಾಜವರ್ಧನ್​ಗೆ ಜೊತೆಯಾಗಿ ತಪಸ್ವಿನಿ ಬಣ್ಣ ಹಚ್ಚಿದ್ದಾರೆ. ದುನಿಯಾ’ ಸೂರಿ, ಯೋಗರಾಜ್ ಭಟ್ ಸೇರಿದಂತೆ ಹಲವರ ಜೊತೆ ಕೆಲಸ ಮಾಡಿದ ಅನುಭವ ಹೊಂದಿರುವ ಸುನಿಲ್ ಕುಮಾರ್ ವಿ.ಎ ಈ ಸಿನಿಮಾದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!