ದಾವಣಗೆರೆ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾಗಲು ಕಾಂಗ್ರೆಸ್ ಕಾರಣ: ಎಸ್ ಎಸ್

ದಾವಣಗೆರೆ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾಗಲು ಕಾಂಗ್ರೆಸ್ ಕಾರಣ: ಎಸ್ ಎಸ್

ದಾವಣಗೆರೆ: ದಾವಣಗೆರೆ ನಗರವು ಮೊದಲ ಹಂತದಲ್ಲೇ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷದ ಆಡಳಿತವೇ ಕಾರಣ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ತಿಳಿಸಿದರು.
ವಾರ್ಡ್ ನಂಬರ್ 21ನೇ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಅಭಿವೃದ್ಧಿ ಕಾಮಗಾರಿ ಮತ್ತು ಸರ್ಕಾರಿ ಪ್ರೌಢಶಾಲೆಯ ನವೀಕೃತ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಾವಣಗೆರೆ ಮಹಾನಗರ ಪಾಲಿಕೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಇದ್ದುದರಿಂದ ದಾವಣಗೆರೆ ನಗರ ಮೊದಲ ಹಂತದಲ್ಲೇ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾಯಿತು. ಈ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣದಲ್ಲಿ ಅನೇಕ ಅಭಿವೃದ್ಧಿ ಜೊತೆಗೆ ಶಾಲೆಗಳಿಗೆ ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಾವಣಗೆರೆ ಸ್ಮಾರ್ಟ್‍ಸಿಟಿ ವತಿಯಿಂದ ಸರ್ಕಾರಿ ಶಾಲಾ ಕಟ್ಟಡಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಅಂದಾಜು ರೂ.4 ಕೋಟಿಗಳ ತೆಗೆದಿರಿಸಿ ಅದರಲ್ಲಿ ಇಂದು ಅಂದಾಜು ಮೊತ್ತ ರೂ.80.87 ಲಕ್ಷಗಳ ಮೊತ್ತದಲ್ಲಿ ವಾರ್ಡ್ ನಂಬರ್ 21ನೇ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 6 ಕೊಠಡಿಗಳನ್ನು ಮತ್ತು ಶೌಚಾಲಯ 1 ಯೂನಿಟ್ ಹಾಗೂ ಅಂದಾಜು ಮೊತ್ತ ರೂ.13.78 ಲಕ್ಷಗಳ ಮೊತ್ತದಲ್ಲಿ ವಾರ್ಡ್ ನಂಬರ್ 21ನೇ ಬಸಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ನವೀಕೃತಗೊಳಿಸಲಾಗಿದೆ ಎಂದು ತಿಳಿಸಿದರು.


ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಾ.ಮ.ಬಸವರಾಜಯ್ಯ ಮಾತನಾಡಿ ಈ ಶಾಲೆ 1957ರಲ್ಲಿ ಆರಂಭವಾಗಿದ್ದು, ಬಸಾಪುರ ಅನೇಕರು ಅಭ್ಯಸಿರುವ ಶಾಲೆಯನ್ನು ಶಾಮನೂರು ಶಿವಶಂಕರಪ್ಪನವರು ಆಧುನಿಕ ಕೊಠಡಿಗಳನ್ನು ನಿರ್ಮಿಸುವ ಮೂಲಕ ಗ್ರಾಮಕ್ಕೆ ಕೊಡುಗೆ ನೀಡಿದ್ದು, ಇದನ್ನು ಗ್ರಾಮದ ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಂಬಣ್ಣ ಮಾತನಾಡಿ ಈ ಗ್ರಾಮದ ಜನರು ಪಟ್ಟಣದ ಖಾಸಗಿ ಶಾಲೆಗಳಿಗೆ ಮಾರುಹೋಗದೇ ಸರ್ಕಾರದಿಂದ ಮಕ್ಕಳಿಗೆ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಶಿಕ್ಷಣವನ್ನು ಕೊಡಿಸಿ ಎಂದು ಮನವಿ ಮಾಡಿದರು.
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಗೌಡ್ರ ರಾಜಶೇಖರ್ ಮತ್ತು ಎಪಿಎಂಸಿ ಮಾಜಿ ಸದಸ್ಯ ಎಂ.ಎಸ್.ಕೊಟ್ರಯ್ಯನವರು ಮಾತನಾಡಿ ಬಸಾಪುರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿರುವ ಶಾಮನೂರು ಶಿವಶಂಕರಪ್ಪನವರು ಮತ್ತೊಮ್ಮೆ ಆಯ್ಕೆಯಾಗಲಿ.ಗ್ರಾಮಸ್ಥರು ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಳೂರ್ ಮಹೇಶ್ವರಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಶಿವಲೀಲಾ ಕೊಟ್ರಯ್ಯ, ಬಿ.ಎಸ್. ಮರುಳಪ್ಪ, ಬಿ.ಎಸ್.ಸಿದ್ದನಗೌಡರು, ಬಿ.ಕೆ.ದೇವೇಂದ್ರಪ್ಪ, ಕೆ.ಸಿ.ಲಿಂಗರಾಜ್, ಬಿ.ರಮೇಶ್, ನಾಗವೇಣಿ, ವಿಜಯ್ ಕುಮಾರ್, ನವೀನ್, ತಿಪ್ಪೇಸ್ವಾಮಿ, ನಾಗೇಂದ್ರ ಚಾರ್, ಎನ್.ಎಂ.ಕೊಟ್ರಯ್ಯ, ಶೋಭಾ ರಾಣಿ, ಯಶೋಧ, ರೂಪ, ಶೌಕತ ಅಲಿ, ಸ್ಮಾರ್ಟ್‍ಸಿಟಿ ನಿರ್ದೇಶಕ ಎಂ.ನಾಗರಾಜ್, ಹರೀಶ್ ಕೆ.ಎಲ್.ಬಸಾಪುರ, ಮಲ್ಲಿಕಾರ್ಜುನ್, ಎಚ್.ಮಹೇಂದ್ರ, ಗಣೇಶ್, ಎಸ್‍ಡಿಎಂಸಿ ಸದಸ್ಯರು, ವಿಶ್ವಬಂಧು ಯುವಕರ ಸಂಘ, ಶಾಲಾ ಶಿಕ್ಷಕ ವೃಂದ ಹಾಗೂ ಮಕ್ಕಳು, ಶಿಕ್ಷಣ  ಪ್ರೋತ್ಸಾಹಕರು  ಹಾಗೂ ಬಸಾಪುರ ಗ್ರಾಮಸ್ಥರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕ ವರ್ಗದಿಂದ ಆರಂಭವಾದ ಈ ಕಾರ್ಯಕ್ರಮಕ್ಕೆ ಮುಖ್ಯ ಶಿಕ್ಷಕ ಸೋಮಶೇಖರಪ್ಪ ಸ್ವಾಗತಿಸಿದರು, ಶಿಕ್ಷಕಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರವಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!