DYSP; ಅಂಗನವಾಡಿ ಟೀಚರ್ ಮಗ ಡಿಎಸ್ಪಿ ಸಂತೋಷ್ ಟ್ರಾನ್ಸ್‌ಫರ್, ಕೆಲಸ ಮಾಡಿದ ಜಾಗಕ್ಕೆ ಪುನಃ ಬಂದ ಪ್ರಶಾಂತ್ ಮನೋಳ್ಳಿ

ದಾವಣಗೆರೆ ; dysp ಮಾತು ಬೆಳ್ಳಿ, ಮೌನ ಬಂಗಾರ ಎಂಬುದು ಗಾದೆ ಮಾತು, ಆದರೆ ಇಲ್ಲೊಬ್ಬ ಅಧಿಕಾರಿ ವೌನದಿಂದಲೇ ಕಿಡಿಗೇಡಿ, ಕೊಲೆಗಾರರನ್ನು ಮಟ್ಟಹಾಕಿದ್ದು, ಎತ್ತಂಗಡಿ ಮಾಡಲಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆ ವರ್ಗಾವಣೆ ಪರ್ವ ಮುಂದುವರಿದಿದ್ದು, ಜನಪ್ರತಿನಿಧಿಗಳು ಅವರಿಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಂಡಿದ್ದಾರೆ.

ಹೌದು..ಚನ್ನಗಿರಿಯ ಡಿವೈಎಸ್ಪಿ ಡಾ.ಸಂತೋಷ್ ಬಡತನದಿಂದ ಬಂದ ಸೌಮ್ಯ ಅಧಿಕಾರಿಯಾಗಿದ್ದು, ಸದ್ಯ ಇವರನ್ನು ಸರಕಾರ ವರ್ಗಾವಣೆ ಮಾಡಿದೆ. ಇವರ ಜಾಗಕ್ಕೆ ಈ ಹಿಂದೆ ಇಲ್ಲಿಯೇ ಕಾರ್ಯನಿರ್ವಹಿಸಿದ ಪ್ರಶಾಂತ್ ಮುನೋಳ್ಳಿಯವರನ್ನು ತರಲಾಗಿದೆ. ಡಿವೈಎಸ್ಪಿ ಸಂತೋಷ್ ಬಳ್ಳಾರಿ ಜಿಲ್ಲೆಯ ಕಾನಾಹೊಸಹಳ್ಳಿಯವರಾಗಿದ್ದು, ತಾಯಿ ಅಂಗನವಾಡಿ ಟೀಚರ್ ಆಗಿದ್ದು, ಬಡತನದಲ್ಲಿ ಡಿಎಸ್ಪಿ ಸಂತೋಷರನ್ನು ಓದಿಸಿ ವೆಟನರಿ ಡಾಕ್ಟರ್ ಮಾಡಿದ್ದರು. ಅಂತೆಯೇ ಡಿಎಸ್ಪಿ ಪತ್ನಿ ಸಂತೋಷ್ ಪವಿತ್ರ ಕೂಡ ಎಂಬಿಬಿಎಸ್ ಓದಿದ್ದು, ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಅಲ್ಲದೇ ದಾವಣಗೆರೆಯಲ್ಲಿಯೇ ಕಾರ್ಯನಿರ್ವಹಿಸಿ ರೋಗಿಗಳ ಮನಸ್ಸು ಗೆದ್ದಿದ್ದಾರೆ. ಶ್ರೀಗಂಧ ಕಳ್ಳತನ, ದರೋಡೆ ಪ್ರಕರಣ, ನ್ಯಾಮತಿ ಬಳಿ ರೌಡಿ ಶೀಟರ್ ಕೊಲೆ ಪ್ರಕರಣ, ಮಾಜಿ ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ನಾಲೆಗೆ ಬಿದ್ದ ಪ್ರಕರಣ, ಅಡಕೆ ಕಳ್ಳತನ, ಸುಮಾರು 80 ಲಕ್ಷ ರೂಪಾಯಿ ರಿಕವರಿ, ಮರಳು ಮಾಫಿಯಾ, ಚನ್ನಗಿರಿಯಲ್ಲಿ ಕೋಮುಗಲಭೆ ಪ್ರಕರಣ, ಹೊನ್ನಾಳಿಯಲ್ಲಿ ಕೊಲೆ ಪ್ರಕರಣ. ಮರಳು ಮಾಫಿಯಾಗೆ ಬ್ರೇಕ್ ಹೀಗೆ ಹತ್ತಾರು ಪ್ರಕರಣಗಳನ್ನು ವೌನದಿಂದಲೇ ಭೇದಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮಾತು ಮೃದುವಾಗಿದ್ದರೂ, ಕೆಲಸ ಜನ ಅಚ್ಚುಮೆಚ್ಚಿನದ್ದಾಗಿದೆ.ಒಟ್ಟಾರೆ ಸಾಕಷ್ಟು ಪ್ರಕರಣಗಳನ್ನು ಭೇದಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಸದ್ಯ ಇವರಿಗೆ ಐಜಿ ಕಚೇರಿಯಲ್ಲಿ ಜಾಗ ತೋರಿಸಲಾಗಿದೆ.

