Ration Card; ಬಿಪಿಎಲ್ ಕಾರ್ಡ್ ದಾರರಿಗೆ ಸಿಹಿಸುದ್ದಿ ನೀಡಿದ ಆಹಾರ ಇಲಾಖೆ!

ಬೆಂಗಳೂರು, ಅ.05: ಕೆಲವು ತಿಂಗಳ ಹಿಂದೆ ಆಹಾರ ಇಲಾಖೆಯು ಬಿಪಿಎಲ್ ಕಾರ್ಡ್ (Ration Card) ತಿದ್ದುಪಡಿಗೆ ತಡೆ ಹಿಡಿದಿತ್ತು. ಆದರೆ ಇದೀಗ ತಿದ್ದುಪಡಿಗೆ ಅವಕಾಶ ನೀಡಿದೆ.

ಹೆಸರು ಬದಲಾವಣೆ, ಕೇಂದ್ರ ಬದಲಾವಣೆ, ಕಾರ್ಡ್‌ ಸದಸ್ಯರ ಹೆಸರು ತೆಗೆಸುವುದು, ಸೇರಿಸುವುದು, ಕಾರ್ಡಿನ ಮುಖ್ಯಸ್ಥರ ಹೆಸರು ಬದಲಾವಣೆ ಸೇರಿದಂತೆ ಕೆಲವು ತಿದ್ದುಪಡಿಯನ್ನು ಮಾಡಿಕೊಳ್ಳಬಹುದು. ಕೆಲವು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿರುವ ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ನಿರ್ಧಾರ ತೆಗೆದುಕೊಂಡಿದೆ.

ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೆ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಈ ತಿದ್ದುಪಡಿಯು ಜಿಲ್ಲಾವಾರು ದಿನಾಂಕ ನಿಗದಿಪಡಿಸಿದ್ದು, ಮೂರು ಹಂತಗಳಲ್ಲಿ ನಡೆಯಲಿದೆ.

Right of way; ಆರನೇಕಲ್ಲು ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಮೂರು ಹಂತಗಳಲ್ಲಿ ತಿದ್ದುಪಡಿ

ಮೊದಲನೇ ಹಂತದಲ್ಲಿ ಅ. 5 ರಿಂದ 7ರ ವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, 2ನೇ ಹಂತದಲ್ಲಿ ಅ.8 ರಿಂದ ಅ.10ರ ವರೆಗೆ ಬೆಳಗಾವಿ, ಬಾಗಲಕೋಟೆ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಸೇರಿ ಒಟ್ಟು 15 ಜಿಲ್ಲೆಗಳು, 3ನೇ ಹಂತದಲ್ಲಿ ಅ.11 ರಿಂದ ಅ.13ರ ವರೆಗೆ ಕಲಬುರಗಿ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಸೇರಿ ಒಟ್ಟು ೧೪ ಜಿಲ್ಲೆಗಳಿಗೆ ಅವಕಾಶ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!