Cricket; ವಿಶ್ವಕಪ್ ಕ್ರಿಕೆಟ್ ಪ್ರಾರಂಭ; ಪೊಲೀಸರೇ, ಹಾಸ್ಟೆಲ್ ಗಳ ಮೇಲೆ ಗಮನವಿರಲಿ

ಕೆಲಸ ಮಾಡಿದ ಜಾಗಕ್ಕೆ ಪುನಃ ಬಂದ ಪ್ರಶಾಂತ್ ಮುನೋಳ್ಳಿ ; 2020ರಲ್ಲಿ ಚನ್ನಗಿರಿ ಡಿಎಸ್ಪಿ ಕಚೇರಿ ಓಪನ್ ಆಗಿದ್ದು, ಮೊದಲ ಪೋಸ್ಟೀಂಗ್ ಆಗಿ ಪ್ರಶಾಂತ್ ಮುನೋಳ್ಳಿ ಮೊದಲ ಡಿಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಇದಾದ ಬಳಿಕ ಶಿವಮೊಗ್ಗದಲ್ಲಿ ಕೆಲಸ ಮಾಡಿದ್ದರು. ಅಲ್ಲಿಂದ ಎರಡು ಬಾರಿ ಹುನಗಂದಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೀಗ ಚನ್ನಗಿರಿಗೆ ಪುನಃ ಪೋಸ್ಟಿಂಗ್ ಮಾಡಲಾಗಿದ್ದು,ಇದರ ಹಿಂದಿನ ಕಾರಣವೇನು ಎಂಬುದಕ್ಕೆ ಉತ್ತರ ಹುಡುಕಬೇಕಾಗಿದೆ. ಅಲ್ಲದೇ ಲಿಂಗಾಯಿತ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ತೋರಿಸಿಲ್ಲ ಎಂಬ ಮಾತಿನಂತೆ ಲಿಂಗಾಯಿತ ಡಿಎಸ್ಪಿ ವರ್ಗಾವಣೆ ಮಾಡಿದ್ದು, ಅದೇ ಜಾಗಕ್ಕೆ ಲಿಂಗಾಯಿತ ಡಿಎಸ್ಪಿಯನ್ನೇ ತರಲಾಗಿದೆ.

ಬಡಾವಣೆ ಪೊಲೀಸ್ ಠಾಣೆ ಪಿಎಸ್‌ಐ ಧನಂಜಯ್ ವರ್ಗಾವಣೆ : ಬೆಂಗಳೂರಿನಿಂದ ಬಡಾವಣೆ ಪೊಲೀಸ್ ಠಾಣೆಗೆ ಪಿಐ ಧನಂಜಯ್‌ರನ್ನು ಈಗ ವರ್ಗಾವಣೆ ಮಾಡಲಾಗಿದ್ದುಘಿ, ಅವರ ಜಾಗಕ್ಕೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪಿಐ ಆಗಿದ್ದ ಮಲ್ಲಮ್ಮ ಚೌಬೆಯನ್ನು ಬಡಾವಣೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಮಲ್ಲಮ್ಮ ಚೌಬೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಉತ್ತಮ ಹೆಸರು ಮಾಡಿದ್ದರು.

ಲಿಂಗಾಯಿತ ಅಧಿಕಾರಿಗಳನ್ನು ಕಾಂಗ್ರೆಸ್ ಕಡೆಗಣಿಸಿದೆ : ದಾವಣಗೆರೆಯಲ್ಲಿ ಅಸಮಾಧಾನ‌ವ್ಯಕ್ತಪಡಿಸಿದ ಶಾಮನೂರು ಶಿವಶಂಕರಪ್ಪ

ಡಿಸಿಆರ್‌ಬಿಗೆ ನಾಗಪ್ಪ ಬಂಕಾಳಿ : ಡಿಸಿಆರ್‌ಬಿ ಕ್ರೈಂ ಬ್ರ್ಯಾಂಚ್‌ನಲ್ಲಿದ್ದ ಬಿ.ಎಸ್.ಬಸವರಾಜ್ ಗ್ರಾಮಾಂತರ ಡಿಎಸ್ಪಿ ಆಗಿದ್ದು, ಪ್ರಭಾರವಾಗಿ ಡಿಸಿಆರ್‌ಬಿ ಕ್ರೈಂ ಬ್ರಾಂಚ್‌ನಲ್ಲಿದ್ದರು. ಅವರ ಜಾಗಕ್ಕೆ ಸಿಐಡಿಯಲ್ಲಿದ್ದ ನಾಗಪ್ಪ ಬಂಕಾಳಿಯವರನ್ನು ಸರಕಾರ ನೇಮಿಸಿದೆ. ಇವರು ಈ ಹಿಂದೆ ಎಸಿಬಿ ಎಸ್ಪಿ ಜಯಪ್ರಕಾಶ್ ಅವಧಿಯಲ್ಲಿ ಡಿಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಒಟ್ಟಾರೆ ದಾವಣಗೆರೆಯಲ್ಲಿ ವರ್ಗಾವಣೆ ಪರ್ವ ಮುಂದುವರಿದಿದ್ದು, ಇನ್ನೇಷ್ಟು ಜನ ಹೊಸಬರು ಪೋಸ್ಟಿಂಗ್ ಮಾಡಿಸಿಕೊಂಡು ದಾವಣಗೆರೆಗೆ ಬರುತ್ತಾರೆ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!